Top

ರಾಹುಲ್, ಯೆಚೂರಿಗೆ ಆರ್​ಎಸ್​ಎಸ್​ ಆಹ್ವಾನ?

ರಾಹುಲ್, ಯೆಚೂರಿಗೆ ಆರ್​ಎಸ್​ಎಸ್​ ಆಹ್ವಾನ?
X

ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರನ್ನು ಇತ್ತೀಚೆಗೆ ಆಹ್ವಾನಿಸಿ ಭಾರೀ ಚರ್ಚೆಗೆ ಕಾರಣವಾಗಿದ್ದ ಆರ್​ಎಸ್​ಎಸ್​, ಇದೀಗ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಎಡಪಕ್ಷದ ಹಿರಿಯ ಮುಖಂಡ ಸೀತಾರಾಂ ಯೆಚೂರಿ ಅವರನ್ನು ಆಹ್ವಾನಿಸುವ ಸಾಧ್ಯತೆ ಇದೆ.

ಇತ್ತೀಚೆಗೆ ಆರ್​ಎಸ್ಎಸ್​ ಅನ್ನು ಮುಸ್ಲಿಂ ದಾಯಾದಿ ಎಂದು ಕರೆದ ರಾಹುಲ್ ಗಾಂಧಿ ಹೇಳಿಕೆಯಿಂದ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ರಾಷ್ಟ್ರೀಯ ಸ್ವಯಂ ಸೇವಾ ಸಂಘ, ಮುಂದಿನ ತಿಂಗಳು ನಡೆಯುವ ಕಾರ್ಯಕ್ರಮಕ್ಕೆ ವಿವಿಧ ಪಕ್ಷಗಳ ಗಣ್ಯರನ್ನು ಆಹ್ವಾನಿಸಲು ಚಿಂತನೆ ನಡೆಸಿದೆ.

'ಭವಿಷ್ಯದ ಭಾರತ: ಆರ್​ಎಸ್​ಎಸ್ ದೃಷ್ಟಿಕೋನದಲ್ಲಿ' ಎಂಬ ವಿಷಯದಲ್ಲಿ ಮುಂದಿನ ತಿಂಗಳು 17ರಿಂದ 19ರವರೆಗೆ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ಸೀತಾರಾಂ ಯೆಚೂರಿ ಹಾಗೂ ರಾಹುಲ್ ಗಾಂಧಿ ಅವರನ್ನು ಆಹ್ವಾನಿಸುವ ಬಗ್ಗೆ ಚಿಂತನೆ ನಡೆದಿದೆ.

ಕೆಲವರು ಭಾರತವನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಆದರೆ ಆರ್​ಎಸ್​ಎಸ್​ ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡಿಲ್ಲ. ಮುಸ್ಲಿಂ ದಾಯಾದಿಗಳು ಅನ್ಯ ದೇಶಗಳಲ್ಲಿ ಏನು ಮಾಡುತ್ತಿದ್ಧಾರೆ ಎಂಬುದನ್ನು ಗಮನಿಸಲಿ. ಮುಸ್ಲಿಂ ಜೊತೆ ಆರ್​ಎಸ್​ಎಸ್​ ತಳಕು ಹಾಕುವುದು ಬೇಡ ಎಂದು ಆರ್​ಎಸ್ಎಸ್​ ಮಾಧ್ಯಮ ವಕ್ತಾರ ಅರುಣ್ ಕುಮಾ್ ರಾಹುಲ್ ಗಾಂಧಿಗೆ ಪರೋಕ್ಷವಾಗಿ ತಿರುಗೇಟು ನೀಡಿದರು.

Next Story

RELATED STORIES