Top

ಮತಗಟ್ಟೆಗೆ ಬರದಂತೆ ಸಂಸದನಿಗೆ ತಾಕೀತು: ವೀಡಿಯೋ ವೈರಲ್

ಮತಗಟ್ಟೆಗೆ ಬರದಂತೆ ಸಂಸದನಿಗೆ ತಾಕೀತು: ವೀಡಿಯೋ ವೈರಲ್
X

ಮೈಸೂರು: ಸಂಸದ ಪ್ರತಾಪ್ ಸಿಂಹ ಮತಗಟ್ಟೆಗೆ ಹೋಗಿದ್ದಕ್ಕೆ ಆಕ್ರೋಶ ವ್ಯಕ್ತವಾಗಿದೆ. ಮತದಾರರಲ್ಲದವರು ಮತಗಟ್ಟೆಗೆ ಹೋಗಬಾರದೆಂದು ಗಲಾಟೆ ಮಾಡಿದ್ದು, ಗಲಾಟೆ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ನಿನ್ನೆ ಮೈಸೂರಿನ ಶ್ರೀಕಂಠಯ್ಯ ಶಾಲೆಯ ಮತಗಟ್ಟೆಯಲ್ಲಿ ಮತದಾನ ನಡೆದಿದ್ದು, ಬಿಜೆಪಿ ಅಭ್ಯರ್ಥಿ ಪದ್ಮನಾಭ ಜೊತೆ ಸಂಸದ ಪ್ರತಾಪ್ ಸಿಂಹ ತೆರಳಿದ್ದರು. ಪ್ರತಾಪ್ ಸಿಂಹ ಮತಗಟ್ಟೆ ಪ್ರವೇಶಿಸದಂತೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಪ್ರತಾಪ್ ಸಿಂಹಗೆ ಘೇರಾವ್ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದು, ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಸದ್ಯ ಈ ವೀಡಿಯೋ ಎಲ್ಲೆಡೆ ವೈರಲ್ ಆಗಿದೆ.

Next Story

RELATED STORIES