Top

ಮಂತ್ರಾಲಯದಲ್ಲಿ ಮಧ್ಯಾರಾಧನೆ: TV5 ನೇರಪ್ರಸಾರ

ಮಂತ್ರಾಲಯದಲ್ಲಿ ಮಧ್ಯಾರಾಧನೆ: TV5 ನೇರಪ್ರಸಾರ
X

ರಾಯಚೂರು: ಮಂತ್ರಾಲಯದಲ್ಲಿ ಗುರು ರಾಯರ 347ನೇ ಆರಾಧನಾ ಮಹೋತ್ಸವ ಜರುಗಿದ್ದು, ಇಂದು ಮಧ್ಯಾರಾಧನೆ ನಡೆಯುತ್ತಿದೆ. ಸಪ್ತರಾತ್ರೋತ್ಸವ ಮಧ್ಯಾರಾಧನೆ ಹಿನ್ನೆಲೆ ರಾಯರ ವೃಂದಾವನಕ್ಕೆ ವಿಶೇಷ ಮಹಾ ಪಂಚಾಮೃತ ಅಭಿಷೇಕ ಮಾಡಲಾಗಿದೆ. ಇನ್ನು ತಿರುಪತಿ ತಿರುಮಲದಿಂದ ತಂದ ವಿಶೇಷ ವಸ್ತ್ರವನ್ನು ರಾಯರಿಗೆ ಸಮರ್ಪಿಸಲಾಯಿತು. ಈ ದಿನದ ವಿಶೇಷ ನೋಡಲು ದೇಶದ ಮೂಲೆ ಮೂಲೆಗಳಿಂದ ಭಕ್ತರು ಆಗಮಿಸಿದ್ದಾರೆ.

ಮಂತ್ರಾಲಯದ ಮಧ್ಯಾರಾಧನೆಯ ವಿಶೇಷತೆ

ಗುರು ರಾಘವೇಂದ್ರರಾಯರು ಸಶರೀರರಾಗಿ ವೃಂದಾವನ ಪ್ರವೇಶಿಸಿದ ದಿನವನ್ನು ಮಂತ್ರಾಲಯದಲ್ಲಿ ಮಧ್ಯಾರಾಧನೆ ದಿನವಾಗಿ ಆಚರಿಸಲಾಗುತ್ತಿದೆ. ಇಂದು ಶ್ರಾವಣ ಬಹುಳ ದ್ವಿತೀಯ. ಈ ಪವಿತ್ರ ದಿನದಂದೇ ರಾಯರು ವೃಂದಾವನಸ್ಥರಾಗಿ 347 ವರ್ಷಗಳು ಸಂದಿವೆ. ಶ್ರಾವಣ ಬಹುಳ ದ್ವಿತೀಯ ಪವಿತ್ರ ದಿನದಂದು ಗುರು ರಾಯರು ಸಶರೀರರಾಗಿ ವೃಂದಾವನ ಪ್ರವೇಶಿಸಿದ್ದರು. ಮಧ್ಯಾರಾಧನೆಯಾಗಿರುವ ಇವತ್ತು ವೃಂದಾವನಕ್ಕೆ ನೂರಾರು ಲೀಟರ್ ಹಾಲು, ತುಪ್ಪ, ಜೇನುತುಪ್ಪಗಳಿಂದ ವಿಶೇಷವಾದ ಮಹಾಪಂಚಾಮೃತ ಅಭೀಷೇಕ ಮಾಡಲಾಗುತ್ತದೆ.

ಮಧ್ಯಾಹ್ನದ ವೇಳೆ ಹಸ್ತೋದಕ ಹಾಗೂ ಅಲಂಕಾರ, ಬ್ರಾಹ್ಮಣರ ಸೇವೆ ನಡೆಯುತ್ತದೆ. ಇಂದು ರಾತ್ರಿ ರಜತ, ಸ್ವರ್ಣ ಹಾಗೂ ನವರತ್ನ ರಥೋತ್ಸವ ಮಠದ ಪ್ರಾಂಗಣದಲ್ಲಿ ಒಟ್ಟಿಗೆ ಜರುಗಲಿವೆ. ಸಪ್ತರಾತ್ರೋತ್ಸವದ ಅಂಗವಾಗಿ ಮಠದ ಪ್ರಾಕಾರದಲ್ಲಿ ಉತ್ಸವ ಮೂರ್ತಿ ಮೆರವಣಿಗೆ ನಡೆಯಲಿದೆ.

Next Story

RELATED STORIES