Top

ಮಂತ್ರಾಲಯ ಉತ್ತರಾರಾಧನೆ: TV5 ನೇರಪ್ರಸಾರ

ಮಂತ್ರಾಲಯ ಉತ್ತರಾರಾಧನೆ: TV5 ನೇರಪ್ರಸಾರ
X

ರಾಯಚೂರು: ಭೋಯತಿ ವರದೇಂದ್ರ ಶ್ರೀಗುರು ರಾಯರಾಘವೇಂದ್ರರ ಆರಾಧನಾ ಮಹೋತ್ಸವ ಭರದಿಂದ ಸಾಗಿದೆ. ಮಂತ್ರಾಲಯಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಿದ್ದು, ರಾಯರ ದರ್ಶನ ಕಣ್ತುಂಬಿಕೊಳ್ಳುತ್ತಿದ್ದಾರೆ. ಮೊನ್ನೆ ಪೂರ್ವಾರಾಧನೆ ನಿನ್ನೆ ಮಧ್ಯಾರಾಧನೆ ನಡೆದಿದ್ದು, ಇಂದು ಉತ್ತರಾರಾಧನೆ ನಡೆದಿದೆ.

ರಾಯರ ಸಪ್ತರಾತ್ರೋತ್ಸವ ಅಂಗವಾಗಿ ಇಂದು ಉತ್ತರಾರಾಧನೆ ಮಹೋತ್ಸವ ನಡೆದಿದ್ದು, ವಿಶೇಷ ಪೂಜಾ ಕೈಂಕರ್ಯಗಳು ಜರುಗಿದೆ. ಮೂಲರಾಮನಿಗೆ ಪೂಜೆ ಮತ್ತು ಮೂಲ ರಾಯರ ಬೃಂದಾವನಕ್ಕೆ ಮಹಾ ಪಂಚಾಮೃತ ಅಭಿಷೇಕ ನಡೆಸಲಾಗಿದೆ. ಪೂಜೆಯ ನಂತರ ಬೃಂದಾವನದ ಮುಂದೆ ಮತ್ತು ಮಠದ ಪ್ರಾಂಗಣದಲ್ಲಿ ಗುಲಾಲ್ ಬಕ್ಕಿಟ್ಟು ಬಣ್ಣ ಆಡಲಾಗುತ್ತದೆ.

ಉತ್ತರಾರಾಧನೆ ಅಂಗವಾಗಿ ಪ್ರಹ್ಲಾದ ರಾಜರ ಉತ್ಸವಮೂರ್ತಿಯನ್ನು ವಿದ್ಯಾಪೀಠಕ್ಕೆ ತೆಗೆದುಕೊಂಡು ಹೋಗಿ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಲಾಗುತ್ತೆ. ನಂತರ ಪ್ರಹ್ಲಾದ ರಾಜರ ಉತ್ಸವ ಮೂರ್ತಿಯನ್ನ ರಥದಲ್ಲಿ ಇಟ್ಟು ಮಹಾ ರಥೋತ್ಸವ ಮಾಡಲಾಗುತ್ತದೆ.

Next Story

RELATED STORIES