ನಿರ್ದೇಶಕ ನಾರಾಯಣ್ಗೆ 40 ಲಕ್ಷ ರೂ. ವಂಚನೆ

X
TV5 Kannada31 Aug 2018 8:11 AM GMT
ಕಡಿಮೆ ಬಡ್ಡಿ ದರದಲ್ಲಿ ಸಾಲ ಕೊಡಿಸುತ್ತೇನೆ ಎಂದು ಆಮೀಷ ಒಡ್ಡಿ ಕನ್ನಡದ ಖ್ಯಾತ ನಿರ್ದೇಶಕನಿಗೆ ಜ್ಯೋತಿಷಿಯೊಬ್ಬ 40 ಲಕ್ಷ ರೂ. ವಂಚಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಕನ್ನಡದ ಖ್ಯಾತ ನಟ-ನಿರ್ದೇಶಕ ಎಸ್. ನಾರಾಯಣ ಅವರಿಗೆ ಸಾಲ ಕೊಡಿಸುವುದಾಗಿ ನಂಬಿಸಿ 40 ಲಕ್ಷ ರೂ.ವನ್ನು ತಮಿಳುನಾಡಿನ ಜ್ಯೋತಿಷಿ ಕಂ ನಾಯಕ ಮಂದಾರ ಮೂರ್ತಿ ವಂಚಿಸಿದ್ದಾನೆ.
ಮಂದಾರ ಮೂರ್ತಿ ಸಹಚರನನ್ನು ಬಂಧಿಸಿದರುವ ಪೊಲೀಸರು ಆತನ ಬಳಿಯಿದ್ದ ಕಾರನ್ನು ವಶಕ್ಕೆ ಪಡೆದಿದ್ದಾರೆ.
70 ಕೋಟಿ ರೂ.ವನ್ನು ಕಡಿಮೆ ಬಡ್ಡಿದರದಲ್ಲಿ ಸಾಲ ಕೊಡಿಸುವುದಾಗಿ ನಂಬಿಸಿದ ಮಂದಾರ ಮೂರ್ತಿ ಪ್ರೊಸೆಸಿಂಗ್ ಶುಲ್ಕವಾಗಿ 40 ಲಕ್ಷ ರೂ. ವಸೂಲು ಮಾಡಿದ್ದ ಎಂದು ಹೇಳಲಾಗಿದೆ.
Next Story