Top

ಲೋಕಸಭಾ ಚುನಾವಣೆಗೆ ಸಿದ್ಧತೆ ಆರಂಭಿಸಿದ ಕಾಂಗ್ರೆಸ್

ಲೋಕಸಭಾ ಚುನಾವಣೆಗೆ ಸಿದ್ಧತೆ ಆರಂಭಿಸಿದ ಕಾಂಗ್ರೆಸ್
X

ಲೋಕಸಭಾ ಚುನಾವಣೆಯನ್ನ ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್ ನಾಯಕರು ಈಗಿನಿಂದಲೇ ಸಿದ್ಧತೆ ಆರಂಬಿಸಿದ್ದಾರೆ. ಇಂದು ಮತ್ತು ನಾಳೆ ಲೋಕಸಭಾ ಕ್ಷೇತ್ರವಾರು ಮುಖಂಡರ ಸಭೆಯನ್ನ ನಡೆಸ್ತಿದ್ದಾರೆ. ಚುನಾವಣೆಗಾಗಿ ಪಕ್ಷ ಸಂಘಟನೆಗೆ ಹೆಚ್ಚಿನ ಚುರುಕು ನೀಡಿದ್ದಾರೆ.

ಮುಂಬರುವ ಲೋಕಸಭಾ ಚುನಾವಣೆಗೆ ಕೈಪಡೆ ಈಗಿನಿಂದಲೇ ಸಿದ್ಧತೆ ಆರಂಭಿಸಿದೆ. ಶತಾಯಗತಾಯ ಹೆಚ್ಚು ಸ್ಥಾನಗಳನ್ನ ಗೆಲ್ಲಿಸಿಕೊಳ್ಳಬೇಕೆಂಬ ಗುರಿ ಹೊಂದಿರೋ ಕಾಂಗ್ರೆಸ್, ರಾಜ್ಯದ ಎಲ್ಲಾ ಲೋಕಸಭಾ ಕ್ಷೇತ್ರಗಳ ವಸ್ತುಸ್ಥಿತಿ ಅರಿಯಲು ಮುಂದಾಗಿದೆ.

ಹಾಗಾಗಿಯೇ ರಾಜ್ಯ ಉಸ್ತುವಾರಿ ವೇಣುಗೋಪಾಲ್, ಮಾಜಿ ಸಿಎಂ ಸಿದ್ದರಾಮಯ್ಯ,ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಇಂದಿನಿಂದ ಎರಡು ದಿನಗಳ ಕಾಲ ಜಿಲ್ಲಾವಾರು ಮುಖಂಡರ ಸಭೆಯನ್ನ ನಡೆಸಲಾಗ್ತಿದೆ..ಜಿಲ್ಲಾವಾರು ಮುಖಂಡರಿಂದ ಸ್ಥಳೀಯ ಮಟ್ಡದಲ್ಲಿನ ವಾತಾವರಣ,ಅಭ್ಯರ್ಥಿಯ ಆಯ್ಕೆ,ಸಿದ್ಧತೆ ಕುರಿತು ಅಭಿಪ್ರಾಯಗಳನ್ನ ಸಂಗ್ರಹಿಸಲಾಗುತ್ತಿದೆ.

ಮೊದಲಿಗೆ ಬಳ್ಳಾರಿ ಜಿಲ್ಲೆಯ ಶಾಸಕರು,ಎಂಎಲ್ ಸಿಗಳು,ಜಿಲ್ಲಾಧ್ಯಕ್ಷರ ಸಭೆಯನ್ನ ನಡೆಸಲಾಯ್ತು... ಬಳಿಕ ಕೊಪ್ಪಳ, ರಾಯಚೂರು, ಕಲ್ಬುರ್ಗಿ ಜಿಲ್ಲೆ ಮುಖಂಡರ ಜೊತೆ ಚರ್ಚೆಯನ್ನೂ ನಡೆಸಲಾಯ್ತು..ಬಳ್ಳಾರಿ ಜಿಲ್ಲೆಗೆ ಸಂಬಂಧಿಸಿದಂತೆ ಶಾಸಕ ನಾಗೇಂದ್ರ ಸಹೋದರ ಪ್ರಸಾದ್ ಗೆ ಟಿಕೆಟ್ ನೀಡುವಂತೆ ಮನವಿ ಮಾಡಲಾಯ್ತು.

