Top

ಸಹಕಲಾವಿದನ ಮೇಲೆ ಚಾಲೆಂಜಿಂಗ್‌ ಸ್ಟಾರ್‌ ಹಲ್ಲೆ..?

ಸಹಕಲಾವಿದನ ಮೇಲೆ ಚಾಲೆಂಜಿಂಗ್‌ ಸ್ಟಾರ್‌ ಹಲ್ಲೆ..?
X

ಬೆಂಗಳೂರು : ಯಜಮಾನ ಚಿತ್ರೀಕರಣದ ವೇಳೆ ಸಹಕಲಾವಿದನಿಗೆ ಚಾಲೆಂಜಿಂಗ್‌ ಸ್ಟಾರ್ ದರ್ಶನ್‌ ಗರಂ ಆದ ಘಟನೆ, ಕೂಡಿಗೇಹಳ್ಳಿ ಬಳಿ ನಡೆದಿದೆ.

ಚಾಲೆಂಜಿಂಗ್ ಸ್ಟಾರ್‌ ನಟನೆಯ ಯಜಮಾನ ಚಿತ್ರದ ಶೂಟಿಂಗ್‌ ನಗರದ ಕೂಡಿಗೇಹಳ್ಳಿ ಬಳಿ ಚಿತ್ರೀಕರಣಗೊಳ್ಳುತ್ತಿತ್ತು. ಈ ವೇಳೆ ಸಹಕಲಾವಿದನೊಬ್ಬ, ಚಿತ್ರೀಕರಣ ದೃಶ್ಯವಾಳಿಗಳನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಳ್ಳುತ್ತಿದ್ದರು.

ಈ ಬಗ್ಗೆ ಗಮನಿಸಿದ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌, ಸಹಕಲಾವಿದನನ್ನು ಶೂಟಿಂಗ್ ದೃಶ್ಯಾವಳಿಗಳನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಳ್ಳುವುದು ಸರಿಯಲ್ಲ ಎಂದು ಗದರಿ ಬುದ್ದಿವಾದ ಹೇಳಿದ ಪ್ರಸಂಗ ನಡೆಯಿತು.

ಆದರೇ ಹೀಗೆ ನಟ ದರ್ಶನ್‌ ಗದರಿಕೊಂಡ ವಿಚಾರವನ್ನೇ, ಕೆಲ ಮಾಧ್ಯಮಗಳಲ್ಲಿ ಸಹಕಲಾವಿದನ ಮೇಲೆ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಲ್ಲೆ ಎಂದು ಬಿಂಬಿಸಲಾಗಿತ್ತು.

ಈ ಕುರಿತು ಟಿವಿ5ಕ್ಕೆ ಸ್ಪಷ್ಟನೆ ನೀಡಿದ ಯಜಮಾನ ಚಿತ್ರದ ನಿರ್ಮಾಪಕ ಬಿ ಸುರೇಶ್‌, ಸಹಕಲಾವಿದನ ಮೇಲೆ ದರ್ಶನ್‌ ದೈಹಿಕ ಹಲ್ಲೆ ನಡೆಸಿಲ್ಲ. ಇಂತಹ ಯಾವುದೇ ಘಟನೆ ಚಿತ್ರೀಕರಣದ ವೇಳೆ ನಡೆದಿಲ್ಲ. ನಟ ದರ್ಶನ್‌ ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಳ್ಳುತ್ತಿದ್ದ ಸಹಕಲಾವಿದನಿಗೆ ಹಾಗೆ ಚಿತ್ರೀಕರಿಸಿಕೊಳ್ಳುವುದು ತಪ್ಪು ಎಂದು ಬುದ್ದಿವಾದ ಹೇಳಿದರು ಎಂದು ಸ್ಪಷ್ಟಪಡಿಸಿದ್ದಾರೆ.

ಒಟ್ಟಾರೆಯಾಗಿ ದರ್ಶನ್‌ ಅಭಿಮಾನಿಗಳು ತುದಿಗಾಲಲ್ಲಿ ನಿಂತು ನಿರೀಕ್ಷೆ ಮಾಡುತ್ತಿದ್ದ ಯಜಮಾನ ಚಿತ್ರದ ಚಿತ್ರೀಕರಣ ಸರಾಗವಾಗಿ ನೆಡೆಯುತ್ತಿದ್ದು, ಕೆಲವೇ ದಿನಗಳಲ್ಲಿ ಅಭಿಮಾನಿಗಳನ್ನು ರಂಜಿಸಲು ತೆರೆಯ ಮೇಲೆ ಬರಲಿದೆ.

Next Story

RELATED STORIES