Top

ಇದಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಇಷ್ಟ ಆಗೋದು.!

ಇದಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಇಷ್ಟ ಆಗೋದು.!
X

ರಾಮನಗರ : ಸಮ್ಮಿಶ್ರ ಸರ್ಕಾರ ಯಾವುದೇ ಅಡ್ಡಿ ಆತಂಕವಿಲ್ಲದೇ 100ನೇ ದಿನಕ್ಕೆ ಕಾಲಿಡುವ ನಿಟ್ಟಿನಲ್ಲಿ ಸಾಗುತ್ತಿದೆ. ಇಂತಹ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿ ಹೆಚ್‌ಡಿಕೆ ಮಾಡಿದ ಕಾರ್ಯಗಳು ತುಂಬಾನೇ..

ಅಂದಹಾಗೇ, ಮುಖ್ಯಮಂತ್ರಿ ಬ್ಯೂಸಿ ಶೆಡ್ಯೂಲ್‌ ಕಾರ್ಯಕ್ರಮಗಳ ಮಧ್ಯೆ, ಕೆಆರ್‌ಎಸ್ ನಿಂದ ರಾಮನಗರಕ್ಕೆ ಇಂದು ತೆರಳುತ್ತಾ ಇದ್ದರು.

ದಾರಿ ಮಧ್ಯೆ ಏನ್‌ ಅನ್ನಿಸಿತೋ ಗೊತ್ತಿಲ್ಲ. ಇದ್ದಕ್ಕಿದ್ದಹಾಗೇ ಶ್ರೀರಂಗಪಟ್ಟಣದ ಬೆಳಗೊಳ ಗ್ರಾಮದ ರಸ್ತಯಲ್ಲಿ 'ಹೇ ಡ್ರೈವರ್ ಕಾರು ನಿಲ್ಲಿಸಪ್ಪ' ಎಂದು ಬಿಟ್ಟರು. ಕಾರು ಚಲಾಯಿಸುತ್ತಿದ್ದ ಚಾಲಕ ತಕ್ಷಣ ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಕಾರು ನಿಲ್ಲಿಸಿದರು.

ದೂರದಲ್ಲಿ ಹೂ ಮಾರುತ್ತಿದ್ದ ಪುಟ್ಟ ಬಾಲಕಿಯನ್ನು ಹತ್ತಿರ ಕರೆ ಮುಖ್ಯಮಂತ್ರಿಗಳು, ಏನ್‌ ಹೆಸರು ಪುಟ್ಟ ನಿಂದು ಎಂದು ಕೇಳಿದರು. ಬಾಲಕಿ ಶಾಬಾಬ್ತಾಜ್‌ ಎಂದು ಉತ್ತರಿಸಿತು.

ಅಲ್ಲ ಯಾಕ್‌ ಪುಟ್ಟಿ ಶಾಲೆಗೆ ಹೋಗೋದು ತಪ್ಪಿಸಿ, ಹೂ ಮಾರುತ್ತಾ ಇದ್ದೀಯ ಎಂದು ಪ್ರಶ್ನೆ ಮಾಡಿದರು.

ಆ ಪುಟ್ಟ ಬಾಲಕಿ ಒಂದು ಕ್ಷಣ ತಬ್ಬಿಬ್ಬಾದಳು. ನಿಧಾನವಾಗಿ ಸಾವರಿಸಿಕೊಂಡು..

'ಸರ್ ಶಾಲೆಗೆ ರಜೆ ಕೊಟ್ಟಿದ್ದಾರೆ. ಹೀಗಾಗಿ ಹೂ ಮಾರುತ್ತಿದ್ದೇನೆ'ಎಂದು ಹೇಳಿದಳು.

ಹೌದಾ...! ಎಂದ ಮುಖ್ಯಮಂತ್ರಿಗಳು... ಅಲ್ಲಮ್ಮ ಇಷ್ಟು ಸಣ್ಣ ವಯಸ್ಸಿನಲ್ಲಿ ಹೀಗೆ ಹೂ ಮಾರುವ ಕಷ್ಟ ಏನ್‌ ಇದೆ ಎಂದು ಮರು ಪ್ರಶ್ನೆ ಹಾಕಿದರು.

ಪುಟ್ಟ ಬಾಲಕಿ.. ಮನೆಯಲ್ಲಿ ಕಷ್ಟ...

ತಂದೆ-ತಾಯಿಗಳು ಕೂಲಿ ಮಾಡಿ ನನ್ನು ಓದಿಸುತ್ತಿದ್ದಾರೆ. ಹೀಗೆ ಶಾಲೆಯ ರಜಾ ದಿನಗಳಲ್ಲಿ ಹೂ ಮಾರಿ ಬಂದ ಹಣದಲ್ಲಿ ನಾನು ಕುಟಂಬಕ್ಕೆ ನೆರವಾಗುತ್ತಿದ್ದೇನೆ ಎಂದಳು..

