Top

ಗುಂಪು ಚದುರಿಸಲು ಪೊಲೀಸ್‌ ಲಾಠಿ ಹಿಡಿದ ಜಿಲ್ಲಾಧಿಕಾರಿ.!

ಗುಂಪು ಚದುರಿಸಲು ಪೊಲೀಸ್‌ ಲಾಠಿ ಹಿಡಿದ ಜಿಲ್ಲಾಧಿಕಾರಿ.!
X

ವಿಜಯಪುರ : ಇಂದು ರಾಜ್ಯದ ಸ್ಥಳೀಯ ಸಂಸ್ಥಗಳಿಗೆ ಮತದಾನ ನಡೆಯುತ್ತಿದೆ. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದಲ್ಲೂ ಮತದಾನ ನಡೆಯುತ್ತಿದೆ.

ಮುದ್ದೇಬಿಹಾಳ ಪಟ್ಟಣದ ವಾರ್ಡ್‌ ನಂ.4 ಹಾಗೂ 5ರಲ್ಲಿ ಮತಗಟ್ಟೆ 100 ಮೀಟರ್ ವ್ಯಾಪ್ತಿಯ ಒಳಗೆ ಕಾರ್ಯಕರ್ತರು ಓಟರ್‌ ಸ್ಲಿಪ್‌ ನೀಡಿ ಪ್ರಚಾರದಲ್ಲಿ ತೊಡಗಿದ್ದರು.

ಈ ದೃಶ್ಯವನ್ನು ಗಮನಿಸಿ ಕೆಂಡಾಮಂಡಲರಾದ ವಿಜಯಪುರ ಜಿಲ್ಲಾಧಿಕಾರಿ ಶೆಟ್ಟೆನ್ನವರ್‌, ಸ್ವತಹ ತಾವೇ ಪೊಲೀಸ್‌ ಲಾಠಿ ಹಿಡಿದು ಗುಂಪು ಚದುರಿಸಿದರು.

ಅಲ್ಲದೇ.. ಮತಗಟ್ಟೆಯ ಸುತ್ತ 100 ಮೀಟರ್‌ ವ್ಯಾಪ್ತಿಯಲ್ಲಿ ಅಭ್ಯರ್ಥಿಗಳ ಪರ ಪ್ರಚಾರ ಮಾಡುವಂತಿಲ್ಲ. ಹೀಗಿದ್ದೂ, ಮತದಾರರಿಗೆ ಕಾರ್ಯಕರ್ತರು ಸ್ಲಿಪ್‌ ನೀಡಿ, ಪ್ರಚಾರ ನಡೆಸುತ್ತಿದ್ದ ಬಗ್ಗೆ ತರಾಟೆಗೆ ತೆಗೆದುಕೊಂಡರು.

ಈ ಎಲ್ಲಾ ಘಟನೆ, ಇದೀಗ ಚರ್ಚೆಗೆ ಗ್ರಾಸವಾಗಿದೆ. ಅಲ್ಲದೇ ಮಾಧ್ಯಮದವರ ಜೊತೆಗೂ ಜಿಲ್ಲಾಧಿಕಾರಿಗಳು ಕೆಲ ಕಾಲ ವಾಗ್ವಾದಕ್ಕೆ ಇಳಿದಿದ್ದು, ಆಕ್ರೋಶಕ್ಕೆ ಕಾರಣವಾಗಿದೆ.

ಮತ್ತೊಂದೆಡೆ, ಸ್ಥಳೀಯ ಸಂಸ್ಥೆಗಳಿಗೆ ಇಂದು ಮತದಾನ ನಡೆಯುತ್ತಿರುವ ಹಿನ್ನಲೆಯಲ್ಲಿ, ಮದ್ಯಪಾನ ನಿಷೇಧಿಸಲಾಗಿದೆ.

ಆದರೇ ತೆರೆ ಮರೆಯಲ್ಲಿ ಮತದಾನ ನಡೆಯುತ್ತಿರುವ ವ್ಯಾಪ್ತಿಯ ಅನೇಕ ಬಾರ್‌ಗಳಲ್ಲಿ ತೆರೆ ಮರೆಯಲ್ಲಿ ಮದ್ಯವನ್ನು ಮಾರಾಟ ಮಾಡಲಾಗುತ್ತಿದ್ದುದು ಕಂಡು ಬಂದಿತು.

ವರದಿ : ಶರಣು ಮಸಳಿ, ಟಿವಿ5 ವಿಜಯಪುರ

Next Story

RELATED STORIES