Top

ಒಳ್ಳೆ ಚಿತ್ರಕತೆ ಕೊಡೋ ನಿರ್ದೇಶಕರಿಗೆ ನಿಖಿಲ್‌ ಕುಮಾರ್‌ 5 ಕೋಟಿ ಆಫರ್‌.?

ಒಳ್ಳೆ ಚಿತ್ರಕತೆ ಕೊಡೋ ನಿರ್ದೇಶಕರಿಗೆ ನಿಖಿಲ್‌ ಕುಮಾರ್‌ 5 ಕೋಟಿ ಆಫರ್‌.?
X

ಸ್ಯಾಂಡಲ್​ವುಡ್ ಯುವರಾಜ ನಿಖಿಲ್ ಕುಮಾರ್, ಒಳ್ಳೆ ಕಥೆ ಕೊಡೋ ನಿರ್ದೇಶಕರಿಗೆ 5 ಕೋಟಿ ಆಫರ್ ಮಾಡಿದ್ದಾರಂತೆ.. ಇಂತಾದೊಂದು ಸುದ್ದಿ ಕಳೆದೆರಡು ದಿನಗಳಿಂದ ಟಾಲಿವುಡ್​ನಲ್ಲಿ ಸಖತ್ ಸೌಂಡ್ ಮಾಡ್ತಿದೆ.. ಅಬ್ಬಾ.. ಒಂದು ಒಳ್ಳೆ ಸಿನಿಮಾ ಕತೆಗೆ ಸಿಎಂ ಪುತ್ರ ನಿಖಿಲ್ ಕುಮಾರ್ ಅಷ್ಟು ದೊಡ್ಡ ಅಮೌಂಟ್ ಆಫರ್ ಮಾಡಿದ್ರಾ..? ಅದು ಯಾವ ಸಿನಿಮಾ..? ಆ ಬಗ್ಗೆ ಮುಂದೆ ಓದಿ..

ಜಾಗ್ವಾರ್​ ಸಿನಿಮಾ ಮೂಲಕ ಸೌತ್ ಸಿನಿದುನಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ ಹೀರೋ ನಿಖಿಲ್ ಕುಮಾರ್. ಮೊದಲ ಪ್ರಯತ್ನದಲ್ಲೇ ಭೇಷ್ ಅನ್ನಿಸಿಕೊಂಡು, ಭರವಸೆಯ ಹೀರೋ ಆಗಿ ಹೊರ ಹೊಮ್ಮಿದ್ರು. ಬಹುಕೋಟಿ ವೆಚ್ಚದ ಜಾಗ್ವಾರ್ ಸಿನಿಮಾ ಏಕಕಾಲಕ್ಕೆ ಕನ್ನಡ ಮತ್ತು ತೆಲುಗಿನಲ್ಲಿ ರಿಲೀಸ್​ ದೊಡ್ಡದಾಗಿ ಆಗಿ ಸೌಂಡ್ ಮಾಡಿತ್ತು.

ಜಾಗ್ವಾರ್ ನಂತ್ರ, ನಿಖಿಲ್ ಕುಮಾರ್ ಹೀರೋ ಆಗಿ ನಟಿಸ್ತಿರೋ ಎರಡನೇ ಸಿನಿಮಾ ಸೀತಾರಾಮ ಕಲ್ಯಾಣ. ಹರ್ಷ ನಿರ್ದೇಶನದ ಈ ಫ್ಯಾಮಿಲಿ ಆಕ್ಷನ್ ಎಂಟ್ರಟ್ರೈನರ್ ಶೂಟಿಂಗ್ ಭರದಿಂದ ಸಾಗಿದೆ. ಇತ್ತೀಚೆಗೆ ರಾಮನಗರದಲ್ಲಿ ರಿಲೀಸ್ ಆದ ಸೀತಾರಾಮ ಕಲ್ಯಾಣ ಟೀಸರ್ ಯೂಟ್ಯೂಬ್​ನಲ್ಲಿ ದಾಖಲೆ ಬರೆದಿದೆ. ಜಾಗ್ವಾರ್ ಸ್ಟಾರ್ ಆಕ್ಷನ್ ಧಮಾಕಗೆ ಅಭಿಮಾನಿಗಳು ಫಿದಾ ಆಗಿದ್ದು, ಸಿನಿಮಾ ಕುತೂಹಲ ಕೆರಳಿಸಿದೆ.

