Top

ಸಂಪುಟ ವಿಸ್ತರಣೆ.. ಸಿದ್ದು ಕಡೆಗಣನೆ.. ಮೈತ್ರಿ ಸರ್ಕಾರಕ್ಕೆ ಕೊನೆ..?

ಸಂಪುಟ ವಿಸ್ತರಣೆ.. ಸಿದ್ದು ಕಡೆಗಣನೆ.. ಮೈತ್ರಿ ಸರ್ಕಾರಕ್ಕೆ ಕೊನೆ..?
X

ಸಮ್ಮಿಶ್ರ ಸರ್ಕಾರ ಶತ ದಿನ ಪೂರೈಸಲು ಕೇವಲ ಒಂದೇ ದಿನ ಮಾತ್ರ ಉಳಿದಿದೆ. ಅಷ್ಟರಲ್ಲೇ ಈ ಸರ್ಕಾರ ಉಳಿಯುತ್ತೋ ಇಲ್ವೋ ಅನ್ನೋ ಆತಂಕ ಶುರುವಾಗಿದೆ. ಹೈಕಮಾಂಡ್​ ಅಣತಿಯಂತೆ ಜೆಡಿಎಸ್​ಗೆ ಅಧಿಕಾರ ಬಿಟ್ಟುಕೊಟ್ಟು ಕರ್ಣ ಎನಿಸಿಕೊಂಡಿದ್ದ ಸಿದ್ದರಾಮಯ್ಯನವರೇ ಸಮ್ಮಿಶ್ರ ಸರ್ಕಾಕ್ಕೆ ಸವಾಲಾಗಿದ್ದಾರೆ.

ಸಿದ್ದು ಮತ್ತೆ ಸಿಎಂ ಆಗಬೇಕೆಂಬ ಆಸೆಗೆ ಅವರ ಬೆಂಬಲಿಗ ಶಾಸಕರು ನೀರೆರೆದು ಪೋಷಿಸುತ್ತಿದ್ದಾರೆ. ಇದ್ರಿಂದ ಸಿಎಂ ಹೆಚ್ಡಿಕೆ ಬೆಚ್ಚಿಬಿದ್ದಿದ್ದಾರೆ. ಹಳೆ ಮೈಸೂರು ರಾಜಕೀಯದಿಂದ ಸರ್ಕಾರ ಉರುಳುತ್ತಾ..? ಜೆಡಿಎಸ್​ ಹಾಗೂ ಕಾಂಗ್ರೆಸ್​ ಮೈತ್ರಿ ಮುರಿದುಬೀಳುತ್ತಾ ಅನ್ನೋ ಬಲವಾದ ಸಂದೇಹಗಳು ಸೃಷ್ಟಿಯಾಗಿವೆ.

ಹೌದು... ಹಾಲಿ ಸಿಎಂ ಹೆಚ್​.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಸಿಎಂ ಮಧ್ಯೆ ಇದ್ದ ಅಸಮಧಾನ, ಮುನಿಸೆಲ್ಲವೂ ಈಗ ಬಹಿರಂಗವಾಗಿದೆ. ಹಾಸನಕ್ಕೆ ಭೇಟಿ ನೀಡಿದ್ದ ವೇಳೆ ಸಿದ್ದರಾಮಯ್ಯ ಅವರೇ ಬಹಳ ಸೂಚ್ಯವಾಗಿ ತಮ್ಮ ರಾಜಕೀಯ ವಿರೋಧಿಗಳಿಗೆ ವಾಗ್ಬಾಣ ಹರಿಬಿಟ್ಟಿದ್ರು. ಆದ್ರೆ ಅದು ನೇರವಾಗಿ ಬಂದಿದ್ದು ಮಾತ್ರ ಸಿಎಂ ಕುಮಾರಸ್ವಾಮಿಗೆ..

ನಾನು ಮತ್ತೆ ಸಿಎಂ ಆಗ್ತೇನೆ ಎಂಬ ಹೇಳಿಕೆ ಇದೀಗ ಮೈತ್ರಿ ಸರ್ಕಾರದಲ್ಲಿ ದೊಡ್ಡ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಸಿದ್ದು ಹೇಳಿಕೆ ಬೆನ್ನಲ್ಲೇ ಅವರ ಬೆಂಬಲಿಗ ಶಾಸಕರು ಮತ್ತೆ ಸಿದ್ದು ಸಿಎಂ ಆಗ್ಬೇಕು ಅಂತ ಬಸವಕಲ್ಯಾಣ ಶಾಸಕ ನಾರಾಯಣ, ಕೃಷಿ ಸಚಿವ ಶಿವಶಂಕರ್ ರೆಡ್ಡಿ, ಕಾಂಗ್ರೆಸ್‌ ಶಾಸಕ ಜಮೀರ್ ಅಹ್ಮದ್‌,

ಮಾತಿಗೆ ಮಾತು ಪೋಣಿಸ್ತಿದ್ದಾರೆ.

