Top

ರಾಹುಲ್ ಗಾಂಧಿ ಹುಚ್ಚ ಎಂದ ಬಿಜೆಪಿ ಶಾಸಕ ಯತ್ನಾಳ್

ರಾಹುಲ್ ಗಾಂಧಿ ಹುಚ್ಚ ಎಂದ ಬಿಜೆಪಿ ಶಾಸಕ ಯತ್ನಾಳ್
X

ರಾಹುಲ್ ಗಾಂಧಿನೇ ಒಬ್ಬ ದೊಡ್ಡ ಹುಚ್ಚ. ಹುಚ್ಚರ ಪಾರ್ಟಿಯಲ್ಲಿ ಹುಚ್ಚರೇ ಇರುತ್ತಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಬಾಗಲಕೋಟೆಯಲ್ಲಿ ವಿಜಯಪುರದಲ್ಲಿ ಎಂಎಲ್ ಸಿ ಚುನಾವಣಾ ಪ್ರಚಾರ ಸಭೆಯಲ್ಲಿ ಶಾಸಕ ಬಸವರಾಜ ಪಾಟೀಲ ಯತ್ನಾಳ ಈ ಹೇಳಿಕೆ ನೀಡಿದ್ದಾರೆ.

ರಸ್ತೆಯಲ್ಲಿ ಗೋ ಮಾಂಸ ತಿಂದಿದ್ದಕ್ಕೆ ಕೇರಳದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಯಿತು ಎಂಬ ಹೇಳಿಕೆ ನೀಡಿ ಯತ್ನಾಳ್ ವಿವಾದಕ್ಕೆ ಸಿಲುಕಿದ್ದರು. ಈ ಹೇಳಿಕೆಯನ್ನು ಖಂಡಿಸಿದ್ದ ಕಾಂಗ್ರೆಸ್ ಮುಖಂಡರು, ಯತ್ನಾಳ್ ಅಡ್ಡಾದಿಡ್ಡಿ ಮಾತಾಡ್ತಾನಾ, ಹುಚ್ಚ ಅದಾನ ಅಂತ ಹೇಳಿದ್ದರು.

ಕಾಂಗ್ರೆಸ್ ಮುಖಂಡರ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಯತ್ನಾಳ್, ರಾಹುಲ್ ಗಾಂಧಿ ಮಾನಸ ಸರೋವರಕ್ಕೆ ಹೊರಟ್ಟಿದ್ದಾರೆ. ರಾಹುಲ್ ಗೆ ಒಮ್ಮಿಂದೊಮ್ಮಲೆ ಹಿಂದು ದೇವರ ಮೇಲೆ ಭಕ್ತಿ ಬಂದಿದೆ. ಇಷ್ಟು ದಿನ ಹಿಂದು ದೇವಸ್ಥಾನಗಳಿಗೆ ಕಾಂಗ್ರೆಸ್ಸಿಗರು ಹೋಗ್ತಿದ್ರಾ? ಹಿಂದು ದೇವಸ್ಥಾನಕ್ಕೆ ಹೋದರೆ ಕೋಮುವಾದಿ ಅಂತ ಪಟ್ಟ ಕಟ್ಟುತ್ತಿದ್ದರು ಎಂದರು ಹೇಳಿದರು.

ಈ ದೇಶದಲ್ಲಿ ಜಗತ್ತಿನ ಎಲ್ಲ ಶಿವನ ಮಂದಿರಕ್ಕೆ ಹೋಗಿದ್ದು ನರೇಂದ್ರ ಮೋದಿ ಮಾತ್ರ. ರಾಹುಲ್ ಗಾಂಧಿನಾ ಈ ದೇಶದ ಪ್ರಧಾನಿ ಮಾಡ್ತೀರಾ? ಆ ಪುಣ್ಯಾತ್ಮ ಏನು ಮಾಡ್ತಾನೋ, ಏನು ಮಾತಾಡ್ತಾನೋ? ಲೋಕಸಭೆ ಅಧಿವೇಶನ ನಡೆದಾಗ ಭಾಷಣ ಮಾಡಿ, ಪ್ರಧಾನಿ ಅಪ್ಪಿಕೊಳ್ತಾನೆ. ಅವರಿಗೆ ಸ್ವಲ್ಪ(ತಲೆ) ಸರಿದಂತಿದೆ ಎಂದು ಯತ್ನಾಳ್ ಆರೋಪಿಸಿದರು.

Next Story

RELATED STORIES