Top

ಎಡವಿದ ಭಾರತ: ಇಂಗ್ಲೆಂಡ್​ಗೆ ಟೆಸ್ಟ್ ಸರಣಿ

ಎಡವಿದ ಭಾರತ: ಇಂಗ್ಲೆಂಡ್​ಗೆ ಟೆಸ್ಟ್ ಸರಣಿ
X

ನಾಯಕ ವಿರಾಟ್ ಕೊಹ್ಲಿ ಮತ್ತು ಅಜಿಂಕ್ಯ ರಹಾನೆ ಅವರ ಹೋರಾಟದ ಹೊರತಾಗಿಯೂ ಭಾರತ ತಂಡ 60 ರನ್​ಗಳಿಂದ ಸೋಲುಂಡಿದೆ. ಇದರೊಂದಿಗೆ 5 ಪಂದ್ಯಗಳ ಟೆಸ್ಟ್ ಸರಣಿಯನ್ನು ಇಂಗ್ಲೆಂಡ್ ಗೆದ್ದುಕೊಂಡಿದೆ.

ಸೌಥ್ ಹ್ಯಾಂಪ್ಟನ್​ನಲ್ಲಿ ನಡೆದ ಪಂದ್ಯದಲ್ಲಿ ಗೆಲ್ಲಲು 245 ರನ್​ಗಳ ಗುರಿ ಪಡೆದಿದ್ದ ಭಾರತ ತಂಡ ನಾಲ್ಕನೇ ದಿನವಾದ ಭಾನುವಾರ 184 ರನ್​ಗಳಿಗೆ ಆಲೌಟಾಯಿತು.

ಮೊದಲ ಇನಿಂಗ್ಸ್ ನಲ್ಲಿ ಮುನ್ನಡೆ ಪಡೆದಿದ್ದ ಭಾರತ ತಂಡ ಎರಡನೇ ಇನಿಂಗ್ಸ್ ನಲ್ಲಿ ಇಂಗ್ಲೆಂಡ್ ತಂಡವನ್ನು 271 ರನ್ ಗಳಿಗೆ ಕಟ್ಟಿ ಹಾಕಿತ್ತು. ಆದರೆ ಇಂಗ್ಲೆಂಡ್ ಬೌಲರ್​ಗಳು ತಿರುಗೇಟು ನೀಡುವ ಮೂಲಕ ರೋಚಕ ಗೆಲುವು ಸಾಧಿಸಿದರು.

ಭಾರತದ ಪರ ವಿರಾಟ್ ಕೊಹ್ಲಿ 58 ಮತ್ತು ಅಜಿಂಕ್ಯ ರಹಾನೆ 51 ರನ್ ಬಾರಿಸಿ ವೈಯಕ್ತಿಕ ಅರ್ಧ ಶತಕ ಬಾರಿಸಿದರು. ಇವರಿಬ್ಬರು ಔಟಾಗುತ್ತಿದ್ದಂತೆ ತಂಡ ನಾಟಕೀಯ ಕುಸಿತ ಅನುಭವಿಸಿ ಸೋಲಿನ ಹಾದಿ ಹಿಡಿಯಿತು.

  • ಸಂಕ್ಷಿಪ್ತ ಸ್ಕೋರ್
  • ಇಂಗ್ಲೆಂಡ್ 246 ಮತ್ತು 271
  • ಭಾರತ 273 ಮತ್ತು 2ನೇ ಇನಿಂಗ್ಸ್ 184 (ಕೊಹ್ಲಿ 58, ರಹಾನೆ 51, ಅಶ್ವಿನ್ 25, ಮೊಯಿನ್ ಅಲಿ 71/4, ಆ್ಯಂಡರ್ಸನ್ 33/2, ಸ್ಟೋಕ್ಸ್ 34/2).

Next Story

RELATED STORIES