Top

ಕುಡಿಯುವ ನೀರಿಗಾಗಿ ಮೈದೂರು ಗ್ರಾಮದಲ್ಲಿ ಹಾಹಾಕಾರ.!

ಕುಡಿಯುವ ನೀರಿಗಾಗಿ ಮೈದೂರು ಗ್ರಾಮದಲ್ಲಿ ಹಾಹಾಕಾರ.!
X

ದಾವಣಗೆರೆ : ಮಲೆನಾಡು ಭಾಗದಲ್ಲಿ ನೆರೆಯ ಹಾವಳಿಗೆ ಜನ ತತ್ತರಗೊಂಡಿದ್ದರೆ ಇತ್ತ ಬಯಲು ಸೀಮೆ ಜನ ಕುಡಿಯೋ ನೀರಿಗೂ ತತ್ವಾರ ಪಡ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆಗಾಲದಲ್ಲೂ ಹನಿ ನೀರಿಗೆ ಹಾಹಾಕಾರ ಉಂಟಾಗಿದೆ ಜನರು ನೀರಿಗಾಗೀ ಪರಿತಪಿಸ ಬೇಕಾದ ಸ್ಥಿತಿ ಬಂದೋದಗಿದೆ. ಸತತ ಬರಗಾಲಕ್ಕೆ ಬಸವಳಿದ ಜನರು ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ದಾವಣಗೆರೆ ಜಿಲ್ಲೆ ಹರಪನಹಳ್ಳಿ ತಾಲೂಕಿನ ಗಡಿ ಗ್ರಾಮ ಮೈದೂರಿನಲ್ಲಿ ನೀರಿಗಾಗಿ ಹಾಹಾಕಾರ ಎದ್ದಿದೆ. ಸತತ ನಾಲ್ಕೈದು ವರ್ಷಗಳಿಂದ ಬರಗಾಲ ಎದುರಿಸಿದ್ದ ಜನಕ್ಕೆ ಈ ಬಾರಿಯೂ ಬರದ ಛಾಯೆ ಆವರಿಸಿದೆ. ಇತ್ತೀಚೆಗೆ ಒಂದೆರಡು ದಿನ ಸುರಿದ ಮಳೆಗೆ ಬೆಳೆಗಳು ಹಸಿರಾಗಿರೋದು ಬಿಟ್ಟರೇ ಯಾವುದೇ ಕೆರೆ-ಕಟ್ಟೆಗಳು ತುಂಬಿಲ್ಲ. ಹೀಗಾಗಿ ಕುಡಿವ ನೀರಿಗೆ ಹಾಹಾಕಾರ ಉಂಟಾಗಿದೆ. ಕಳೆದು ಮೂರು ವರ್ಷಗಳಿಂದಲೂ ಕುಡಿವ ನೀರಿಗೆ ಇದೇ ರೀತಿ ಸಮಸ್ಯೆ ಇದೆ.

ಈ ಗ್ರಾಮದಲ್ಲಿ 2000 ಕ್ಕೂ ಹೆಚ್ಚು ಜನಸಂಖ್ಯೆ ಇದ್ದು, ಒಂದೇ ನೀರಿನ ಟ್ಯಾಂಕ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಇದರಿಂದ ಮಹಿಳೆಯರು, ಮಕ್ಕಳು, ಪುರಷರಾಧಿಯಾಗಿ ಎಲ್ಲರೂ ಇರೋಬರೋ ಕೆಲ್ಸಾ ಬಿಟ್ಟು ನೀರಿನ ಟ್ಯಾಂಕ್ ಮುಂದೆ ಸರತಿ ಸಾಲು ನಿಲ್ಲೋ ಪರಿಸ್ಥಿರಿ ನಿರ್ಮಾಣವಾಗಿದೆ.

ಇನ್ನು ಕುಡಿವ ನೀರಿಗೆ ಕಳೆದ ನಾಲ್ಕೈದು ವರ್ಷಗಳಿಂದ ಇದೇ ಸಮಸ್ಯೆ ಇದರೂ ಪರ್ಯಾಯ ವ್ಯವಸ್ಥೆ ಬಗ್ಗೆ ಯಾವೊಬ್ಬ ಜನಪ್ರತಿನಿಧಿಯೂ ತಲೆಕೆಡಿಸಿಕೊಂಡಿಲ್ಲ. ಗ್ರಾಮ ಪಂಚಾಯಿತಿ ಪಕ್ಕದಲ್ಲೇ ಶುದ್ಧ ಕುಡಿವ ನೀರಿನ ಘಟಕ ನಿರ್ಮಾಣ ಮಾಡಿದ್ದು, ನೀರಿಲ್ಲದೆ ಹಾಳಾಗುತ್ತಿದೆ.

ಮೈದೂರು ಗ್ರಾಮ ಹರಪನಹಳ್ಳಿ ತಾಲೂಕಿನ ಗಡಿ ಗ್ರಾಮ ಆಗಿರೋದ್ರಿಂದ ಪಂಚಾಯಿತಿ ಅಧಿಕಾರಿಗಳಾಗಲಿ, ಶಾಸಕ, ಸಂಸದರು ಸೇರಿದಂತೆ ಯಾರೂ ಕೂಡ ಈ ಬಗ್ಗೆ ತಲೆಕೆಡಿಸಿಕೊಡಿಲ್ಲ. ಯಾರನ್ನೇ ಹೋಗಿ ಕೇಳಿದ್ರೂ ನೋಡೋಣ, ಮಾಡೋಣ ಅನ್ನೋ ಉತ್ತರ ಬಿಟ್ರೆ ಪರಿಹಾರ ಮಾತ್ರ ಸಿಗ್ತಿಲ್ಲ ಅನ್ನೋದು ಗ್ರಾಮಸ್ಥರ ಅಳಲು.

ಸತತ ನಾಲ್ಕೈದು ವರ್ಷಗಳಿಂದ ಬರ ಪರಿಸ್ಥಿತಿಯಿಂದ ಬಳಲಿದ್ದ ಜನ ಈ ಬಾರಿಯೂ ಕುಡಿವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಗ್ರಾಮದಲ್ಲಿನ ಬೋರ್ ವೆಲ್ ಗಳು ಬತ್ತಿ ಹೋಗಿದ್ದು, ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಈ ಗ್ರಾಮಕ್ಕೆ ಕುಡಿಯುವ ನೀರು ಒದಗಿಸಿ ಕೊಡಲಿ ಎಂದು ಮನವಿ ಮಾಡಿದ್ದಾರೆ.

ವರದಿ : ಪ್ರವೀಣ್ ಬಾಡ, ಟಿವಿ5 ದಾವಣಗೆರೆ

Next Story

RELATED STORIES