Top

ಹಾಸನಕ್ಕೆ ದೇವೇಗೌಡರ ಕೊಡುಗೆ ಶೂನ್ಯ: ಪ್ರೀತಮ್

ಹಾಸನಕ್ಕೆ ದೇವೇಗೌಡರ ಕೊಡುಗೆ ಶೂನ್ಯ: ಪ್ರೀತಮ್
X

ಹಾಸನ: ಮಾಜಿ ಪ್ರಧಾನಿ ದೇವೇಗೌಡ, ಸಿಎಂ ಕುಮಾರಸ್ವಾಮಿ ಹಾಗೂ ರೇವಣ್ಣರ ಕೊಡುಗೆ ಹಾಸನಕ್ಕೆ ಶೂನ್ಯ ಎಂದು ಬಿಜೆಪಿ ಶಾಸಕ ಪ್ರೀತಮ್ ಗೌಡ ಕಿಡಿಕಾರಿದ್ದಾರೆ.

ಹಾಸನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರೀತಮ್, ಪ್ರಧಾನಿ, ಮುಖ್ಯಮಂತ್ರಿ ಮತ್ತು ಸಚಿವರಾಗಿದ್ದಾರೆ ಆದ್ರೆ ಹಾಸನಕ್ಕೆ ಅವರ ಕೊಡುಗೆ ಏನೂ ಇಲ್ಲ, ದೇವೇಗೌಡರ ಕುಟುಂಬಕ್ಕೆ ದೂರದೃಷ್ಟಿ ಇಲ್ಲ ಎಂದು ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ರೇವಣ್ಣ ವಿರುದ್ಧ ವಾಕ್ಪ್ರಹಾರ ಮಾಡಿದ ಪ್ರೀತಮ್ ಗೌಡ, 40 ವರ್ಷಗಳಿಂದ ದೇವೇಗೌಡರ ಕುಟುಂಬದ ಕೊಡುಗೆ ಶೂನ್ಯ ಸಚಿವ ಹೆಚ್.ಡಿ.ರೇವಣ್ಣ ಹಾಸನದ ರೈಲ್ವೆ ಮೇಲ್ಸೇತುವೆಯನ್ನ ಹೊಳೆನರಸೀಪುರಕ್ಕೆ ವರ್ಗಾವಣೆ ಮಾಡಿದ್ದಾರೆ. ಸಚಿವ ರೇವಣ್ಣ ಕಳೆದ 20 ವರ್ಷಗಳಿಂದ ಹಾಸನದ ವರ್ತುಲ ರಸ್ತೆಯನ್ನು ನಿರ್ಮಿಸಿಲ್ಲವೆಂದು ಆರೋಪಿಸಿದ್ದಾರೆ.

ಅಲ್ಲದೇ ಭೂಕಬಳಿಕೆ ಮಾಡಿದ ಆರೋಪ ಪ್ರಕರಣದ ಬಗ್ಗೆ ಮಾತನಾಡಿದ ಪ್ರೀತಮ್ ಗೌಡ, ಭೂಕಬಳಿಕೆಯಲ್ಲಿ ನಾನು ಕೆಲವರಿಗೆ ಅರ್ಜಿ ಕೊಟ್ಟಿದ್ದೇನೆ. ನಾನು ಭೂಕಬಳಿಕೆಯಲ್ಲಿ ತೊಡಗಿಲ್ಲ ಮಾಜಿ ಶಾಸಕರು ತಮ್ಮದೇ ಸರ್ಕಾರವಿದೆ ಬೇಕಿದ್ದರೆ ತನಿಖೆ ಮಾಡಿಸಲಿ ಎಂದು ಶಾಸಕ ಪ್ರೀತಮ್ ಗೌಡ ಮಾಜಿ ಶಾಸಕ ಹೆಚ್.ಎಸ್.ಪ್ರಕಾಶ್‌ಗೆ ಸವಾಲ್ ಹಾಕಿದ್ದಾರೆ.

Next Story

RELATED STORIES