Top

4ನೇ ಟೆಸ್ಟ್​: ಭಾರತಕ್ಕೆ 245 ರನ್ ಗುರಿ

4ನೇ ಟೆಸ್ಟ್​: ಭಾರತಕ್ಕೆ 245 ರನ್ ಗುರಿ
X

ಬಾಲಂಗೋಚಿಗಳು ಹೆಚ್ಚು ಬಾಲ ಬಿಚ್ಚದಂತೆ ಭಾರತೀಯ ಬೌಲರ್​ಗಳು ನೋಡಿಕೊಂಡರು. ಈ ಮೂಲಕ ಭಾರತ ನಾಲ್ಕನೇ ಟೆಸ್ಟ್ ಪಂದ್ಯ ಗೆದ್ದು ಸರಣಿಯಲ್ಲಿ ಸಮಬಲ ಸಾಧಿಸಬೇಕಾದರೆ 245 ರನ್​ಗಳ ಸ್ಪರ್ಧಾತ್ಮಕ ಗುರಿ ತಲುಪಬೇಕಿದೆ.

ಪಂದ್ಯದ ನಾಲ್ಕನೇ ದಿನವಾದ ಭಾನುವಾರ 8 ವಿಕೆಟ್​ ಗೆ 260 ರನ್​ಗಳಿಂದ ಎರಡನೇ ಇನಿಂಗ್ಸ್ ಮುಂದುವರಿಸಿದ ಇಂಗ್ಲೆಂಡ್ ತಂಡ 96.1 ಓವರ್ ಗಳಲ್ಲಿ 271 ರನ್ ಗಳಿಗೆ ಆಲೌಟಾಯಿತು.

ಮೊದಲ ಇನಿಂಗ್ಸ್​ನಲ್ಲಿ 27 ರನ್​ಗಳ ಅಲ್ಪ ಮುನ್ನಡೆ ಸಾಧಿಸಿದ್ದ ಭಾರತ ತಂಡ ಇದೀಗ ಗೆಲ್ಲಲು 245 ರನ್ ಗಳಿಸಬೇಕಿದೆ. ಈಗಾಗಲೇ 3ನೇ ಟೆಸ್ಟ್ ಗೆದ್ದು, ಆತ್ಮವಿಶ್ವಾಸದಲ್ಲಿ ಬೀಗುತ್ತಿರುವ ಭಾರತ ಈ ಪಂದ್ಯವನ್ನು ಗೆಲ್ಲುವುದೇ ಎಂಬುದು ಕುತೂಹಲ ಮೂಡಿಸಿದ್ದು, ಸುಮಾರು 2 ದಿನಗಳ ಆಟ ಬಾಕಿ ಉಳಿದಿದೆ.

  • ಸಂಕ್ಷಿಪ್ತ ಸ್ಕೋರ್
  • ಇಂಗ್ಲೆಂಡ್ ಮೊದಲ ಇನಿಂಗ್ಸ್ 246 ಮತ್ತು 271 (ಕರನ್ 46, ರಶೀದ್ 11, ಶಮಿ 57/4).
  • ಭಾರತ ಮೊದಲ ಇನಿಂಗ್ಸ್ 273

Next Story

RELATED STORIES