Top

ಎನ್​ಟಿಆರ್​ ಕುಟುಂಬಕ್ಕಿದೆಯಾ ನಲ್ಕೊಂಡ ಹೆದ್ದಾರಿ ಗಂಡಾಂತರ?

ಎನ್​ಟಿಆರ್​ ಕುಟುಂಬಕ್ಕಿದೆಯಾ ನಲ್ಕೊಂಡ ಹೆದ್ದಾರಿ ಗಂಡಾಂತರ?
X

ತೆಲುಗು ಚಿತ್ರರಂಗದ ದೊಡ್ಮನೆ ಕುಟುಂಬದ ಎನ್​ಟಿಆರ್ ಕುಟುಂಬಕ್ಕೆ ನಲ್ಕೊಂಡ ಹೆದ್ದಾರಿಯಿಂದ ಗಂಡಾಂತರ ಇದೆಯೇ ಎಂಬ ಪ್ರಶ್ನೆ ಈಗ ಚರ್ಚೆಗೆ ಕಾರಣವಾಗಿದೆ.

ತೆಲುಗು ಸೂಪರ್ ಸ್ಟಾರ್ ಎನ್​ಟಿಆರ್ ಹಿರಿಯ ಪುತ್ರ ನಂದಮೂರಿ ಹರಿಕೃಷ್ಣ ಅವರನ್ನು ಬಲಿ ಪಡೆದ ನಾಲ್ಕೊಂಡ ಹೆದ್ದಾರಿ ಈಗಾಗಲೇ ಎನ್​ಟಿಆರ್​ ಕುಟುಂಬದ ನಾಲ್ವರನ್ನು ಬಲಿ ಪಡೆದಿದೆ. ಇದರಿಂದ ಈ ಹೆದ್ದಾರಿ ಅವರ ಕುಟುಂಬಕ್ಕೆ ಮಾರಕವಾಗಿದೆಯಾ ಎಂಬ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿದೆ.

ನಲ್ಗೊಂಡ ಜಿಲ್ಲೆಯ ಹೆದ್ದಾರಿಯ ಅನ್ನೆಪರ್ತಿ ಬಳಿ ಬುಧವಾರ ಮುಂಜಾನೆ ಕಾರು ಉರುಳಿ ನಂದಮೂರಿ ಹರಿಕೃಷ್ಣ ಮೃತಪಟ್ಟಿದ್ದಾರೆ. ಇತ್ತೀಚೆಗೆ ಮೃತ ಹರಿಕೃಷ್ಣರ ಹಿರಿಯ ಪತ್ನಿ ಮಗ ಜಾನಕಿ ರಾಮ್ ಅದೇ ನಾರ್ಕೆಟ್ ಪಲ್ಲಿ ರಸ್ತೆಯ ಅಪಘಾತವೊಂದರಲ್ಲಿ ಮೃತ ಪಟ್ಟಿದ್ದರು.

ಇನ್ನು ಹರಿಕೃಷ್ಣ ದ್ವಿತೀಯ ಪತ್ನಿ ಶಾಲಿನಿ ಬಾಸ್ಕರ್ ರಾವ್ ಪುತ್ರ ಯಂಗ್ ಟೈಗರ್ ಜೂನಿಯರ್ ಎನ್​ಟಿಆರ್ ಕೂಡ 2009ರ ಚುನಾವಣಾ ಸಮಯದಲ್ಲಿ ಅದೇ ರಸ್ತೆಯಲ್ಲಿ ಅಪಘಾತಕ್ಕೀಡಾಗಿದರು.

ಇನ್ನು ಅಷ್ಟೇ ಯಾಕೆ ಮೂರ್ನಾಲ್ಕು ತಿಂಗಳ ಹಿಂದೆ ಹರಿಕೃಷ್ಣ ಸಹೋದರ ನಂದಮೂರಿ ಬಾಲಕೃಷ್ಣ ಕಾರು ಕೂಡ ಅದೇ ರಸ್ತೆಯಲ್ಲಿ ಅಪಘಾತಗೊಂಡಿತ್ತು. ಅದೃಷ್ಟವಶಾತ್ ಅಂದು ಬಾಲಯ್ಯ ಆ ಕಾರಿನಲ್ಲಿ ಇರಲಿಲ್ಲ.

ಇದನ್ನೆಲ್ಲಾ ಗಮನಿಸಿದರೆ ಇಡೀ ನಂದಮೂರಿ ಕುಟುಂಬಕ್ಕೆ ಅಪಘಾತ ಗಂಡಾಂತರ ಇರೋದು ಪಕ್ಕಾ ಆಗಿದೆ. ಒಂದೇ ಕುಟುಂಬದ ಮೇಲೆ ಜವರಾಯ ಈ ರೀತಿ ದರ್ಪ ತೋರಿಸ್ತಿರೋದು, ಅವ್ರ ಕುಟುಂಬಕ್ಕೆ ಹಾಗೂ ಅಭಿಮಾನಿಗಳಿಗೆ ನಿಜಕ್ಕೂ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

Next Story

RELATED STORIES