Top

ಗೋಪಿಕಾಲೋಲ ಬಾಲಗೋಪಾಲನ ಪವಾಡಗಳು

ಗೋಪಿಕಾಲೋಲ ಬಾಲಗೋಪಾಲನ ಪವಾಡಗಳು
X

ಗೋಪಿಕಾಲೋಲ ಬಾಲಗೋಪಾಲ ಕೃಷ್ಣನ ಪವಾಡಗಳು ಒಂದಲ್ಲಾ, ಎರಡಲ್ಲಾ.. ಲೆಕ್ಕವಿಲ್ಲದಷ್ಟು. ಅಂತಹ ಶ್ರೀಕೃಷ್ಣನ ಪವಾಡಗಳ ಬಗ್ಗೆ ಕೆಲವೊಂದರ ಬಗ್ಗೆ ಹೇಳುವುದಾದರೇ.. ಈ ಕೆಳಗಿನ ಕೆಲ ಘಟನೆಗಳು ಸಾಕ್ಷಿ..

ಇದ್ದಕ್ಕಿದ್ದಂತೆ ಒಲೆಯ ಮೇಲಿದ್ದ ಹಾಲು ಕುದಿಯಲು ಪ್ರಾರಂಭವಾಯಿತು. ಅದು ಉಕ್ಕಿ ಹರಿಯದಂತೆ ತಡೆಯಲು ತಾಯಿ ಯಶೋಧೆಯು ಕೃಷ್ಣನನ್ನು ಕೆಳಗೆ ಮಲಗಿಸಿ ಒಲೆಯ ಬಳಿಗೆ ಹೋದಳು. ತಾಯಿಯು ಹೀಗೆ ಬಿಟ್ಟು ಹೋದದ್ದರಿಂದ ಕೃಷ್ಣನಿಗೆ ಕೋಪ ಬಂದಿತು. ಸಿಟ್ಟಿನಿಂದ ಅವನ ಕಣ್ಣುಗಳು, ತುಟಿಗಳು ಕೆಂಪಾದವು. ಅವುಡುಗಚ್ಚಿ ಅವನು ಒಂದು ಕಲ್ಲನ್ನು ತೆಗೆದುಕೊಂಡು ಬೆಣ್ಣೆಯ ಮಡಕೆಯನ್ನು ಒಡೆದನು. ಆ ಹೊತ್ತಿಗೆ ತಾಯಿ ಯಶೋಧೆಯು ಉಕ್ಕುತ್ತಿದ್ದ ಹಾಲಿನ ಪಾತ್ರೆಯನ್ನು ಸರಿ ಮಾಡಿ ಬೆಣ್ಣೆಯನ್ನು ಕಡೆಯುತ್ತಿದ್ದ ಸ್ಥಳಕ್ಕೆ ಹಿಂದಿರುಗಿದಳು.

ಕಡೆಯಲು ಮೊಸರನ್ನಿಟ್ಟಿದ್ದ ಮಡಕೆಯು ಹೊಡೆದು ಹೋಗಿದ್ದುದನ್ನು ನೋಡಿದಳು. ತನ್ನ ಮಗನು ಕಾಣದಿದ್ದುದರಿಂದ ಮಡಕೆಯನ್ನು ಒಡೆದದ್ದು ಅವನ ಕೆಲಸವೇ ಎಂದು ತೀರ್ಮಾನಿಸಿದಳು ಮಗು ಬಹಳ ಬುದ್ಧಿವಂತ, ಮಡಕೆಯನ್ನು ಒಡೆದು ಶಿಕ್ಷೆಯಾಗುವುದೆಂದು ಹೆದರಿ ಈ ಸ್ಥಳವನ್ನೇ ಬಿಟ್ಟು ಹೋಗಿದ್ದಾನೆ ಎಂದು ಯೋಚಿಸುತ್ತಿದ್ದಾಗ ಅವಳಿಗೆ ಮುಗುಳ್ನಗೆ ಬಂದಿತು. ಎಲ್ಲ ಕಡೆಯೂ ಹುಡುಕಿದ ಮೇಲೆ ತಲೆಕೆಳಗಾಗಿದ್ದ ಒಂದು ಮರದ ಒರಳುಕಲ್ಲು ನೋಡಿದಳು. ತನ್ನ ಮಗನು ಅದರ ಮೇಲೆ ಕುಳಿತಿದ್ದುದನ್ನು ನೋಡಿದಳು.

