Top

ರಾಜ್ಯದಲ್ಲಿ ಕಾಡುಗಳ್ಳ ವೀರಪ್ಪನ್​ ಮೀರಿಸೋ ಮರಿ ಕಾಡುಗಳ್ಳರು.?

ರಾಜ್ಯದಲ್ಲಿ ಕಾಡುಗಳ್ಳ ವೀರಪ್ಪನ್​ ಮೀರಿಸೋ ಮರಿ ಕಾಡುಗಳ್ಳರು.?
X

ಚಿಕ್ಕಮಗಳೂರು : ರಾಜ್ಯದಲ್ಲಿ ಕಾಡುಗಳ್ಳ ವೀರಪ್ಪನ್​ ಮೀರಿಸೋ ಮರಿ ಕಾಡುಗಳ್ಳರು ಹುಟ್ಟಿಕೊಂಡಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಸದ್ಧಿಲ್ಲದೆ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಶ್ರೀಗಂಧದ ಮರಗಳ ಮಾರಣ ಹೋಮ ನಡೀತಿದೆ. ಅರೆ ಅದ್ಯಾರಪ್ಪಾ ಈ ಮರಿ ವೀರಪ್ಪನ್​ ಅಂತಿರಾ ನೀವೆ ನೋಡಿ ಈ ಹೈಟೆಕ್​ ಶ್ರೀಗಂಧ ಕಳ್ಳರ ಸ್ಟೋರಿ ಮುಂದೆ ಓದಿ.

ಕಾಫಿನಾಡು ಚಿಕ್ಕಮಗಳೂರಿನಲ್ಲಿ ಇತ್ತೀಚೆಗೆ ಕಾಡುಗಳ್ಳರ ಅಟ್ಟಹಾಸ ಹೆಚ್ಚಾಗಿದೆ. ಬೆಳೆದು ನಿಂತ ಶ್ರೀಗಂಧದ ಮರಗಳಿಗೆ ಕೊಡಲಿ ಹಾಕಿ ಲಕ್ಷಾಂತರ ಬೆಲೆ ಬಾಳುವ ಶ್ರೀಗಂಧವನ್ನ ದೋಚುತ್ತಿದ್ದಾರೆ. ಆದ್ರೆ ಇಲ್ಲೊಂದು ಗ್ಯಾಂಗ್ ಇದೇ ಕಾಯಕದಲ್ಲಿ ತೊಡಗಿದ್ದು ಟೈಂ ಕೆಟ್ಟಿತ್ತೋ ಏನೋ ತಾವೇ ತೋಡಿಕೊಂಡ ಗುಂಡಿಗೆ ಬಿದ್ದಿದ್ದಾರೆ.

ಬೆಳಗ್ಗೆ ಸಮಯ 8:30ತ್ತಾಗಿತ್ತು. ಚಿಕ್ಕಮಗಳೂರು ಕಡೆಯಿಂದ ವೇಗವಾಗಿ ಬರುತ್ತಿದ್ದ ಪಿಕಪ್​ ವಾಹನವೊಂದು ವಸ್ತಾರೆ ಗ್ರಾಮದ ತೀರುವಿನಲ್ಲಿ ಕ್ಯಾಂಟರ್​ಗೆ ಡಿಕ್ಕಿ ಹೊಡೆದು ಪಕ್ಕದ ಗದ್ದೆಗೆ ಹಾರಿದೆ. ನೋಡ ನೋಡ್ತಿದಂತೆ ಪಿಕಪ್​ ವಾಹದಲ್ಲಿದ್ದ ಮೂರ್ನಾಲ್ಕು ಮಂದಿ​ ಗಾಡಿಯನ್ನ ಅಲ್ಲೆ ಬಿಟ್ಟು ಪರಾರಿಯಾಗಿದ್ದಾರೆ. ಅರೆ ಯಾಕಪ್ಪಾ ಹಿಂಗೆ ಓಡ್ತಿದ್ದಾರೆ ಅಂತಾ ಅಲ್ಲಿನ ಸಸ್ಥಳಿಯರು ಸ್ಥಳಕ್ಕೆ ಹೋಗಿ ನೋಡಿದ್ರೆ ಸ್ಥಳೀಯರಿಗೆ ಶಾಕ್​ ಕಾದಿತ್ತು.

ನೋಡೋಕೆ ಖಾಲಿ ಇರೋ ವಾಹನದಂತೆ ಕಂಡ್ರು ಹತ್ತಿರಕ್ಕೆ ಹೋಗಿ ನೋಡಿದ್ಮೇಲೆ ಬಯಲಾಯ್ತು ಅಸಲಿಯತ್ತು. ಸುಮಾರು 5 ಲಕ್ಷಕ್ಕೂ ಹೆಚ್ಚು ಮೌಲ್ಯದ ಶ್ರೀಗಂಧ ತುಂಬಿದ ಗಾಡಿ ಇದಾಗಿತ್ತು. ವಾಹನದಲ್ಲಿ ಹೈಟೆಕ್​ ಮಾಳಿಗೆಯನ್ನು ನಿರ್ಮಿಸಿ ಶ್ರೀಗಂಧವನ್ನು ಅಕ್ರಮವಾಗಿ ಸಾಗಿಸುತ್ತಿದ್ದರು.

ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ವಾಹನ ಕಾರವಾರ ಮೂಲದ ವ್ಯಕ್ತಿಗೆ ಸೇರಿದ್ದು ಎಂಬ ಮಾಹಿತಿ ಸಿಕ್ಕಿದೆ. ಲಕ್ಷಾಂತರ ಮೌಲ್ಯದ ಗಂಧವನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಪರಾರಿಯಾಗಿರೋ ಕಳ್ಳರ ಎಡೆಮುರಿ ಕಟ್ಟಲು ಪಿಎಸ್​ಐ ರಾಘವೇಂದ್ರ ನೇತೃತ್ವದ ತಂಡ ತನಿಖೆ ಆರಂಭಿಸಿದೆ.

ವರದಿ : ಪ್ರವೀಣ್​ ಕುಮಾರ್​ ಟಿವಿ5 ಚಿಕ್ಕಮಗಳೂರು.

Next Story

RELATED STORIES