Top

ಯುರೋಪ್ ಪ್ರವಾಸ ಕೈಗೊಳ್ಳಲಿರುವ ಸಿದ್ದರಾಮಯ್ಯ

ಯುರೋಪ್ ಪ್ರವಾಸ ಕೈಗೊಳ್ಳಲಿರುವ ಸಿದ್ದರಾಮಯ್ಯ
X

ಬೆಂಗಳೂರು: ನಾಳೆಯಿಂದ ಮಾಜಿ ಸಿಎಂ ಸಿದ್ದರಾಮಯ್ಯ ಯುರೋಪ್ ಪ್ರವಾಸ ಹೊರಟಿದ್ದಾರೆ. ಈ ಬಗ್ಗೆ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ನಾಳೆ ಬೆಳಗ್ಗೆ 8 ಗಂಟೆಗೆ ಹೊರಡುತಿದ್ದೇವೆ. ರಷ್ಯಾ, ಇಂಗ್ಲೆಂಡ್, ಜರ್ಮನಿ, ಪ್ಯಾರಿಸ್, ಸ್ಕಾಟ್ಲೆಂಡ್‌ಗೆ ಪ್ರವಾಸ ಹೊರಟಿದ್ದೇವೆ. ನಾಲ್ಕು ಜನ ಪ್ರವಾಸಕ್ಕೆ ಹೊರಟಿದ್ದು, ಶಾಸಕರು ಯಾರೂ ಪ್ರವಾಸಕ್ಕೆ ಬರುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ನಾನು, ನನ್ನ ಮಗ ಯತೀಂದ್ರ, ಗೋವಿಂದರಾಜ್ ಮತ್ತು ಅವರ ಮಗ ಪ್ರವಾಸ ಹೊರಟಿದ್ದು, 15 ದಿನ ಪ್ರವಾಸ ಮುಗಿಸಿ ಹೊರಡಲಿದ್ದಾರೆ.

ಇನ್ನು ಬೆಳಗಾವಿ ಕಾಂಗ್ರೆಸ್ ನಾಯಕರ ಸಂಘರ್ಷ ಹಿನ್ನೆಲೆ, ಸಂಘರ್ಷ ಪರಿಹರಿಸುವ ಹೊಣೆಗಾರಿಕೆಯನ್ನು ಸಿದ್ದರಾಮಯ್ಯ ಹೊತ್ತಿದ್ದಾರೆ. ಈ ಬಗ್ಗೆ ಸಚಿವ ರಮೇಶ್ ಜಾರಕಿಹೊಳಿಯನ್ನು ತಮ್ಮ ಕಾವೇರಿ ನಿವಾಸಕ್ಕೆ ಕರೆಸಿಕೊಂಡು ಚರ್ಚಿಸಿದ ಸಿದ್ದರಾಮಯ್ಯ, ಹೆಬ್ಬಾಳ್ಕರ್ ಜೊತೆ ನಾನು ಮಾತನಾಡುತ್ತೇನೆ. ನಿಮ್ಮ ಮಾತು ಮೀರಿಹೋಗದಂತೆ ತಿಳಿಹೇಳುತ್ತೇನೆ. ಚುನಾವಣೆ ಹೊಸ್ತಿಲಲ್ಲಿ ಸಂಘರ್ಷ ಬೇಡ. ಸಮಸ್ಯೆ ಕುರಿತು ಮಾತಾಡೋಣ. ನಾನು ಯೂರೋಪ್ ಹೋಗಿ ಬರ್ತೇನೆ. ಅಲ್ಲಿಯವರೆಗೆ ಯಾವುದೇ ಸಮಸ್ಯೆ ಮಾಡಿಕೊಳ್ಳಬೇಡಿ ಎಂದು ಕಿವಿಮಾತು ಹೇಳಿದ್ದಾರೆ.

ಸಿದ್ದರಾಮಯ್ಯ ಮಾತಿಗೆ ಮೊದಲು ಒಪ್ಪದ ರಮೇಶ್, ಬೆಳಗಾವಿ ಜಿಲ್ಲಾ ವಿಚಾರದಲ್ಲಿ ಯಾರೂ ಮೂಗುತೂರಿಸುವುದು ಬೇಡ. ನಮ್ಮ ಜಿಲ್ಲೆ ಸಮಸ್ಯೆ ನಾವೇ ಬಗೆಹರಿಸಿಕೊಳ್ತೇವೆ. ಮೂರನೇಯವರು ತಲೆ ಹಾಕುವುದು ಸರಿಯಲ್ಲ ಎಂದು ಮನವಿ ಮಾಡಿದ್ದಾರೆ. ಈ ವೇಳೆ ಎಲ್ಲ ಸರಿಹೋಗಲಿದೆ. ಈಗ ಸಂದರ್ಭ ಸರಿಯಲ್ಲ ಸ್ವಲ್ಪ ತಾಳ್ಮೆವಹಿಸಿ ಎಂದು ಸಿದ್ದರಾಮಯ್ಯ ಸಮಾಧಾನ ಮಾಡಿದ್ದಾರೆ.

Next Story

RELATED STORIES