ಆಘಾಸುರನ ಸಂಹಾರ

ಒಮ್ಮೆ ಪ್ರಭುವು ತನ್ನ ಎಲ್ಲ ಗೋಪಾಲಕ ಸ್ನೇಹಿತರೊಡನೆ ಬೆಳಗ್ಗೆ ಬಹುಬೇಗ ಕಾಡಿಗೆ ಹೋಗಿ ಅಲ್ಲಿ ಊಟ ಮಾಡಬೇಕೆಂದು ಬಯಸಿದ. ತನ್ನ ಗೆಳೆಯರೊಂದಿಗೆ ಕೃಷ್ಣನು ಬಾಲಲೀಲೆಗಳನ್ನು ಸವಿಯುತ್ತಿದ್ದಾಗ ಅಘಾಸುರ ಎಂಬ ರಾಕ್ಷಸನು ತಾಳ್ಮೆಗೆಟ್ಟನು. ಅವನಿಗೆ ಹುಡುಗರ ಮಧ್ಯೆ ಆಡುತ್ತಿದ್ದ ಕೃಷ್ಣನು ಯಾರೆಂದು ತಿಳಿಯಲಿಲ್ಲ. ಆದುದರಿಂದ ಹುಡುಗರೆಲ್ಲರನ್ನೂ ಕೊಲ್ಲಲು ತೀರ್ಮಾನಿಸಿ ಅವರ ಮುಂದೆ ಕಾಣಿಸಿಕೊಂಡ. ರಾಕ್ಷಕ ಅಘಾಸುರನು ಕೃಷ್ಣನ ಮತ್ತು ಅವನ ಗೆಳೆಯರ ಮುಂದೆ ನಿಂತು.

ಅವನು ಪೂತನಿ ಮತ್ತು ಬಕಾಸುರರ ತಮ್ಮ ಅವನು ಶ್ರೀ ಕೃಷ್ಣನು ನನ್ನ ಅಣ್ಣನನ್ನೂ ಅಕ್ಕನನ್ನೂ ಕೊಂದಿದ್ದಾನೆ. ಈಗ ನಾನು ಅವನನ್ನು ಅವನ ಎಲ್ಲ ಸ್ನೇಹಿತರೊಡನೆ ಮತ್ತು ಕರುಗಳೊಡನೆ ಕೊಂದು ಬರುತ್ತೇನೆ ಎಂದು ಯೋಚಿಸಿದನು. ಕಂಸನು ಅಘಾಸುರನನ್ನು ಪ್ರಚೋದಿಸಿದ್ದ. ಆದುದರಿಂದ ಅವನು ದೃಢನಿಶ್ಚಯ ಮಾಡಿ ಬಂದಿದ್ದ.

ದೈತ್ಯ ಸರ್ಪ ಕಾಲೀಯನ ಸೋಲು

ಯಮುನಾ ನದಿಯೊಳಗೆ ದೊಡ್ಡ ಸರೋವರವಿತ್ತು. ಅದರಲ್ಲಿ ಕಾಳಿಯನೆಂಬ ಕರಿಸರ್ಪವು ವಾಸ ಮಾಡುತ್ತಿದ್ದ. ಅವನ ವಿಷದಿಂದ ಇಡೀ ಪ್ರದೇಶವು ಎಷ್ಟು ಕಲ್ಮಷವಾಯಿತೆಂದರೆ ದಿನದಲ್ಲಿ ಇಪ್ಪತ್ನಾಲ್ಕು ಗಂಟೆಯೂ ವಿಷವಾಯುವು ಹೊರಹೊಮ್ಮುತ್ತಿತ್ತು. ಆ ಸ್ಥಳದ ಮೇಲೆ ಪಕ್ಷಿಯು ಹಾರಿ ಹೋದರೆ ಕೂಡಲೇ ಅದು ನೀರಿನಲ್ಲಿ ಬಿದ್ದು ಸಾಯುತ್ತಿತ್ತು.

