Top

ದೇವರಾಗಿ ಬಂದ ಹನುಮ, ಈಗ ಉಗ್ರರೂಪ ತಾಳಿ ಕಿರಿಕ್‌.!

ದೇವರಾಗಿ ಬಂದ ಹನುಮ, ಈಗ ಉಗ್ರರೂಪ ತಾಳಿ ಕಿರಿಕ್‌.!
X

ನೆಲಮಂಗಲ : ಎರಡು ವರ್ಷ ಹಿಂದೆ ಗ್ರಾಮಕ್ಕೆ ಹನುಮನಾಗಿ ಬಂದ ಈ ಕೋತಿ, ಕಳೆದೆರಡು ತಿಂಗಳಿಂದ ಗ್ರಾಮದಲ್ಲಿ ಉಗ್ರವತಾರ ತಾಳಿದ್ದಾನೆ. ಈ ಮೂಲಕ ಜನ ಜಾನುವಾರುಗಳೆನ್ನದೆ ಸಾಕು ಪ್ರಾಣಿಗಳ ಮೇಳೆ ಪ್ರತಿನಿತ್ಯ ದಾಳಿ ನಡೆಸುತ್ತಿರುವ ಘಟನೆ ನೆಲಮಂಗಲ ತಾಲೂಕಿನ ಮಂಟನಕುರ್ಚಿಯಲ್ಲಿ ನಡೆದಿದೆ.

ಆ ಗ್ರಾಮಕ್ಕೆ ಆಂಜನೇಯ ಆರಾದ್ಯ ದೈವ. ಕಳೆದ ಎರಡೂ ವರ್ಷದ ಹಿಂದೆ ಈ ಗ್ರಾಮಕ್ಕೆ ಕೋತಿಗಳ ಹಿಂಡೊಂದು ದಾಳಿ ಇಟ್ಟಿತು. ದಾಳಿ ಇಟ್ಟ ಕೋತಿಗಳ ಹಿಂಡಿನಲ್ಲಿ ಒಂದು ಕೋತಿಯೊಂದು ತಪ್ಪಿಸಿಕೊಂಡಿತು. ಆ ಹಿಂಡಿನ ಒಂದು ಕೋತಿ ಊರಲ್ಲೇ ಉಳಿದಿದ್ದು, ಈ ದೇವಸ್ಥಾನಗಳ ಹಿಂದೆ-ಮುಂದೆ ವಾಸವಿರೋ ಈ ಕೋತಿಯೇ ಉಗ್ರ ಹನುಮ.

ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಮಂಟನಕುರ್ಚಿ ಗ್ರಾಮದಲ್ಲಿ. ಈ ಗ್ರಾಮದ ತಲೆ ತಲಾಂತರಗಳಿಂದಲೂ ಊರ ಕಾಯ್ತಾ ಇರೋ ಹನುಮ. ಆ ಗ್ರಾಮಕ್ಕೆ ಯಾವುದೇ ಪ್ಲೇಗ್, ಕಾಲರ ದಂತಹ ಮಹಾಮಾರಿ ರೋಗರುಜಿನಗಳು ಬಾರದಂತೆ ಕಾವಲು ಕಾಯುತ್ತಾ ಇದ್ದ ಎಂಬ ನಂಬಿಕೆ ಗ್ರಾಮಸ್ಥರಲ್ಲಿ ಉಳಿದಿತ್ತು. ಆದ್ರೆ ಇದೀಗ ಈ ಮಂಗನ ಉಪಟಳಕ್ಕೆ ಗ್ರಾಮಸ್ಥರು ಬೆಚ್ಚಿಬಿದ್ದಿದ್ದು, ಮಂಗನನ್ನ ಸೆರೆಯಿಡಿಯಲು ಅಧಿಕಾರಿಗಳ ಮರೆಹೋದ್ರು ಆತಂಕದಲ್ಲಿ ಜೀವನ ಕಳೆಯುವಂತಾಗಿದೆ.

