Top

ಹೆಸರಿಗೆ ಸಂಸದರ ಆದರ್ಶ ಗ್ರಾಮ, ಅಭಿವೃದ್ಧಿ ಮಾತ್ರ ಶೂನ್ಯ.!

ಹೆಸರಿಗೆ ಸಂಸದರ ಆದರ್ಶ ಗ್ರಾಮ, ಅಭಿವೃದ್ಧಿ ಮಾತ್ರ ಶೂನ್ಯ.!
X

ಹಾವೇರಿ : ಸಂಸದರ ಆದರ್ಶ ಗ್ರಾಮ ನರೇಂದ್ರ ಮೂದಿ ಅವರ ಕನಸ್ಸಿನ ಕೂಸು. ಈ ಯೋಜನೆ ಅಂದುಕೊಂಡಂತೆ ಸಾಕಾರಗೊಂಡಿದ್ದರೆ ಹಿಂದೂಳಿದ ಗ್ರಾಮಗಳು ಅಭಿವೃದ್ಧಿಗೊಂಡು ಮಾದರಿ ಗ್ರಾಮಗಳಾಗಿ ಹೊರ ಹೊಮ್ಮುತ್ತಿದ್ದವು‌. ಆದರೆ ಸಂಸದರು ಕಾಟಾಚಾರಕ್ಕೆ ಗ್ರಾಮವೊಂದನ್ನು ಆಯ್ದುಕೊಂಡು ಅಭಿವೃದ್ಧಿಗೊಳಿಸಿದೆ ನೆಪ ಹೇಳುತ್ತಿದ್ದಾರೆ. ಆ ಬಗ್ಗೆ ಮುಂದೆ ಓದಿ..

ಶಿಥಿಲಾವಸ್ಥೆಯಲ್ಲಿರೋ ಶಾಲೆ, ಅಭಿವೃದ್ದಿಗೊಳ್ಳದ ರಸ್ತೆ, ಚರಂಡಿಗಳು. ಆಕ್ರೋಶ ವ್ಯಕ್ತಪಡಿಸುತ್ತಿರೋ ಗ್ರಾಮಸ್ಥರು. ಅದ್ಹಾಗೆ ಈ ದೃಶ್ಯ ಕಂಡುಬರೋದು ಹಾವೇರಿ ಜಿಲ್ಲೆಯ ಹಿರೇಕರೂರು ತಾಲೂಕಿನ ಚಿನ್ನ ಮುಳಗುಂದ ಗ್ರಾಮದಲ್ಲಿ.

ಈ ಗ್ರಾಮವನ್ನು ಸಂಸದ ಶಿವಕುಮಾರ ಉದಾಸಿ 2015-16ನೇ ಸಾಲಿನಲ್ಲಿ ಸಂಸದ ಆದರ್ಶ ಗ್ರಾಮವನ್ನಾಗಿ ಮುಳಗುಂದ ಗ್ರಾಮ ಆಯ್ಕೆ ಮಾಡಿಕೊಂಡಿದ್ದರು. ಪ್ರಧಾನಿ ನರೇಂದ್ರ ಮೋದಿಯ ಕನಸಿನ ಕೂಸಿನ ಯೋಜನೆ ಮೂಲಕ ಮಾದರಿ ಗ್ರಾಮವನ್ನಾಗಿ ಮಾಡುವ ಉದ್ದೇಶ ಹೊಂದಿದ್ದರು.

ಆದರೇ 2015ರಿಂದ ಇಂದಿನವರೆಗೆ, ಗ್ರಾಮ ಅಷ್ಟೇನು ಅಭಿವೃದ್ಧಿ ಕಂಡಿಲ್ಲ. ಮುಳಗುಂದ ಗ್ರಾಮದಲ್ಲಿ ಇದೀಗ ಶಾಲೆ ಶಿಥಿಲಾವಸ್ಥೆಯಲ್ಲಿದೆ. ಹೆಣ ಹೂಳಲು ಸ್ಮಶಾನ ಇಲ್ಲದಾಗಿದೆ. ಹರಿಜನರ ಕಾಲೋನಿ ನಿವಾಸಿಗಳಿಗೆ ಹೊಸ ಮನೆ ನಿರ್ಮಾಣ ಭರವಸೆ ಹಾಗೆ ಉಳಿದಿದೆ. ಕುಡಿಯೋ ನೀರು, ಗ್ರಾಮದ ರಸ್ತೆ, ಚರಂಡಿ, ಬಸ್ ನಿಲ್ದಾಣ ಯಾವುದು ಅಭಿವೃದ್ಧಿ ಹೊಂದಿಲ್ಲಾ. ಹೀಗೆ ಹತ್ತು ಹಲವು ಸಮಸ್ಯೆಗಳು ಈ ಗ್ರಾಮದಲ್ಲಿ ಅಂದಿನಿಂದ, ಇಂದಿನವರೆಗೂ ಹಾಗೇ ಉಳಿದುಕೊಂಡಿವೆ.

