Top

ಬಸವಣ್ಣನ ದೇವಸ್ಥಾನದಲ್ಲಿ ಅಶ್ಲೀಲ ನೃತ್ಯ..!

ಬಸವಣ್ಣನ ದೇವಸ್ಥಾನದಲ್ಲಿ ಅಶ್ಲೀಲ ನೃತ್ಯ..!
X

ವಿಜಯಪುರ: 12ನೇ ಶತಮಾನದಲ್ಲೇ ಸಮಾನತೆ ಸಾರಿದ ವಿಶ್ವಗುರು ಬಸವಣ್ಣನ ದೇವಸ್ಥಾನದಲ್ಲಿ ಅಶ್ಲೀಲ ನೃತ್ಯ ಪ್ರದರ್ಶನ ಮಾಡಲಾಗಿದೆ. ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ಪಟ್ಟಣದಲ್ಲಿರುವ ದೇವಸ್ಥಾನದಲ್ಲಿ ಇಂತಹ ಘಟನೆ ನಡೆದಿದೆ.

https://www.youtube.com/watch?v=0StgxAHHhyk&feature=youtu.be

ಮೂಲ ನಂದಿಶ್ವರ ದೇವಸ್ಥಾನದ ಜಾತ್ರೆ ಅಂಗವಾಗಿ ನಡೆದ ನೃತ್ಯ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಐತಿಹಾಸಿಕ ಬಸವೇಶ್ವರ ದೇವಸ್ಥಾನದ ಆವರಣದಲ್ಲೇ ಅಶ್ಲೀಲವಾಗಿ ನೃತ್ಯ ಪ್ರದರ್ಶನ ಮಾಡಿಸಲಾಗಿದೆ. ಮಹಿಳಾ ಸಮಾನತೆ ಬಗ್ಗೆ ಧ್ವನಿ ಎತ್ತಿದ ಬಸವಣ್ಣದ ದೇವಸ್ಥಾನ ಆವಣರದಲ್ಲೇ ಯುವತಿಯಿಂದ ಮೈಮಾಟ ಪ್ರದರ್ಶನ ಮಾಡಿಸಿದ್ದು ಇದೀಗ ಆಕ್ರೋಶಕ್ಕೆ ಕಾರಣವಾಗಿದೆ.

ಕಳೆದ 28 ನೇ ತಾರಿಖಿನಂದು ನಡೆದ ಆಶ್ಲೀಲ ನೃತ್ಯ ಪ್ರದರ್ಶನಕ್ಕೆ ಪ್ರಜ್ಞಾವಂತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಶ್ಲಿಲ ನೃತ್ಯ ಆಯೋಜನೆ ಮಾಡಿದ ಆಯೋಜಕರ ವಿರುದ್ಧ ಬಸವ ಭಕ್ತರು ಆಕ್ರೋಶ ಹೊರಹಾಕಿದ್ದಾರೆ. ಮಹಿಳೆಯರಿಗೆ ಸಮಾನತೆ ನೀಡಿದ ದಾರ್ಶನಿಕನ ಜನ್ಮ ಸ್ಥಳದಲ್ಲೇ ಮಹಿಳೆಯಿಂದ ಅಶ್ಲೀಲ ನೃತ್ಯ ಮಾಡಿಸಿದ ಆಯೋಜಕರಿಗೆ ಜನರು ಛೀಮಾರಿ ಹಾಕುತ್ತಿದ್ದಾರೆ.

ಆರೋಗ್ಯ ಸಚಿವ ಶಿವಾನಂದ ಪಾಟೀಲ್ ಸ್ವಕ್ಷೇತ್ರದಲ್ಲಿ ನಾಚಿಕೆಗೇಡಿನ ಸಂಗತಿ ನಡೆದಿದೆ. ಬಸವ ಭಕ್ತರು ಹಾಗೂ ಪ್ರಜ್ಞಾವಂತರಿಂದ ಅಸಮಾಧಾನ ವ್ಯಕ್ತವಾಗಿದ್ದು ಆಯೋಜಕರು ಕ್ಷಮೆ ಕೇಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

Next Story

RELATED STORIES