Top

ಸಿಎಂ ರೇಸ್​ನಲ್ಲಿ ದೇಶಪಾಂಡೆ? ಕುಮಾರಸ್ವಾಮಿ ಬಾಂಬ್​ಗೆ ನಡುಗಿದ 'ಕೈ'

ಸಿಎಂ ರೇಸ್​ನಲ್ಲಿ ದೇಶಪಾಂಡೆ? ಕುಮಾರಸ್ವಾಮಿ ಬಾಂಬ್​ಗೆ ನಡುಗಿದ ಕೈ
X

ಮತ್ತೆ ನಾನೇ ಸಿಎಂ ಆಗ್ತೇನೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿವಾದದ ಬೆನ್ನಲ್ಲೇ ಸಿಎಂ ಹೆಚ್.ಡಿ.ಕುಮಾರಸ್ವಾಮಿ ದೆಹಲಿಯಲ್ಲಿ ಹೊಸ ಬಾಂಬ್ ಸಿಡಿಸಿದ್ದಾರೆ. ಸಿಎಂ ಆಗಲು ದೇಶಪಾಂಡೆ ಬಯಸಿದ್ದರು ಎಂಬ ಹೇಳಿಕೆ ಇದೀಗ ಕಾಂಗ್ರೆಸ್ ಪಾಳಯದಲ್ಲಿ ನಡುಕ ಸೃಷ್ಟಿಸಿದೆ.

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯನ್ನು ಭೇಟಿಯಾಗಲು ದೆಹಲಿಗೆ ತೆರಳಿರುವ ಕುಮಾರಸ್ವಾಮಿ, ಮಾಧ್ಯಮದ ಮುಂದೆ ಈ ಹೇಳಿಕೆ ನೀಡಿದರು.

ಸಿದ್ದರಾಮಯ್ಯ ಮತ್ತೆ ಸಿಎಂ ಆಗಬಯಸಿದ್ದಾರೆ. ಆದರೆ ಆರ್.ವಿ.ದೇಶಪಾಂಡೆಯವರೂ ಸಿಎಂ ಆಗಲಿ ಎಂಬ ಆಸೆ ಕೆಲವರಲ್ಲಿ ಇರುತ್ತದೆ ಎನ್ನುವ ಮೂಲಕ ಸಿದ್ದರಾಮಯ್ಯ ಹೇಳಿಕೆಗೆ ಟಾಂಗ್ ನೀಡಿದ್ದಾರೆ.

ಅಲ್ಲದೇ ಸಿದ್ದರಾಮಯ್ಯ ಒಬ್ಬ ನಾಯಕರಾಗಿದ್ದಾರೆ, ಅವರಂತೆಯೇ ಆರ್.ವಿ.ದೇಶಪಾಂಡೆಯವರು ಹಿರಿಯ ನಾಯಕರಾಗಿದ್ದಾರೆ. ಅವರಿಗೂ ಸಿಎಂ ಆಗುವ ಆಸೆಯಿರುತ್ತದೆ ಎನ್ನುವ ಮೂಲಕ ಸಿದ್ದರಾಮಯ್ಯ ವಿರುದ್ಧ ದೇಶಪಾಂಡೆ ಅವರನ್ನು ಸಿಎಂ ಎತ್ತಿಕಟ್ಟಿದ್ದಾರೆ.

ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಸಚಿವ ಆರ್.ವಿ.ದೇಶಪಾಂಡೆ, ಕುಮಾರಸ್ವಾಮಿಯವರು ನಾನು ಮುಖ್ಯಮಂತ್ರಿಯಾಗಬೇಕೆಂದು ಹೇಳಿರಬಹುದು, ಆ ಅರ್ಹತೆಯೂ ನನಗಿರಬಹುದು. ಆದರೆ ಅದರ ಅವಶ್ಯಕತೆ ನನಗಿಲ್ಲ. ಬೇಜವಾಬ್ದಾರಿಯಿಂದ ಮಾತನಾಡುವ ವ್ಯಕ್ತಿ ಸಿದ್ದರಾಮಯ್ಯ ಅಲ್ಲ. ನಾವು ಈಗಾಗಲೇ ಸ್ಪಷ್ಟವಾಗಿ ಹೇಳಿದ್ದೇವೆ, ಸಮ್ಮಿಶ್ರ ಸರ್ಕಾರಕ್ಕೆ ನಾವು ಸಂಪೂರ್ಣ ಬೆಂಬಲ ನೀಡಿದ್ದೇವೆ. ಐದು ವರ್ಷ ಕುಮಾರಸ್ವಾಮಿಯವರೇ ಮುಖ್ಯಮಂತ್ರಿ ಎಂದು ಸ್ಪಷ್ಟನೆ ನೀಡಿದರು.

ಸದ್ಯ ರಾಜ್ಯ ರಾಜಕೀಯದಲ್ಲಿ ಸಿಎಂ ಸ್ಥಾನಕ್ಕಾಗಿ ಪೈಪೋಟಿ ನಡೆಯುತ್ತಿದ್ದು, ಸಿಎಂ ಕುಮಾರಸ್ವಾಮಿಯವರೇ ಇದಕ್ಕೆ ನೀರೆರೆಯುತ್ತಿದ್ದಾರಾ ಎಂಬ ಅನುಮಾನ ಮೂಡಿದೆ. ಅಲ್ಲದೇ ಸಿಎಂ ಸ್ಥಾನಕ್ಕಾಗಿ ಪಕ್ಷದ ಒಳಗೊಳಗೆ ಪೈಪೋಟಿ ನಡೆದು, ಸಮ್ಮಿಶ್ರ ಸರ್ಕಾರ ಪತನವಾಗುವ ಸಾಧ್ಯತೆಯೂ ಇರುವಂತಿದೆ.

Next Story

RELATED STORIES