Top

ಲಾಠಿ ಹಿಡಿದ ಕೈಯಲ್ಲಿ ಪೊರಕೆ ಹಿಡಿದು ನಿಂತ್ರು..!

ಲಾಠಿ ಹಿಡಿದ ಕೈಯಲ್ಲಿ ಪೊರಕೆ ಹಿಡಿದು ನಿಂತ್ರು..!
X

ಯಾದಗಿರಿ : ಟೈಟಲ್ ಓದಿದ ತಕ್ಷಣ, ಇದೇನಪ್ಪ ಪೊಲೀಸರು ಲಾಠಿ ಹಿಡಿದು, ಜನರ ರಕ್ಷಣೆ ಮಾಡಬೇಕಾದವರು, ಪೊರಕೆ ಹಿಡಿದು ಏನ್‌ ಜಗಳಕ್ಕೆ ನಿಂತ್ರ ಎಂದು ಊಹಿಸಬೇಡಿ. ಸ್ಪಚ್ಛತೆಗಾಗಿ ಪೊಲೀಸರು ಪೊರಕೆ ಹಿಡಿದರು.

ಹೌದು ಯಾದಗಿರಿಯಲ್ಲಿ, ಇಂತಹ ಘಟನೆಗೆ ಪೊಲೀಸರು ಸಾಕ್ಷಿಯಾದರು.

ರಾಜ್ಯದ ಅತ್ಯಂತ ಹಿಂದುಳಿದ ಜಿಲ್ಲೆ ಎಂದೇ ಕರೆಸಿಕೊಳ್ಳುವ ಈ ಜಿಲ್ಲೆಯ ಪೊಲೀಸರು, ಅಪರೂಪದ ಕ್ಷಣಕ್ಕೆ ಸಾಕ್ಷಿಯಾದರು.

ಜಿಲ್ಲೆಯ ಎಲ್ಲೆಂದರಲ್ಲಿ, ಕಸದ ರಾಶಿಯಿಂದ ಬೇಸತ್ತಿದ್ದ ಪೊಲೀಸರು, ಅಧಿಕಾರಿಗಳಗೆ ಕ್ಲೀನ್‌ ಮಾಡಲು ಹೇಳಿ ಸಾಕಾಗಿ ಹೋಗಿದ್ದರು. ಹೀಗಾಗಿ ಕಳೆದ ನಿನ್ನೆ ತಾವೇ ಲಾಠಿ ಬಿಟ್ಟು, ಕೈಯಲ್ಲಿ ಪೊರಕೆ ಹಿಡಿದು ನಿಂತರು.

ನಗರದ ಚರಂಡಿ, ರಸ್ತೆಯ ಮೇಲಿದ್ದ ರಾಶಿ ರಾಶಿ ಕಸವನ್ನು, ತಾವೇ ಸ್ವತಹ ಪೊರಕೆ ಹಿಡಿದು ಗುಡಿಸಿದ, ಪೊಲೀಸರು, ನಗರವನ್ನು ಸ್ವಚ್ಛ ನಗರವಾಗಿಸಲು ಪಣ ತೊಟ್ಟರು.

ಈ ಪೊಲೀಸರ ಜೊತೆಗೆ, ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾರ್ಟಿನ್‌ ಕೂಡ ಚರಂಡಿ ಕ್ಲೀನ್‌ ಮಾಡುವ ಮೂಲಕ ಗಮನ ಸೆಳೆದಿದ್ದು ವಿಶೇಷವಾಗಿತ್ತು.

ನಗರದ ಸುಭಾಷ್ ವೃತ್ತ, ಚಿತ್ತಾಪುರ ರಸ್ತೆ ಸೇರಿದಂತೆ ಪ್ರಮುಖ ರಸ್ತೆಯಲ್ಲಿ ಸ್ವಚ್ಛ ಕಾರ್ಯ ಮಾಡಿದರು. ರಸ್ತೆಯಲ್ಲಿ, ಚರಂಡಿಯಲ್ಲಿ ಕಸ ಬಿಸಾಕುವುದರಿಂದ ಸಂಕ್ರಾಮಿಕ ರೋಗಗಳು ಹರಡುತ್ತವೆ.

ಹೀಗಾಗಿ ನಾವು ಸ್ವಚ್ಛತೆಗೆ ಮೊದಲು ಆದ್ಯತೆ ನೀಡಬೇಕಾಗಿದೆ. ಈ ವೇಳೆ ಎಸ್ಪಿ ಯಡಾ ಮಾರ್ಟಿನ್, ಡಿವೈಎಸ್ಪಿ ಪಾಂಡುರಂಗ, ನಗರಸಭೆ ಪೌರಾಯುಕ್ತ ಸಂಗಪ್ಪ ಉಪಾಸೆ ಸಾಥ್‌ ನೀಡಿದರು.

ಇವರ ಜೊತೆಗೆ ವಿವಿಧ ಪೊಲೀಸ್ ಅಧಿಕಾರಿಗಳು ಹಾಗೂ ನೂರಾರು ಜನರು ಪೊಲೀಸ್ ಸಿಬ್ಬಂದಿಗಳು, ವೈದ್ಯರು ಖಾಕಿ ಪಡೆಗಳ ಜೊತೆಗೆ ಕೈಜೊಡಿಸಿದ್ದು ವಿಶೇಷವಾಗಿತ್ತು.

ಒಟ್ಟಿನಲ್ಲಿ ಪೊಲೀಸ್ ಇಲಾಖೆ ಮಾಡಿದ ಸ್ವಚ್ಛತೆ ಆಂದೋಲನಕ್ಕೆ ಸಾರ್ವಜನಿಕರಿಂದ ವ್ಯಾಕ ಬೆಂಬಲ ವ್ಯಕ್ತವಾಗಿದಂತ್ತು ಸುಳ್ಳಲ್ಲ.

ಈ ಮೂಲಕ ನಗರದ ಜನರು ಇನ್ನಾದ್ರು ಕಸ ಮುಕ್ತ ನಗರಕ್ಕೆ ಕೈ ಜೋಡಿಸುತ್ತಾರ ಮತ್ತೆ ರಾಶಿ ರಾಶಿ ಕಸವನ್ನು ಹಾಕಿ ಸಾಂಕ್ರಾಮೀಕ ರೋಗಕ್ಕೆ ಬಲಿ ಯಾಗತ್ತಾರಾ ಅನ್ನೂದನ್ನಾ ಕಾದು ನೋಡಬೇಕು.

ವರದಿ : ಬಾಳಗೌಡ ಪಾಟೀಲ, ಟಿವಿ5 ಯಾದಗಿರಿ

Next Story

RELATED STORIES