Top

ರ‍್ಯಾಂಬೊ-2 ಹಾಡಿಗೆ ಶುರುವಾಯ್ತು ಕಂಟಕ

ರ‍್ಯಾಂಬೊ-2 ಹಾಡಿಗೆ ಶುರುವಾಯ್ತು ಕಂಟಕ
X

ಮಾದಕ ದ್ರವ್ಯ ಸೇವನೆಗೆ ಪ್ರಚೋದಿಸಿ ಹಾಡೊಂದನ್ನ ಹಾಡಿದ್ದಕ್ಕೆ, ಚಂದನ್ ಶೆಟ್ಟಿಗೆ ಸಿಸಿಬಿ ಪೊಲೀಸರು ನೋಟೀಸ್ ನೀಡಿದ್ದರು. ಇದೀಗ ಸಿಸಿಬಿ ಪೊಲೀಸರ ಕಣ್ಣು ಮತ್ತೊಂದು ಸಿನಿಮಾದ ಹಾಡಿನ ಮೇಲೆ ಬಿದ್ದಿದೆ. ಈ ಮೂಲಕ ಅರ್ಜುನ್ ಜನ್ಯಾಗೆ ಸಂಕಷ್ಟ ಎದುರಾಗಿದೆ.

ನಿನ್ನೆ ಮೊನ್ನೆಯಷ್ಟೇ ಅಂತ್ಯ ಸಿನಿಮಾದ ಹಾಡೊಂದನ್ನ ಹಾಡಿದ್ದಕ್ಕೆ ಚಂದನ್ ಶೆಟ್ಟಿಗೆ ಪೊಲೀಸರು ನೋಟೀಸ್ ಜಾರಿ ಮಾಡಿದ್ದರು. ಈ ಹಾಡಿನಲ್ಲಿ ಮಾದಕ ವಸ್ತುಗಳ ಬಗ್ಗೆ ಪ್ರಚೋದನೆಯ ಸಾಹಿತ್ಯ ಬಳಕೆ ಮಾಡಿರುವ ಹಿನ್ನೆಲೆ, ವಿಚಾರಣೆಗೆ ಬರುವಂತೆ ಸಿಸಿಬಿ ಪೊಲೀಸರು ಚಂದನ್ ಶೆಟ್ಟಿಗೆ ನೋಟೀಸ್ ಜಾರಿ ಮಾಡಿದ್ದರು. ಇದೀಗ ಸಿಸಿಬಿ ಪೊಲೀಸರು ಸ್ಯಾಂಡಲ್‌ವುಡ್‌ನ ಇನ್ನೊಂದು ಹಾಡಿನ ಮೇಲೆ ಕಣ್ಣು ಹಾಕಿದ್ದಾರೆ.

ಇದೀಗ ರ‍್ಯಾಂಬೊ-2 ಚಿತ್ರ ತಂಡಕ್ಕೆ ಸಂಕಷ್ಟ ಎದುರಾಗಿದ್ದು, ಈ ಚಿತ್ರದ ಧಮ್ ಮಾರೋ ಧಮ್ ಹಾಡಿನ ಮೇಲೆ ಸಿಸಿಬಿ ಪೊಲೀಸರು ಕಣ್ಣು ಹಾಕಿದ್ದಾರೆ. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮತ್ತು ಅದಿತಿ ಸಾಗರ್ ಗೆ ಸಮನ್ಸ್ ನೀಡಲು ಸಿದ್ಧತೆ ನಡೆಸಿದ್ದು, ಚಂದನ್ ಶೆಟ್ಟಿ ವಿಚಾರಣೆ ಬಳಿಕ ಅರ್ಜುನ್ ಜನ್ಯ ಮತ್ತು ಮುತ್ತುಗೆ ಸಂಕಷ್ಟ ಎದುರಾಗಿದೆ.

Next Story

RELATED STORIES