ಯಮುನಾ ನದಿಯ ವಾಯುವಿನ ವಿಷದಿಂದಾಗಿ ನದಿಯ ತೀರದಲ್ಲಿದ್ದ ಹುಲ್ಲು ಮತ್ತು ಮರಗಳು ಒಣಗಿ ಹೋಗಿದ್ದವು. ಆ ಘಟಸರ್ಪದ ವಿಷದ ಪರಿಣಾಮವನ್ನು ಶ್ರೀಕೃಷ್ಣನು ಕಂಡನು. ವೃಂದಾವನದ ಮುಂದೆ ಹರಿಯುತ್ತಿದ್ದ ಇಡೀ ನದಿಯು ಮಾರಕವಾಗಿಬಿಟ್ಟಿತು.

ಇಂದ್ರನ ಪ್ರಾರ್ಥನೆಗಳು

ಗೋವರ್ಧನ ಗಿರಿಯನ್ನು ಎತ್ತಿ ಹಿಡಿದು ಕೃಷ್ಣನು ವೃಂದಾವನದ ನಿವಾಸಿಗಳನ್ನು ಇಂದ್ರನ ಕೋಪದಿಂದ ರಕ್ಷಿಸಿದಾಗ ಗೋಲೋಕ ವೃಂದಾವನದ ಒಂದು ಸುರಭಿಯೂ ಸ್ವರ್ಗಾಧಿಪತಿಯಾದ ದೇವೇಂದ್ರನೂ ಅವನ ಮುಂದೆ ಕಾಣಿಸಿಕೊಂಡರು. ಸ್ವರ್ಗಾಧಿಪತಿಯಾದ ಇಂದ್ರನಿಗೆ ತಾನು ಕೃಷ್ಣನಿಗೆ ಅಪರಾಧ ಮಾಡಿದ್ದೇನೆ ಎನ್ನುವುದು ತಿಳಿದಿತ್ತು. ಆದುದರಿಂದ ಅವನು ಜನರಹಿತವಾದ ಒಂದು ಸ್ಥಳದಲ್ಲಿ ಕೃಷ್ಣನ ಮುಂದೆ ಕಳ್ಳನಂತೆ ಕಾಣಿಸಿಕೊಂಡನು.

ಇಂದ್ರನ ಕಿರೀಟವೇ ಬಿಸಿಲಿನಂತೆ ಹೊಳೆಯುತ್ತಿದ್ದರೂ ಅವನು ಕೂಡಲೇ ಕೃಷ್ಣನ ಚರಣಕಮಲಗಳಿಗೆ ಸಾಷ್ಟಾಂಗ ನಮಸ್ಕಾರ ಮಾಡಿದನು. ಕೃಷ್ಣನು ಇಂದ್ರನ ಒಡೆಯನಾದುದರಿಂದ ಇಂದ್ರನಿಗೆ ಕೃಷ್ಣನ ಉನ್ನತ ಸ್ಥಾನದ ಅರಿವಿತ್ತು. ಆದರೆ ಕೃಷ್ಣನು ಭೂಮಿಗಿಳಿದು ಬಂದು ವೃಂದಾವನದಲ್ಲಿ ಗೋಪಾಲಕರ ನಡುವೆ ವಾಸ ಮಾಡುತ್ತಾನೆ ಎನ್ನುವುದನ್ನು ನಂಬಲು ಸಾಧ್ಯವಾಗಲಿಲ್ಲ.

