Top

ಪೊಲೀಸ್‌ ಪೇದೆಯ ಕೈಯಲ್ಲಿ ಅರಳಿದೆ 'ಕಲಾಕುಂಚ'

ಪೊಲೀಸ್‌ ಪೇದೆಯ ಕೈಯಲ್ಲಿ ಅರಳಿದೆ ಕಲಾಕುಂಚ
X

ದಾವಣಗೆರೆ : ಪೊಲೀಸ್ ಎಂದರೆ ಒರಟು, ಖಡಕ್ ಎಂಬಿತ್ಯಾದಿ ಭಾವನೆಗಳು ಜನರಲ್ಲಿ ಇದೇ.....ಆದರೆ ಅಂತಹ ಪೊಲೀಸರಲ್ಲೂ ಸಂಗೀತಕಾರ,ಕಲಾವಿದ ಅಥವಾ ಕವಿಯೂ ಇದ್ದಾನೆ ಎಂಬುದನ್ನು ಇಲ್ಲೋಬ್ಬ ಪೊಲೀಸ್ ತೋರಿಸಿಕೊಟ್ಟಿದ್ದಾನೆ... ಆತನ ಕಲಾಕೃತಿಗೆ ಇಡೀ ಪೊಲೀಸ್ ಇಲಾಖೆ ಮನಸೋತಿದೆ. ಹಾಗಿದ್ದರೇ ಯಾರಾತಾ ಅಂತೀರಾ ಈ ಸ್ಟೋರಿ ಓದಿ..

ಆತ ಕೈಯಲ್ಲಿ ಲಾಠಿ ಹಿಡಿದರೆ ಪೊಲೀಸ್, ಕೈಯಲ್ಲಿ ಕುಂಚ ಹಿಡಿದರೆ ಕಲಾವಿದ. ಹೌದು ದಾವಣಗೆರೆಯ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೇದೆ ಛಾಂದ್ ಭಾಷಾನೇ ಈ ಕಲಾವಿದ. ವೃತ್ತಿಯಲ್ಲಿ ಪೊಲೀಸ್ ಆಗಿರೋ ಚಾಂದ್ ಬಾಷಾ ಅವರ ಕಲಾ ಕುಂಚದಲ್ಲಿ ಹತ್ತಾರು ಚಿತ್ರಗಳು ಅರಳಿವೆ. ಕ್ಯಾನ್ವಸ್, ವಾಟರ್ ಪೈಯಿಟಿಂಗ್, ಅಕ್ರಲಿಕ್ ಪೈಯಿಂಟಿಗ್, ಇಂಕ್ ಬ್ಲೋ ಆರ್ಟ್ ಮಾಡೋದು ಇವರ ಹವ್ಯಾಸ.

ಮೂಲತಃ ಬಳ್ಳಾರಿ ಜಿಲ್ಲೆಯವರಾದ ಛಾಂದ್ ಭಾಷಾ ಆರನೇ ತರಗತಿ ಓದುತ್ತಿದ್ದಾಗ ಚಿತ್ರಕಲೆ ಕಲಿತಿದ್ದರು. ಪಿಯುಸಿ ಮುಗಿದ ಮೇಲೆ ಪೊಲೀಸ್ ಇಲಾಖೆ ಸೇರಿದ ಛಾದ್ ಬಿಡುವಿನ ವೇಳೆಯಲ್ಲಿ ಚಿತ್ರ ಬಿಡಿಸಲು ಆರಂಭಿಸಿದರು. ಯಾರ ಬಳಿಯೂ ಚಿತ್ರಕಲೆಯನ್ನು ಕಲಿಯದೇ ಛಾದ್ ಭಾಷಾ ಯುಟ್ಯೂಬ್ ನಲ್ಲಿ ಬಂದ ಚಿತ್ರಗಳನ್ನು ನೋಡಿಕೊಂಡು ಚಿತ್ರ ಬಿಡಿಸಲು ಆರಂಭಿಸಿದ್ದಾನೆ. ಪೊಲೀಸ್ ಕೆಲಸದ ಜೊತೆಗೆ ಚಿತ್ರಕಲೆಯನ್ನು ಕೂಡ ಮೈಗೂಡಿಸಿಕೊಂಡಿದ್ದಾರೆ.