ಹೀಗೆ ಪುಟ್ಟ ಬಾಲಕಿ ಅಂದಿದ್ದೇ ತಡ... ಮುಖ್ಯಮಂತ್ರಿಗಳ ಹೃದಯಾಂತರಾಳದಲ್ಲಿ ಕ್ಷಣಕಾಲ ಮೌನ ಆವರಿಸಿತು. ಹೊರಗೆ ಬರದ ದುಖ, ಬಾಲಕಿಯ ಮಾತಿಗೆ ಭಾವುಗಕರಾಗುವಂತೆ ಮಾಡಿತು.

ಕೊನೆಗೆ... ಬಾ ಇಲ್ಲಿ ಪುಟ್ಟ... ಇದು ನನ್ನ ನಂಬರ್... ತಗೋ... ನಿಮ್ಮ ಅಪ್ಪನಿಗೆ ಕೊಟ್ಟು ನನ್ನನ್ನು ಯಾವಾಗಲಾದರೂ ಭೇಟಿ ಆಗೋಕೆ ಹೇಳು ಎಂದರು...

ಇದನ್ನು ನಿರೀಕ್ಷೆ ಮಾಡಿರದ ಪುಟ್ಟ ಬಾಲಕಿ... ಕೊಟ್ಟ ನಂಬರ್ ಪಡೆದು... ಅಲ್ಲ 'ನೀವು ಯಾರು ಅಂತ ಗೊತ್ತಾಗಲಿಲ್ಲ' ಎಂದು ಪ್ರಶ್ನೆ ಮಾಡಿಯೇ ಬಿಟ್ಟಳು..

ಹೂ ಮಾರುತ್ತಿದ್ದ ಪುಟ್ಟ ಬಾಲಕಿಯ ಪ್ರಶ್ನೆಗೆ ನಗು ಮೊಗದಿಂದಲೇ ಉತ್ತರಿಸಿದ ಹೆಚ್‌ ಡಿ ಕುಮಾರಸ್ವಾಮಿ.. ಪುಟ್ಟ ನಾನು ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ ಅಂದ್ರು..

ನಿಮ್ಮ ಅಪ್ಪನಿಗೆ ನಾನು ಕೊಟ್ಟೆ ಅಂತ ಈ ನಂಬರ್ ಕೊಟ್ಟು ಕರೆ ಮಾಡಿ ಯಾವಾಗಾದರೂ ಬರೋಕೆ ಹೇಳು. ನಿನ್ನ ವಿದ್ಯಾಭ್ಯಾಸಕ್ಕೆ ಸಹಾಯಮಾಡುವುದಾಗಿ ತಿಳಿಸಿದರು.

ಜೊತೆಗೆ ಚೆನ್ನಾಗಿ ಓದಬೇಕು ಎಂದು ತಲೆ ನೇವರಿಸಿ, ಹೇಳಿ ಅಲ್ಲಿಂದ ರಾಮನಗರದತ್ತ ಸಾಗಿದರು.

ಒಂದು ರಾಜ್ಯದ ಮುಖ್ಯಮಂತ್ರಿಯಾಗಿರುವ ಕುಮಾರಸ್ವಾಮಿ ಹೃದಯದ ಅಂತರಾಳದಲ್ಲಿ ನೊಂದವರಿಗೆ ಮಿಡಿಯುವ ಜೀವವಿದೆ. ಕಷ್ಟಕ್ಕೆ ಸ್ಪಂದಿಸುವ ಗುಣವಿದೆ ಎಂಬುದನ್ನು ಕೇಳಿದ್ವಿ. ಈ ಮಾತು ಹೂ ಮಾರುವ ಪುಟ್ಟ ಬಾಲಕಿಯ ಘಟನೆಯ ಮೂಲಕ ನಿಜ ಎನಿಸಿಬಿಟ್ಟಿತು.

ಇದಕ್ಕೆ ಅಲ್ವಾ ಮುಖ್ಯಮಂತ್ರಿಯಾಚೆಗೆ ಹೆಚ್‌ ಡಿ ಕುಮಾರಸ್ವಾಮಿ ಎಲ್ಲರಿಗೂ ಇಷ್ಟ ಆಗೋದು..? ಇಂತಹ ಭಾವುಕ ಮಿಡಿತಕ್ಕೆ ಮತ್ತೊಬ್ಬರು ಸಾಕ್ಷಿಯಾಗಲಾರರು.

ವಸಂತ ಬಿ ಈಶ್ವರಗೆರೆ, ನ್ಯೂಸ್‌ ಡೆಸ್ಕ್‌, ಟಿವಿ5 ಕನ್ನಡ

Next Story

RELATED STORIES