ಕೃಷ್ಣನು ಇಂದ್ರನ ಅಧಿಕಾರವನ್ನು ಧಿಕ್ಕರಿಸಿದಾಗ ಈ ವಿಶ್ವದಲ್ಲಿ ತಾನೇ ಪರಮ ಪ್ರಭು ಮತ್ತು ಶಕ್ತಿಯಲ್ಲಿ ತನಗೆ ಸಮನಾದವರು ಯಾರು ಇಲ್ಲ ಎಂದು ಭಾವಿಸಿದ್ದ ಇಂದ್ರನಿಗೆ ಕೋಪ ಬಂದಿತು. ಆದರೆ ಈ ಘಟನೆಯ ನಂತರ ಅವನ ಹುಸಿ ಪ್ರತಿಷ್ಠೆಯು ನಾಶವಾಯಿತು. ತನ್ನ ಅಧೀನ ಸ್ಥಾನದ ಅರಿವಾಗಿ ಅವನು ಕೈ ಮುಗಿದುಕೊಂಡು ಕೃಷ್ಣನ ಮುಂದೆ ಕಾಣಿಸಿಕೊಂಡನು ಮತ್ತು ಪ್ರಾರ್ಥನೆ ಮಾಡಿದನು.

ತನ್ನ ವಾಗ್ದಾನಗಳನ್ನು ಮುರಿದ ಕೃಷ್ಣ

ಪಾಂಡವರು ಮತ್ತು ಕೌರವರ ಮಧ್ಯೆ ಯುದ್ಧದ ಘೋಷಣೆಯಾದಾಗ, ಆ ಯುದ್ಧದಲ್ಲಿ ತಾನು ಹೋರಾಡುವುದಿಲ್ಲ ಅಥವಾ ಆಯುಧಗಳನ್ನು ಕೈಗೆತ್ತಿಕೊಳ್ಳುವುದಿಲ್ಲವೆಂದು ಕೃಷ್ಣನು ನಿರ್ಧರಿಸಿದ್ದು ಎಲ್ಲರಿಗೂ ಗೊತ್ತಿರುವ ಸತ್ಯಾಂಶವೇ. ಆದರೆ ಮುಂದೆ ನೀಡಲಾಗಿರುವ ಉದಾಹರಣೆಯಲ್ಲಿ ಕೃಷ್ಣನು ಹೇಗೆ ಕೆಲವು ಸಲ ತಾನು ನೀಡಿದ ವಾಗ್ದಾನವನ್ನು ಮುರಿಯುತ್ತಾನೆ ಎಂದು ತಿಳಿದು ಬರುತ್ತದೆ.

ವಿರೋಧಿ ಬಣದಲ್ಲಿ ತನ್ನ ನೆಚ್ಚಿನ ಮೊಮ್ಮಕ್ಕಳಿರುವುದರಿಂದ ಮುದುಕ ಭೀಷ್ಮನು ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಹೋರಾಡುತ್ತಿಲ್ಲವೆಂದು ದುರ್ಯೋಧನನು ಭೀಷ್ಮನಿಗೆ ಚಿತಾವಣೆ ಮಾಡಿದನು. ಈ ಆಪಾದನೆಯಿಂದ ಕುಪಿತನಾದ ಭೀಷ್ಮ ಪಿತಾಮಹನು ತನ್ನ ಬತ್ತಳಿಕೆಯಿಂದ ಐದು ಬಾಣಗಳನ್ನು ಹೊರ ತೆಗೆದು, ಆ ಪಾಂಡವ ಸಹೋದರರನ್ನು ಕೊಲ್ಲುವುದಾಗಿ ದುರ್ಯೋಧನನೆದುರು ಪ್ರತಿಜ್ಞೆ ಮಾಡಿದನು. ಕಪಟ ರಾಜತಂತ್ರಜ್ಞನಾದ ದುರ್ಯೋಧನನು ಆ ಐದು ಬಾಣಗಳನ್ನು ಮರುದಿನದ ಯುದ್ಧಕ್ಕಾಗಿ ಜೋಪಾನವಾಗಿ ಇಟ್ಟುಕೊಳ್ಳುವೆನೆಂದು ಭೀಷ್ಮ ಪಿತಾಮಹನನ್ನು ಕೇಳಿಕೊಂಡನು.

Next Story

RELATED STORIES