ಒಲಿಂಪಿಕ್ ಚಾಂಪಿಯನ್ ಮಣಿಸಿದ ಭಾರತೀಯ ಬಾಕ್ಸರ್ ಗೆ ಚಿನ್ನ!

X
TV5 Kannada1 Sep 2018 9:36 AM GMT
ಭಾರತದ ಅಮಿತ್ ಪಾಂಗಲ್ 2016ರ ಒಲಿಂಪಿಕ್ ಚಾಂಪಿಯನ್ ಉಜ್ಬೇಕಿಸ್ತಾನದ ಹಸನ್ ಬಾಯ್ ಡಸ್ಮಟೊವ್ ಅವರನ್ನು ಸೋಲಿಸಿ ಏಷ್ಯನ್ ಗೇಮ್ಸ್ ನಲ್ಲಿ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟಿದ್ದಾರೆ.
ಶನಿವಾರ ನಡೆದ ಪುರುಷರ 49 ಕೆಜಿಯ ಲೈಟ್ ಫ್ಲೈ ವಿಭಾಗದ ಬಾಕ್ಸಿಂಗ್ ಫೈನಲ್ನಲ್ಲಿ ಭಾರತದ ಯುವ ಬಾಕ್ಸರ್ 3-2 ಅಂಕಗಳಿಂದ ಹಸನ್ ಬಾಯ್ ಅವರನ್ನು ಸೋಲಿಸಿ ಟೂರ್ನಿಯಲ್ಲೇ ಅಚ್ಚರಿ ಫಲಿತಾಂಶ ಪಡೆದರು.
22 ವರ್ಷದ ಅಮಿತ್ ಪಾಂಗಲ್ ಸೆಮಿಫೈನಲ್ನಲ್ಲಿ 3-2ರಿಂದ ಫಿಲಿಪೇನ್ಸ್ ನ ಕಾರ್ಲೊ ಪಾಲಂ ಅವರನ್ನು ಮಣಿಸಿದ್ದರು. ಅಮಿತ್ 2018ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದ ಸಾಧನೆ ಮಾಡಿದ್ದರು. ಇದರೊಂದಿಗೆ ಅಮಿತ್ ಜೀವಮಾನದ ಶ್ರೇಷ್ಠ ಸಾಧನೆ ಮಾಡಿದರು.
Next Story