Top

ಏಷ್ಯನ್ ಗೇಮ್ಸ್​: ಪಾಕಿಸ್ತಾನ ಮಣಿಸಿದ ಭಾರತಕ್ಕೆ ಕಂಚು

ಏಷ್ಯನ್ ಗೇಮ್ಸ್​: ಪಾಕಿಸ್ತಾನ ಮಣಿಸಿದ ಭಾರತಕ್ಕೆ ಕಂಚು
X

ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು 2-1 ಗೋಲುಗಳಿಂದ ಮಣಿಸಿದ ಭಾರತ ಪುರುಷರ ಹಾಕಿ ತಂಡ ಏಷ್ಯನ್ ಗೇಮ್ಸ್​ನಲ್ಲಿ ಕಂಚಿನ ಪದಕ ಗೆದ್ದುಕೊಂಡಿದೆ.

ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆಯುತ್ತಿರುವ ಕ್ರೀಡಾಕೂಟದಲ್ಲಿ ಕಂಚಿನ ಪದಕಕ್ಕಾಗಿ ಶನಿವಾರ ನಡೆದ ಪಂದ್ಯದಲ್ಲಿ ಸುಲಭ ಜಯದೊಂದಿಗೆ ಅಭಿಯಾನ ಅಂತ್ಯಗೊಳಿಸಿತು.

ಭಾರತದ ಪರ ಆಕಾಶ್ ದೀಪ್ ಪಂದ್ಯದ 3ನೇ ನಿಮಿಷದಲ್ಲಿಯೇ ಗೋಲು ಬಾರಿಸಿ ಆರಂಭದಲ್ಲೇ ಮುನ್ನಡೆ ಒದಗಿಸಿಕೊಟ್ಟರೆ, ಹರ್ಮನ್​ ಪ್ರೀತ್​ ಸಿಂಗ್ 50ನೇ ನಿಮಿಷದಲ್ಲಿ ಮತ್ತೊಂದು ಗೋಲು ಬಾರಿಸಿ ತಂಡದ ಮುನ್ನಡೆಯನ್ನು ಹೆಚ್ಚಿಸಿದರು.

ಮೊಹಮದ್ ಆತಿಕ್​ 52ನೇ ನಿಮಿಷದಲ್ಲಿ ಗೋಲು ಬಾರಿಸಿದ್ದರಿಂದ ಪಂದ್ಯದ ಮೇಲಿನ ಕುತೂಹಲ ಹೆಚ್ಚಿಸಿದರು. ಆದರೆ ಮಲೇಷ್ಯಾ ವಿರುದ್ಧ ಸೋತು ಪಾಠ ಕಲಿತಿದ್ದ ಭಾರತೀಯ ಆಟಗಾರರು ಪಾಕಿಸ್ತಾನಕ್ಕೆ ಗೋಲು ಗಳಿಸುವ ಅವಕಾಶವನ್ನೇ ನೀಡದೇ ಗೆಲುವಿನ ನಗೆ ಬೀರಿದರು.

ಹಾಲಿ ಚಾಂಪಿಯನ್ ಆಗಿದ್ದ ಭಾರತ ವಿಶ್ವದ 5ನೇ ಶ್ರೆಯಾಂಕ ಹೊಂದಿದ್ದು ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿ ಕಣಕ್ಕಿಳಿದಿತ್ತು. ಆದರೆ ಭಾರತ ಸೆಮಿಫೈನಲ್​ನಲ್ಲಿ ಎಡವಿ ಫೈನಲ್ ಹಾದಿಯಿಂದ ನಿರ್ಗಮಿಸಿದರೂ ಕಂಚಿನ ಪದಕ ಗೆಲ್ಲುವ ಮೂಲಕ ಗೌರವ ಉಳಿಸಿಕೊಂಡಿತು.

ಭಾರತ ವನಿತೆಯರ ತಂಡ ಜಪಾನ್ ವಿರುದ್ಧ ಫೈನಲ್​ನಲ್ಲಿ ಸೋತು ಬೆಳ್ಳಿ ಪದಕ ಗೆದ್ದ ಸಾಧನೆ ಮಾಡಿದ್ದಾರೆ.

Next Story

RELATED STORIES