ಜಾಗ್ವಾರ್, ಸೀತಾರಾಮ ಕಲ್ಯಾಣ ನಂತ್ರ ಮತ್ತೊಂದು ಚಿತ್ರಕ್ಕೆ ನಿಖಿಲ್ ಪ್ಲಾನ್ ಮಾಡ್ತಿದ್ದಾರೆ. ಆ ಚಿತ್ರಕ್ಕೆ ಉತ್ತಮ ಕಥೆ ಕೊಡೋ ನಿರ್ದೇಶಕರಿಗೆ, ನಿಖಿಲ್ ಕುಮಾರ್, 5 ಕೋಟಿ ಕೊಡೋದಾಗಿ ಆಫರ್ ಮಾಡಿದ್ದಾರೆ ಅಂತ ಟಾಲಿವುಡ್​ನಲ್ಲಿ ಗುಲ್ಲಾಗಿದೆ. ತೆಲುಗು ನಿರ್ದೇಶಕರು ಕೂಡ ನಿಖಿಲ್​ಗೆ ಕತೆ ಹೇಳಿ ಒಪ್ಪಿಸಿ, ಕೋಟಿ ಕೋಟಿ ಎಣಿಸ್ಬೋದು ಅಂತೆಲ್ಲಾ ಪುಂಖಾನುಪುಂಖವಾಗಿ ತೆಲುಗು ವೆಬ್​ಸೈಟ್​ಗಳಲ್ಲಿ ವರದಿಯಾಗಿದೆ.

ನಿಖಿಲ್ ಕುಮಾರ್ ಅವ್ರಿಗೆ ಕಥೆ ಒಪ್ಪಿಸಿ, ಸಿನಿಮಾ ನಿರ್ದೇಶಿಸೋ ನಿರ್ದೇಶಕರಿಗೆ 5ಕೋಟಿ ಸಂಭಾವನೆನಾ..? ಅಂತ ಹುಬ್ಬೇರಿಸಬೇಡಿ. ಈ ಸುದ್ದಿ ಎಷ್ಟು ನಿಜಾ ಅಂತ TV5 ನಿಖಿಲ್ ಕುಮಾರ್ ಅವ್ರನ್ನ ಸಂಪರ್ಕಿಸಿದಾಗ ಅಸಲಿ ಸಂಗತಿ ಹೊರಬಿದ್ದಿದೆ. ಇದೆಲ್ಲಾ ಕೇವಲ ಸುಳ್ಳು ಸುದ್ದಿ. ಯಾರೋ ಕಿಡಿಗೇಡಿಗಳು ಸುಖಾಸುಮ್ಮನೆ ಇಂತಹ ಸುದ್ದಿ ಹಬ್ಬಿಸಿದ್ದಾರೆ. ಇದನ್ನೆಲ್ಲಾ ನಂಬಬೇಡಿ ಅಂತ ಅವರು ತಿಳಿಸಿದ್ದಾರೆ.

ಸ್ಯಾಂಡಲ್​ವುಡ್​ ಯುವರಾಜ ನಿಖಿಲ್ ಕುಮಾರ್ ಅದ್ದೂರಿ ಸಿನಿಮಾಗಳಲ್ಲಿ ನಟಿಸ್ತಿರೋದು ನಿಜ. ಆದ್ರೆ, ಒಂದು ಕಥೆಗೆ 5 ಕೋಟಿ ಆಫರ್ ಮಾಡ್ತಿದ್ದಾರೆ ಅನ್ನೋದೆಲ್ಲಾ ಸುಳ್ಳು ಸುದ್ದಿ. ಕಿಡಿಗೇಡಿಗಳು ಇನ್ನಾದ್ರೂ ಇಂತಹ ಸುದ್ದಿ ಹಬ್ಬಿಸೋದು ನಿಲ್ಲಿಸಬೇಕು.

ನಾಣಿ.. ಎಂಟ್ರಟ್ರೈನ್​ಮೆಂಟ್ ಬ್ಯೂರೊ, ಟಿವಿ5

Next Story

RELATED STORIES