Top

ಹೊಸ ಸಂಶೋಧನೆಗಿಳಿದ ಯದುವಂಶದ ಸೊಸೆ..!

ಹೊಸ ಸಂಶೋಧನೆಗಿಳಿದ ಯದುವಂಶದ ಸೊಸೆ..!
X

ಮೈಸೂರು: ಮೈಸೂರಿನ ಯದುವಂಶದ ಸೊಸೆ ತ್ರಿಷಿಕಾ ಕುಮಾರಿ ಒಡೆಯರ್ ಇಷ್ಟು ದಿನ ಅಮ್ಮನ ಜವಾಬ್ದಾರಿ ಹೊತ್ತು, ಮಗುವಿನ ಲಾಲನೆ ಪಾಲನೆಯಲ್ಲಿ ಬ್ಯುಸಿ ಇದ್ದರು. ಇದೀಗ ಅವರು ಹೊಸ ಸಂಶೋಧನೆಗಿಳಿದಿದ್ದಾರೆ.

ಬೆಂಗಳೂರಿನ ಕ್ರೈಸ್ಟ್ ಕಾಲೇಜಿನಲ್ಲಿ ಎಂಬಿಎ ಪದವಿ ಪಡೆದಿರೋ ತ್ರಿಷಿಕಾ, ಆದಿವಾಸಿ ಮಕ್ಕಳ ಬಗ್ಗೆ ಸಂಶೋಧನೆ ನಡೆಸುತ್ತಿದ್ದು, ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳ ಕುರಿತು ಪಿಹೆಚ್‌ಡಿ ಮಾಡಲು ನಿರ್ಧಾರ ಮಾಡಿದ್ದಾರೆ. ಈಗಾಗಲೇ ಜಿಲ್ಲೆಯ ಸರ್ಕಾರಿ ಶಾಲೆಗಳ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಕಲೆಹಾಕಿರೋ ತ್ರಿಷಿಕಾ ಕುಮಾರಿ, ಬುಡಕಟ್ಟು ಮಕ್ಕಳ ನಿತ್ಯಜೀವನ, ಓದಿನ ಗುಣಮಟ್ಟ, ಸರ್ಕಾರದಿಂದ ನೀಡುತ್ತಿರುವ ಸೌಲಭ್ಯಗಳ ಬಗ್ಗೆ ಸಂಶೋಧನೆ ನಡೆಸಿದ್ದಾರೆ.

ಸರ್ಕಾರಿ ಶಾಲೆಗಳ ಗುಣಮಟ್ಟದ ಬಗ್ಗೆ ಜಿಲ್ಲಾ ಉಪ ನಿರ್ದೇಶಕಿ ಮಮತಾ ಅವರನ್ನ ಭೇಟಿಯಾಗಿ ಈ ಬಗ್ಗೆ ಮಾಹಿತಿ ಪಡೆದಿದ್ದು, ಆದಿವಾಸಿ ಮಕ್ಕಳ ಕಲಿಕಾ ಕೇಂದ್ರಗಳಿಗೆ ಭೇಟಿ ನೀಡಲು ತ್ರಿಷಿಕಾ ನಿರ್ಧಾರ ಮಾಡಿದ್ದಾರೆ.

Next Story

RELATED STORIES