Top

ಈ ದೇವಾಲಯದಲ್ಲಿ ಭಕ್ತರಿಗೆ ವಿಗ್ರಹ ಮುಟ್ಟಿ ಪೂಜಿಸಲು ಅವಕಾಶ

ಈ ದೇವಾಲಯದಲ್ಲಿ ಭಕ್ತರಿಗೆ ವಿಗ್ರಹ ಮುಟ್ಟಿ ಪೂಜಿಸಲು ಅವಕಾಶ
X

ತುಮಕೂರು : ರಾಜ್ಯದ ಬಹುತೇಕ ದೇವಾಲಯಗಳಲ್ಲಿ ವಿಗ್ರಹಗಳನ್ನ ಮುಟ್ಟಿ ನಮಸ್ಕರಿಸುವ ಅವಕಾಶ ಭಕ್ತರಿಗೆ ಇಲ್ಲಾ. ಆದರೇ, ಮಹಾರಾಷ್ಟ್ರದಲ್ಲಿನ ಶನಿ ಸಿಂಗಾಪುರದಲ್ಲಿ ಶನಿ ವಿಗ್ರಹವನ್ನ ಮುಟ್ಟಿ ಆರಾಧಿಸುವ ಅವಕಾಶ ಇದೆ. ಇದೀಗ ಇಂತಹ ಅವಕಾಶ ಕರ್ನಾಟಕದ ಜನತೆಗೂ ಸಿಗುವಂತಾಗಿದೆ. ಅದೂ ಎಲ್ಲಿ ಅಂತಿರಾ ಆ ಬಗ್ಗೆ ಮುಂದೆ ಓದಿ..

ಇಲ್ಲಿ ದೇವರ ವಿಗ್ರಹಕ್ಕೆ, ಭಕ್ತರು ಹರಳೆಣ್ಣೆ ಹಾಕಿ ಪೂಜಿಸಲು ಅವಕಾಶವಿದೆ. ಈ ಮೂಲಕ ಭಕ್ತರು ದೇವರ ಮೂರ್ತಿಯನ್ನು ಮುಟ್ಟಿ ಪೂಜಿಸಿ, ಇಷ್ಟಾರ್ಥ ನೆರವೇರಿಸಲು ಕೋರಿಕೊಳ್ಳಬಹುದು. ಇಂತಹ ಅಪರೂಪದ ದೇವಾಲಯ ಇರೋದು, ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಬಿದನಗೆರೆ ಸತ್ಯ ಶನೇಶ್ವರ ದೇವಾಲಯದಲ್ಲಿ.

ಬಿದನಗೆರೆ ಸತ್ಯ ಶನೇಶ್ವರ ದೇವಾಲಯಕ್ಕೆ ಬರುವ ಭಕ್ತರಿಗೆ ಅಪರೂಪದ ಭಕ್ತಿ ಸಮರ್ಪಣೆಗೆ ಅವಕಾಶ ಕಳೆದ ನಿನ್ನೆಯಿಂದ ಆರಂಭಗೊಂಡಿದೆ. ಇಂತಹ ಕಾರ್ಯಕ್ಕೆ ದೇವಾಯದ ಆವರಣದಲ್ಲಿ ನಡೆದ ಸತ್ಯ ಶನೇಶ್ವರ ಸ್ವಾಮಿಯ ಶನಿ ಶಿಂಗಾಪುರ ಮಾದರಿಯ ಶನಿ ವಿಗ್ರಹ ಪ್ರತಿಷ್ಠಪನಾ ಕಾರ್ಯಕ್ರಮ ಹಾಗೂ ಧಾರ್ಮಿ ಸಮ್ಮೇಳನದ ಮೂಲಕ ಲೋಕಾರ್ಪಣೆಗೊಂಡಿದೆ.

ಹೀಗೆ ಲೋಕಾರ್ಪಣೆಗೊಂಡಿರುವ ಸತ್ಯ ಶನೇಶ್ವರ ದೇವಾಲಯದಕ್ಕೆ ನೀವು ತೆರಳಿದರೇ, ಸತ್ಯ ಶನೇಶ್ವರ ಮೂರ್ತಿಯನ್ನು ಮುಟ್ಟಿ, ವಿಗ್ರಹಕ್ಕೆ ಹರಳೆಣ್ಣೆ ಹಚ್ಚಿ, ನಿಮ್ಮ ಇಷ್ಟಾರ್ಥ ಈಡೇರಿಸುವಂತೆ ಕೋರಿಕೊಳ್ಳಬಹುದು. ಈ ಮೂಲಕ ನೀವೆ ಇಲ್ಲಿ ವಿಗ್ರಹ ಮುಟ್ಟಿ ಆರಾಧಿಸುವ ಪರಿಗೆ ಸಾಕ್ಷಿಯಾಗಬಹುದು.

ಇಂತಹ ದೇವಾಲಯ ರಾಜ್ಯದ ಮತ್ತೊಂದೆಡೆ ಇಲ್ಲ. ಬಿದನಗೆರೆ ಸತ್ಯ ಶನೇಶ್ವರ ದೇವಾಲಯ ಹೊರತು ಪಡಿಸಿ, ವಿಗ್ರಹ ಮುಟ್ಟಿ ಪೂಜಿಸುವ ಮತ್ತೊಂದು ದೇವಾಲಯ ಇರೋದು ಮಹಾರಾಷ್ಟ್ರದ ಶನಿ ಸಿಂಗಾಪೂರದಲ್ಲಿ ಮಾತ್ರವಾಗಿದೆ.

ಇದೇ ಮಾದರಿಯ ಪೂಜೆಗೆ ಬಿದನಗೆರೆ ದೇವಾಲಯದ ಸತ್ಯ ಶನೇಶ್ವರ ದೇವಾಲಯದಲ್ಲೂ ಚಾಲನೆ ನೀಡಿದ್ದು, ಭಕ್ತ ಸಾಗರವೇ ಸತ್ಯ ಶನೇಶ್ವರನ ಪೂಜೆಗೆ ಹರಿದು ಬರುತ್ತಿದೆ. ಇಂತಹ ದೇವಾಲಯದ ಉದ್ಘಾಟನಾ ಕಾರ್ಯಕ್ರಮಕ್ಕೆ, ವಿವಿಧ ಮಠಾಧೀಶರು, ಚಿಂತ್ರರಂಗದ ಗಣ್ಯರು, ಧಾರವಾಹಿ ನಟರು ಆಗಮಿಸಿ ಗಮನ ಸೆಳೆದರು.

ವರದಿ : ಟಿ.ಯೋಗೀಶ್, ಟಿವಿ5 ತುಮಕೂರು

Next Story

RELATED STORIES