ಇನ್ನು ಸಂಜೆ ನಡೆದ ಬೀದರ್ ಜಿಲ್ಲಾ ಮುಖಂಡರ ಸಭೆಯಲ್ಲಿ ಸಿದ್ಧತೆ,ಅಭ್ಯರ್ಥಿ ಆಯ್ಕೆ ಬಗ್ಗೆ ಸಾಕಷ್ಟು ಚರ್ಚೆಯಾಯ್ತು..ಆದರೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸ್ಪರ್ಧೆಯ ಬಗ್ಗೆ ಪ್ರಸ್ತಾಪವೇ ಆಗಲಿಲ್ಲ..ಯಾಕಂದ್ರೆ ಈ ಮೊದಲು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ರಾಹುಲ್ ಬೀದರ್ ನಲ್ಲಿ ಸ್ಪರ್ಧಿಸುವಂತೆ ಮನವಿ ಮಾಡ್ತೇವೆ ಅಂತ ಹೇಳಿದ್ದರು..ಜೊತೆಗೆ ಹಿರಿಯ ನಾಯಕರ ಸಭೆಯಲ್ಲಿ ಪ್ರಸ್ತಾಪ ಮಾಡುತ್ತೇವೆ ಎಂದಿದ್ರು..ಆದ್ರೆ ಅದ್ಯಾವುದೂ ಆಗಲೇ ಇಲ್ಲ.

ಧರ್ಮಸಿಂಗ್ ಸ್ಪರ್ಧಿಸುತ್ತಿದ್ದ ಕ್ಷೇತ್ರವಾದ್ದರಿಂದ ಅವರ ಕುಟುಂಬದವರಿಗೆ ಕೊಟ್ಡರೆ ಒಳ್ಳೆಯದು ಎಂಬ ಮನವಿಯೂ ವ್ಯಕ್ತವಾಯ್ತು..ಜೊತೆಗೆ ಲಿಂಗಾಯತ ಸಮುದಾಯ ಹೆಚ್ಚಿರೋದ್ರಿಂದ ಲಿಂಗಾಯತ ಸಮುದಾಯದವರಿಗೆ ಕೊಟ್ಟರೆ ಗೆಲ್ಲಬಹುದೆಂಬ ಅನಿಸಿಕೆಯನ್ನೂ ಹಲವರು ವ್ಯಕ್ತಪಡಿಸಿದ್ರು..ಆದ್ರೆ ಸಭೆಯ ಬಳಿಕ ಮಾತನಾಡಿದ ಅಶೋಕ್ ಖೇಣಿ ನನಗೆ ಕೊಟ್ಟರೆ ಗೆದ್ದು ತೋರಿಸ್ತೇನೆ ಅಂತ ಹೇಳಿದ್ದಾರೆ.

ಲೋಕಸಭಾ ಕ್ಷೇತ್ರಗಳಲ್ಲಿ ಪಕ್ಷದ ವಸ್ತುಸ್ಥಿತಿ ಹೇಗಿದೆ? ಆಕಾಂಕ್ಷಿಗಳು ಯಾರು, ಜಿಲ್ಲೆಗಳಲ್ಲಿ ಗೊಂದಲಗಳು ಏನಾದರೂ ಇದೆಯಾ ಎಂಬುದರ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಯಿತು.ಮುಸುಕಿನ ಗುದ್ದಾಟಕ್ಕೆ ಅವಕಾಶ ನೀಡಬೇಡಿ, ಯಾವುದೇ ಗೊಂದಲಗಳಿದ್ದರೆ ಮೊದಲು ಬಗೆಹರಿಸಿಕೊಳ್ಳಿ ಎಂದು ಎಚ್ಚರಿಕೆ ನೀಡಿದರು.

ಬಳ್ಳಾರಿ ಆನಂದ್ ಸಿಂಗ್ ಹಾಗೂ ಸಂತೋಷ್ ಲಾಡ್ ಗೈರಿನ ಬಗ್ಗೆ ಡಿಕೆಶಿ ಅಸಮಾಧಾನವನ್ನ ಹೊರ ಹಾಕಿದರು. ಇನ್ನು ಬೆಂಗಳೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಗಳ ಮುಖಂಡರ ಸಭೆಯನ್ನೂ ನಡೆಸಿ ಸಲಹೆ, ಸೂಚನೆ ನೀಡಲಾಯಿತು.

Next Story

RELATED STORIES