ಇನ್ನು ಇಷ್ಟೇಲ್ಲಾ ಸಮಸ್ಯೆಗಳು ಮಾನ್ಯ ಎಂಪಿ ಸಾಹೇಬರಿಗೆ ಗೊತ್ತಿಲ್ಲಾ ಅಂತೇನು ಇಲ್ಲಾ. ಮುಳಗುಂದ ಗ್ರಾಮವನ್ನು ಸಂಸದ ಆದರ್ಶ ಗ್ರಾಮವನ್ನಾಗಿ ಆಯ್ಕೆ ಮಾಡಿಕೊಂಡ ಸಂದರ್ಭ ಈ ಗ್ರಾಮಸ್ಥರು ಸಮಸ್ಯೆಗಳನ್ನು ಎಳೆ, ಎಳೆಯಾಗಿ ಬಿಡಿ ಪತ್ರದ ಮೂಲಕ ಗ್ರಾಮಸ್ಥರು ತಿಳಿಸಿದ್ದಾರೆ.

ಅಲ್ಲದೆ ಇವರು ಈ ಗ್ರಾಮಕ್ಕೆ ಮೂರು,ನಾಲ್ಕು ಬಾರಿ ಭೇಟಿ ನೀಡಿದ ಸಂದರ್ಭ ಕಾರ್ಯಕ್ರಮ ನಡೆಸಲು ಗ್ರಾಮ ಪಂಚಾಯತ್ ನಿಂದಲೇ 2 ಲಕ್ಷಕ್ಕೂ ಅಧಿಕ ಹಣ ಬಳಕೆಯಾಗಿದೆ. ಆದರೆ ಇಲ್ಲಿ ಗ್ರಾಮ ಪಂಚಾಯತ್ ಅನುದಾನ ವ್ಯರ್ಥವಾಗಿದೆಯೆ ಹೊರತಾಗಿ, ಸಂಸದರಿಂದ ಒಂದು ನಯಾ ಪೈಸೆ ಅನುದಾನ ಬಂದಿಲ್ಲಾ ಅಂತಾ ಗ್ರಾಮಸ್ಥರು ಆಕ್ರೋಶ ವ್ಯಕ್ತಡಿದ್ದಾರೆ.

2015-16 ನೇ ಸಾಲಿನಲ್ಲಿ ಗ್ರಾಮವನ್ನು ಆಯ್ಕೆ ಮಾಡಿಕೊಂಡಿದ್ದೆ ಬಂತು. ಗ್ರಾಮದ ಅಭಿವೃದ್ಧಿಗೆ ನೀಲ ನಕ್ಷೆ ಸಿದ್ದಪಡಿಸಿದ್ದೆ ಬಂತು. ಕಾಗದಗಳನ್ನು ಸಿದ್ದಪಡಿಸಿದಾಗಿದೆ. ಆದರೆ ಅಭಿವೃದ್ಧಿ ಮಾತ್ರ ಆಗಿಲ್ಲಾ, ಹೀಗಾಗಿ ಎಂಪಿ ಶಿವಕುಮಾರ ಉದಾಸಿ ಕಾಗದದ ಹುಲಿಯಾಗಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ ಅವಧಿ ಮುಗಿಯುತ್ತಾ ಬಂದರೂ ಸಂಸದ ಆದರ್ಶ ಗ್ರಾಮದ ಸರ್ವಾಂಗೀಣ ಅಭಿವೃದ್ದಿಗೆ ಶ್ರಮಿಸದ ಎಂಪಿ ಶಿವಕುಮಾರ ಉದಾಸಿ, ಮಾತು ಕೊಟ್ಟು ಮರೆತ್ತಿದ್ದಾರೆ. ಜೊತೆಗೆ ಪ್ರಧಾನಿ ನರೇಂದ್ರ ಮೋದಿಯ ಆದರ್ಶ ಗ್ರಾಮದ ಕನಸಿನ ಕೂಸು ಯಾವ ಹಂತಕ್ಕೆ ತಲುಪಿದೆ ಎಂಬುದಕ್ಕೆ ಮುಳಗುಂದ ಗ್ರಾಮವೇ ಸಾಕ್ಷಿಯಾಗಿ ನಿಲ್ಲುತ್ತದೆ. ಇನ್ನಾದರೂ ಇತ್ತ ಸಂಸದರು ಗಮನ ಹರಿಸಿ, ಅಭಿವೃದ್ಧಿ ಕಾರ್ಯಗಳಿಗೆ ಒತ್ತುಕೊಡುವಂತಾಗಲಿ.

ವರದಿ : ರಾಜು ಅಣಬೇರ್, ಟಿವಿ5 ಹಾವೇರಿ

Next Story

RELATED STORIES