ಇನ್ನೂ ಈ ಗ್ರಾಮಕ್ಕೆ ಮಗನಂತಿದ್ದ ಆ ಹನುಮ, ಕಳೆದ ಎರಡು ತಿಂಗಳಿಂದ ಮಕ್ಕಳು ಮಂದಿಯನ್ನದೆ ಸಾಕು ಪ್ರಾಣಿಗಳ ಮೇಲೆರಗಿ ಹಿಂಸೆ ಕೊಡ ತೊಡಗಿದೆ. ಇದೀಗ ನಾಯಿ, ಕೋಳಿ ಕುರಿ, ಬೆಕ್ಕುಗಳ ಮೇಲೆ ದಾಳಿ ನೆಡೆಸುವಷ್ಟು ಉಗ್ರ ರೂಪಿಯಾದ.

ಅಲ್ಲದೆ ಮೇಕೆಯೊಂದು ಸತ್ತ ಹಿನ್ನಲೆ, ಮೇಕೆ ಮಾಲೀಕ ಅದನ್ನ ಮಣ್ಣಿನಲ್ಲಿ ಮುಚ್ಚಿ ಬಂದಿದ್ದ. ಅದನ್ನ ಗಮನಿಸಿದ ಆ ಹನುಮ ಆ ಗುಂಡಿಯಲ್ಲಿನ ಮಣ್ಣನ್ನ ತೆಗೆದು, ಹೂತಿಟ್ಟ ಮೇಕೆ ಮೃತದೇಹವನ್ನ ತನ್ನ ಹೆಗಲ ಮೇಲೆ ಹೊತ್ತು, ಊರಿಗೆ ತಂದು ಭಕ್ಷಿಸಿದೆ.

ದಿನೇ ದಿನೇ ನಾಯಿ ಮರಿಗಳ ಕಂಡರೆ ಭಗೆದು ತಿನ್ನಲು ಯತ್ನಿಸಿದೆ ಅದನ್ನ ತಡೆಯಲು ಹೋದ ಮರಿಯ ತಾಯಿ ನಾಯಿಗೆ, ಮುಖಕ್ಕೆಲ್ಲ ಪರಚಿ ಕಚ್ಚಿದೆ. ಕೋಳಿಗಳು ಸಿಕ್ಕರೆ ಎರಡು ಕಾಲುಗಳ ಹಿಡಿದು ಹರಿದು, ಎರಡು ಭಾಗ ಮಾಡಿ ಶಿಕ್ಷಿಸುವಂತಹ ಉಗ್ರಸ್ವರೂಪಿ ಯಾಗಿದ್ದಾನೆ ಈ ಮಂಗ. ಇದರಿಂದ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದ್ದು ಅರಣ್ಯ ಇಲಾಖೆ ಶೀಘ್ರವಾಗಿ ಕೋತಿಯನ್ನ ಹಿಡಿದು ಕಾಡು ಪ್ರದೇಶಕ್ಕೆ ಸಾಗಿಸ ಬೇಕೆಂಬುದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಒಟ್ಟಾರೆ ಗ್ರಾಮಕ್ಕೆ ದೇವರಾಗಿ ಬಂದ ಹನುಮ ರೂಪದ ಮಂಗ, ಇದೀಗ ಉಗ್ರರೂಪ ತಾಳಿ, ಗ್ರಾಮದಲ್ಲಿ ಭಯವನ್ನು ಸೃಷ್ಠಿಸಿದೆ. ಇಂತಹ ಕೋತಿ ಗ್ರಾಮದಿಂದ ಹೊರಗೆ ಹೋದ್ರೇ ಸಾಕು ಅಂತ ಗ್ರಾಮಸ್ಥರು ಕೋರಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಭೇಟಿಕೊಟ್ಟು ಗ್ರಾಮಸ್ಥರ ಸಮಸ್ಯೆ ನಿವಾರಿಸಬೇಕಿದೆ.

ವರದಿ : ವೆಂಕಟರಾಜು.ಎಸ್, ಟಿವಿ5 ನೆಲಮಂಗಲ

Next Story

RELATED STORIES