ಸಿದ್ದರಾಮಯ್ಯ ಹೇಳಿಕೆ ಮಾತ್ರ ನೀಡಿಲ್ಲ.. ಸರ್ಕಾರ ಸಂಕಟದಲ್ಲಿ ಸಿಲುಕುವ ವಿಷಮ ಪರಿಸ್ಥಿತಿಯಲ್ಲೇ ವಿದೇಶಕ್ಕೆ ಹಾರಲು ಸಜ್ಜಾಗಿದ್ದಾರೆ. ಈ ಫಾರೀನ್​ ಟೂರ್​ಗೆ ಹಿರಿಯ ಸಚಿವ ಆರ್​.ವಿ.ದೇಶಪಾಂಡೆ, ಹೆಚ್​.ಎಂ.ರೇವಣ್ಣ ಸೇರಿ ಹಲವು ಶಾಸಕರು ಸಾಥ್​ ನೀಡ್ತಿದ್ದಾರೆ.

ವಿದೇಶದಲ್ಲಿಯೇ ರಾಜ್ಯ ರಾಜಕಾರಣದ ಭವಿಷ್ಯ ನಿರ್ಧಾರವಾಗುತ್ತಾ..? ಸಿಎಂ ಬೆಂಬಲಿಗ ಶಾಸಕರ ಜತೆ ಸೇರಿ ಮತ್ತೊಂದು ಮಿರಾಕಲ್​ ಸೃಷ್ಟಿಸ್ತಾರಾ..? ಸಿಎಂ ಕುಮಾರಸ್ವಾಮಿ ಬದಲಾಗಿ ಆ ಪಟ್ಟಕ್ಕೆ ತಾವೇ ಬರಲು ತಂತ್ರ ರೂಪಿಸ್ತಾರಾ.. ಆ ಮೂಲಕ ಮತ್ತೆ ಮುನ್ನೆಲೆಗೆ ಬಂದು ಕೂರ್ತಾರಾ..? ಹೈಕಮಾಂಡ್​ ಜತೆ ಉತ್ತಮ ಬಾಂಧವ್ಯ ಹೊಂದಿರುವ ಸಿದ್ದು ಏನು ಬೇಕಾದ್ರೂ ಸಾಧಿಸ್ತಾರೆ ಅನ್ನೋದು ಗೊತ್ತಿದೆ.

ಹೀಗಾಗಿಯೇ ಈ ವಿಷಯವೀಗ ರಾಜಕೀಯ ಪಡಸಾಲೆಯಲ್ಲಿ ದೊಡ್ಡ ಚರ್ಚೆ ಹುಟ್ಟುಹಾಕಿದೆ. ಹೀಗಾಗಿಯೇ ಸಿಎಂ ಕುಮಾರಸ್ವಾಮಿ ಸಿದ್ದರಾಮಯ್ಯ ನಡೆಗೆ ಬೆಚ್ಚಿಬಿದ್ದಿದ್ದಾರೆ. ದೇವರನ್ನ ನಂಬಿದ್ದೇನೆ. ಈ ಅಧಿಕಾರ ದೇವರ ಕೊಡುಗೆ.. ಎಷ್ಟು ದಿನ ಇರಲಿದೆ ಅಂತ ದೇವರೇ ನಿರ್ಧರಿಸ್ತಾನೆ ಅಂತ ಕೈಚೆಲ್ಲಿ ಮಾತನಾಡ್ತಿದ್ದಾರೆ.

ಖಾಸಗಿ ಸಾಲಮನ್ನಾ ಸುಗ್ರೀವಾಜ್ಞೆ ಘೋಷಣೆ, ಸಮನ್ವಯ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಸಂಪುಟ ದರ್ಜೆ ಸ್ಥಾನ ಹಾಗೂ ಸಮನ್ವಯ ಸಮಿತಿಯಲ್ಲಿ ಜೆಡಿಎಸ್​ ಅಧ್ಯಕ್ಷ ಹೆಚ್​.ವಿಶ್ವನಾಥ್​ ಸೇರ್ಪಡೆ ವಿಚಾರಗಳು ಸಿದ್ದು ಹಾಗೂ ಹೆಚ್ಡಿಕೆ ಮಧ್ಯೆ ಬಿರುಕಿಗೆ ಕಾರಣಗಳಂತೆ ಗೋಚರಿಸಿದ್ರೂ, ರಾಜಕೀಯ ಮತ್ಸರವೇ ಎಲ್ಲದಕ್ಕೆ ಕಾರಣ ಎನ್ನಲಾಗ್ತಿದೆ. ಇದೇ ಮತ್ಸರ, ಹಗೆತನ ಮುಂದುವರಿದ್ರೆ ಸರ್ಕಾರ ಉಳಿಯೋದೆ ಡೌಟು... ಇನ್ನೊಂದೇ ದಿನಗಳಲ್ಲಿ ಸೆಂಚುರಿ ಬಾರಿಸಬೇಕಿದ್ದ ಮೈತ್ರಿ ಸರ್ಕಾರವೀಗ ಶೇಕ್​ ಆಗ್ತಿರೋದಂತೂ ಸತ್ಯ..

ವರದಿ : ದಶರಥ್​ ಸಾವೂರು, ಪೊಲಿಟಿಕಲ್​ ಬ್ಯೂರೋ, ಟಿವಿ5 ಬೆಂಗಳೂರು

Next Story

RELATED STORIES