ನೇಲ್ ಅಂಡ್ ತ್ರಡ್ ಆರ್ಟ ಕಲೆ ಪರಿಣಿತರಾಗಿರುವ ಛಾಂದ್ ಭಾಷಾ ಸುಮಾರು 2,500 ಮಳೆಗಳನ್ನು ಬಳಸಿ ಅದರಲ್ಲಿ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪನವರ ಭಾವಚಿತ್ರ ಬಿಡಿಸಿ, ಧಾರದಿಂದ ಸಿಂಗಾರ ಮಾಡಿದ್ದಾನೆ. ಸುಮಾರು ಎಂಟು ತಿಂಗಳ ಕಾಲ ಟೈಂ ತೆಗೆದುಕೊಂಡಿರುವ ಛಾಂದ್, ಇದೇ ರೀತಿ ಸುಮಾರು 20 ಕ್ಕೂ ಹೆಚ್ಚು ಚಿತ್ರಗಳನ್ನು ಬಿಡಿಸಲು ಸಿದ್ದತೆ ಮಾಡಿಕೊಂಡಿದ್ದಾರೆ.

ಛಾಂದ್ ಭಾಷಾ ಕಳೆದ ಎರಡು ತಿಂಗಳ ಹಿಂದೆ ಬೆಂಗಳೂರಿನಲ್ಲಿ ಇಲಾಖೆವತಿಯಿಂದ ಹಮ್ಮಿಕೊಂಡಿದ್ದ ಚಿತ್ರ ಕಲಾಪ್ರದರ್ಶನದಲ್ಲಿ ಪಾಲ್ಗೊಂಡಿದ್ದರು. ಅದರಲ್ಲಿ ತಾವು ಚಿತ್ರೀಸಿದ ಕಲಾಕೃತಿಗಳನ್ನು ಪ್ರದರ್ಶನ ಮಾಡಿ, ಹಿರಿಯ ಅಧಿಕಾರಿಗಳಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಛಾಂದ್ ಭಾಷಾನ ಚಿತ್ರ ಕೆಲೆಗೆ ಪೊಲೀಸ್ ಇಲಾಖೆಯಿಂದಲೂ ಕೂಡ ಸಾಕಷ್ಟು ಬೆಂಬಲ ಇದೇ, ಆತನ ಕಲೆ ಉಳಿಸುವ ದೃಷ್ಟಿಯಿಂದ ಆತನಿಗೆ ಅನುಕೂಲವಾಗುವ ಡ್ಯೂಟಿಯನ್ನು ಹಾಕಿಕೊಡುತ್ತಿದ್ದ, ಆತನ ಕೆಲೆಗೆ ಇಲಾಖೆಯಿಂದ ಸೂಕ್ತ ಸಹಕಾರ ನೀಡುವುದಾಗಿ ದಾವಣಗೆರೆ ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿಗ ಆರ್‌.ಚೇತನ್‌ ತಿಳಿಸಿದ್ದಾರೆ.

ಒಟ್ಟಿನಲ್ಲಿ ಪೊಲೀಸರಲ್ಲಿಯೂ ಕೂಡ ಕಲಾವಿದನಿದ್ದಾನೆ ಎಂಬುದನ್ನು ಛಾಂದ್ ಭಾಷಾ ತೋರಿಸಿ ಕೊಟ್ಟಿದ್ದಾರೆ. ಏನೇ ಆಗಲೀ ಪೊಲೀಸ್ ಕೆಲಸದ ಜೊತೆಗೆ ಕಲೆಯನ್ನು ಉಳಿಸಿ ಬೆಳೆಸುತ್ತಿರುವ ಛಾಂದ್ ಭಾಷನ ಈ ಕಾರ್ಯಕ್ಕೆ ಹ್ಯಾಡ್ ಸಾಫ್ಟ್ ಹೇಳಲೇ ಬೇಕು.

ವರದಿ : ಪ್ರವೀಣ್ ಬಾಡ, ಟಿವಿ5 ದಾವಣಗೆರೆ

Next Story

RELATED STORIES