Top

TV5 EXCLUSIVE: ಸಿಎಂ ಎಚ್​ಡಿಕೆ ಪುತ್ರ ಆಂಧ್ರ ಅಳಿಯ?

TV5 EXCLUSIVE: ಸಿಎಂ ಎಚ್​ಡಿಕೆ ಪುತ್ರ ಆಂಧ್ರ ಅಳಿಯ?
X

ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರ ಪುತ್ರ ನಿಖಿಲ್​ಗೆ ಆಂಧ್ರಪ್ರದೇಶದ ವಿಜಯವಾಡದ ಉದ್ಯಮಿ ಪುತ್ರಿ ಜೊತೆ ಮದುವೆ ನಿಶ್ಚಯ ಕುರಿತು ಮಾತುಕತೆ ನಡೆಸಿದೆ. ಈ ಮೂಲಕ ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡರ ಕುಟುಂಬಕ್ಕೆ ಹೊರರಾಜ್ಯದಿಂದ ಸೊಸೆ ಬರುವುದು ಖಚಿತವಾಗಿದೆ.

ಕುಮಾರಸ್ವಾಮಿ ದಂಪತಿ ಹಾಗೂ ನಿಖಿಲ್ ಆಂಧ್ರಪ್ರದೇಶಕ್ಕೆ ಭೇಟಿ ನೀಡಿದ್ದು, ಪ್ರತಿಷ್ಠಿತ ಉದ್ಯಮಿ ಕುಟುಂಬದ ಪುತ್ರಿ ಜೊತೆ ಮದುವೆ ನಿಶ್ಚಿಯವಾಗುವ ಸಾಧ್ಯತೆ ಇದೆ. ಕುಮಾರಸ್ವಾಮಿ ದಂಪತಿ ಹುಡುಗಿ ನೋಡುವ ಶಾಸ್ತ್ರ ಮಾಡಲಿದ್ದಾರೆ.

https://www.youtube.com/watch?v=zsWwF6BR0sk

ಹುಡುಗಿ ನೋಡುವ ಶಾಸ್ತ್ರ ಮುಗಿದ ನಂತರ ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡರ ಸಹಿತ ಕುಟುಂಬದ ಸದಸ್ಯರು ಮತ್ತೊಮ್ಮೆ ಆಂಧ್ರಪ್ರದೇಶಕ್ಕೆ ತೆರಳಿ ಅಧಿಕೃತ ಮಾತುಕತೆ ನಡೆಸಲಿದೆ ಎಂದು ಮೂಲಗಳು ಹೇಳಿವೆ.

ಆಂಧ್ರಪ್ರದೇಶದ ನೂತನ ರಾಜಧಾನಿ ಅಮರಾವತಿಗೆ ಕುಮಾರಸ್ವಾಮಿ ದಂಪತಿ ಭೇಟಿ ನೀಡಿದ್ದು, ವೈಯಕ್ತಿಕ ಕೆಲಸ ಮುಗಿದ ನಂತರ ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ ಎಂದು ಹೇಳಲಾಗಿದೆ.

ಇದಕ್ಕೂ ಮುನ್ನ ನಿಖಿಲ್ ಗೆ ಕೆಸಿಎನ್​ ಮೋಹನ್ ಅವರ ಪುತ್ರಿ ಸ್ವಾತಿ ಗೌಡ ಜೊತೆ ವಿಳ್ಯ ಶಾಸ್ತ್ರ ನಡೆದಿದ್ದು, ಈ ಸಂಬಂಧ ಮುರಿದುಬಿದ್ದಿತ್ತು.

Next Story

RELATED STORIES