ಏಷ್ಯಾಕಪ್ನಲ್ಲಿ ಅತೀ ಹೆಚ್ಚು ಪದಕ ಗೆದ್ದ ಭಾರತ ದಾಖಲೆ

ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತ ಒಟ್ಟಾರೆ 67 ಪದಕಗಳನ್ನು ಮುಡಿಗೇರಿಸಿಕೊಳ್ಳುವ ಮೂಲಕ ನೂತನ ದಾಖಲೆ ಮಾಡಿದೆ.
ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ 18ನೇ ಏಷ್ಯಾಗೇಮ್ಸ್ನಲ್ಲಿ ಭಾರತದ ಕ್ರೀಡಾ ಪಟುಗಳು ಭರ್ಜರಿ ಪ್ರದರ್ಶನ ನೀಡಿದೆ. ಕ್ರೀಡಾಕೂಟದ ಆರಂಭದಿಂದಲೂ ಅಚ್ಚರಿಯ ಸಾಧನೆಗಳನ್ನ ಮಾಡಿರುವ ಭಾರತದ ಅಥ್ಲೀಟ್ಗಳು ಕಳೆದ 14 ದಿನಗಳಿಂದ ಪದಕಗಳ ಗೊಂಚಲು ಬಾಚಿ ಅಚ್ಚರಿಯ ಫಲಿತಾಂಶಗಳನ್ನ ಕೊಟ್ಟು ಗಮನ ಸೆಳೆದಿದ್ದಾರೆ.
ಬರೋಬ್ಬರಿ 67 ವರ್ಷಗಳ ನಂತ್ರ ಭಾರತದ ಕ್ರೀಡಾ ಪಟುಗಳು 15 ಚಿನ್ನ ಗೆದ್ರೆ, 8 ವರ್ಷಗಳ ಬಳಿಕ ಅತೀ ಹೆಚ್ಚು ಪದಕಗಳನ್ನ ಪಡೆದ ದಾಖಲೆ ಮಾಡಿದೆ. ಕ್ರೀಡಾಕೂಟ ಇನ್ನು ಒಂದು ದಿನ ಬಾಕಿ ಇದ್ದು ಭಾರತ ಈಗಾಗಲೇ 15 ಸ್ವರ್ಣ, 23 ರಜತ, 29 ಕಂಚು ಪಡೆದು ಪದಕದ ಪಟ್ಟಿಯಲ್ಲಿ 8ನೇ ಸ್ಥಾನಗಳಿಸಿದೆ.
ಏಷ್ಯನ್ ಗೇಮ್ಸ್ನಲ್ಲಿ ಭಾರತ ಹಿಂದೆದೂ ತೋರದ ಸಾಧನೆಯನ್ನು ಈ ಬಾರಿ ತೋರಿಸಿದೆ. 2010ರಲ್ಲಿ ಒಟ್ಟು 65 ಪದಕಗಳು ಭಾರತದ ಪಾಲಾಗಿದ್ದವು. ಈ ಸಾಧನೆ ಭಾರತದ ಸರ್ವಶ್ರೇಷ್ಠ ಸಾಧನೆಯಾಗಿತ್ತು. ಅದಾದ ನಂತರ ಈ ವರ್ಷವೇ ಭಾರತ ಇಷ್ಟೊಂದು ಪದಕಗಳನ್ನು ಗೆದ್ದುಕೊಂಡಿರುವುದು.
1951ರಲ್ಲಿ ದೆಹಲಿಯಲ್ಲಿ ನಡೆದ ಚೊಚ್ಚಲ ಕ್ರೀಡಾಕೂಟದಲ್ಲಿ ಭಾರತ ಅಥ್ಲೆಟಿಕ್ಸ್ನಲ್ಲಿ 10 ಚಿನ್ನ ಸೇರಿದಂತೆ 30 ಪದಕಗಳನ್ನು ಪಡೆದು ಐತಿಹಾಸಿಕ ಸಾಧನೆ ಮಾಡಿತ್ತು. 1982ರಲ್ಲಿ ನಡೆದ ಕೂಟದಲ್ಲಿ 4 ಚಿನ್ನ ಸೇರಿ 20 ಪದಕ ಜಯಿಸಿದ್ದು ಇದುವರೆಗಿನ ಶ್ರೇಷ್ಠ ಸಾಧನೆಯಾಗಿತ್ತು. ಇನ್ನು ಅಥ್ಲೆಟಿಕ್ಸ್ನಲ್ಲಿ ಈ ಬಾರಿ ಭಾರತೀಯರು ಪ್ರಾಬಲ್ಯ ಮರೆದಿದ್ದಾರೆ 7 ಚಿನ್ನ, 10 ಬೆಳ್ಳಿ ಹಾಗೂ 2 ಕಂಚು ಸೇರಿ ಒಟ್ಟು 19 ಪದಕಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡಿದ್ದಾರೆ.
ಇಂಡೋನೇಷ್ಯಾದ ಏಷ್ಯನ್ ಗೇಮ್ಸ್ ಕ್ರೀಡಾಕೂಟಲ್ಲಿ ದಾಖಲೆಯ ಪದಕಗಳನ್ನ ಗೆದ್ದಿರುವ ಭಾರತ ಅಥ್ಲೀಟ್ಗಳಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ. ಸ್ವತಃ ಪ್ರಧಾನಿ ನರೇಂದ್ರ ಮೋದಿ ಅತ್ಲೀಟ್ಗಳಿಗೆ ಶುಭಾಶಯ ಕೋರಿದ್ದಾರೆ.
2010ರಲ್ಲಿ ಚೀನಾದಲ್ಲಿ ನಡೆದ ಏಷ್ಯನ್ ಗೇಮ್ಸ್ ನಲ್ಲಿ 14 ಬಂಗಾರ, 17 ಬೆಳ್ಳಿ ಹಾಗೂ 34 ಕಂಚು ಭಾರತ ಮತ್ತೆ ಪರಾಕ್ರಮ ಪರಾಕ್ರಮ ಮೆರೆದು ಅತಿ ಹೆಚ್ಚು ಪದಕಗಳನ್ನ ಗೆದ್ದ ಸಾಧನೆ ಮಾಡಿತ್ತು. ಇದೀಗ 2018ರ ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಅಥ್ಲೀಟ್ಗಳು 2010ರ ದಾಖಲೆಗಳನ್ನ ಅಳಿಸಿ ಹಾಕಿ ಹೊಸ ಇತಿಹಾಸ ಬರೆದಿದ್ದಾರೆ.