Top

ಸುದೀಪ್ ಹುಟ್ಟುಹಬ್ಬಕ್ಕೆ ಕಾದಿದೆ ಮೂರು ಉಡುಗೊರೆ

ಸುದೀಪ್ ಹುಟ್ಟುಹಬ್ಬಕ್ಕೆ ಕಾದಿದೆ ಮೂರು ಉಡುಗೊರೆ
X

ಸೂಪರ್ ಹಿಟ್ ಸಿನಿಮಾಗಳ ಸರದಾರ, ನಿರ್ಮಾಪಕರ ಪಾಲಿನ ಓಡೋ ಕುದುರೆ, ಅಭಿಮಾನಿಗಳ ನೆಚ್ಚಿನ ನಟ ಕಿಚ್ಚ ಸುದೀಪ್ ಹುಟ್ಟುಹಬ್ಬ ಸಮೀಪಿಸುತ್ತಿದೆ. ಸೆಪ್ಟೆಂಬರ್ 2ರಂದು ಸುದೀಪ್ ಹುಟ್ಟುಹಬ್ಬವಿದ್ದು, ಕಿಚ್ಚನ ಅಭಿಮಾನಿಗಳು ಈಗಿಂದಲೇ ಭರದ ಸಿದ್ಧತೆಯಲ್ಲಿ ತೊಡಗಿದ್ದಾರೆ.

ಕಳೆದ ಬಾರಿ ಕಿಚ್ಚ ಬರ್ತ್‌ಡೇ ಆಚರಿಸಿಕೊಳ್ಳಲು ಒಪ್ಪಿರಲಿಲ್ಲ. ತನ್ನ ಫ್ಲೆಕ್ಸ್ ಬ್ಯಾನರ್ ಹಾಕಿ ದುಡ್ಡು ಪೋಲು ಮಾಡುವ ಬದಲು, ಬಡವರಿಗೆ ಆ ದುಡ್ಡು ದಾನ ಮಾಡಿ ಎಂದು ಕಿಚ್ಚ ಮನವಿ ಮಾಡಿದ್ರು. ಅಭಿಮಾನಿಗಳು ನೆಚ್ಚಿನ ನಟನ ಮಾತಿಗೆ ಬೆಲೆ ಕೊಟ್ಟು ಅರ್ಥಪೂರ್ಣವಾದ ಬರ್ತ್‌ಡೇ ಆಚರಿಸಿದ್ರು. ಆದ್ರೆ ಈ ಬಾರಿ ಅಭಿಮಾನಿಗಳ ಜೊತೆ ಬರ್ತ್‌ ಡೇ ಆಚರಿಸಿಕೊಳ್ಳಲು ಕಿಚ್ಚ ಕೆಲ ಷರತ್ತಿನೊಂದಿಗೆ ಒಪ್ಪಿಕೊಂಡಿದ್ದಾರೆ.

ಕಳೆದ ವರ್ಷ ತಮ್ಮ ಹುಟ್ಟುಹಬ್ಬಕ್ಕೆ ಖರ್ಚು ಮಾಡೋ ಹಣವನ್ನ ಬಡವರಿಗೆ ಕೋಡೊಕೆ ಹೇಳಿದ್ರು ಸುದೀಪ್. ನೆಚ್ಚಿನ ನಟನ ಆಜ್ಞೆಯನ್ನ ಚಾಚೂ ತಪ್ಪದೇ ಅಭಿಮಾನಿಗಳು ಪಾಲಿಸಿದ್ರು. ಇಚ್ತೀಚೆಗಷ್ಟೆ ಕೊಡಗು ನೆರಸಂತ್ರಸ್ತರ ನೆರವಿಗೆ ಧಾವಿಸುವಂತೆ ಕಿಚ್ಚ, ಅಭಿಮಾನಿಗಳು ಕರೆ ನೀಡಿದಾಗ ಅಭಿಮಾನಿಗಳು ಧಾವಿಸಿ ಬಂದಿದ್ರು. ‘ಈ ವರ್ಷ ನನ್ನ ಹುಟ್ಟುಹಬ್ಬಕ್ಕೆ ಕೇಕ್, ಹೂವಿನ ಹಾರ, ಗಿಫ್ಟ್ ತರಬೇಡಿ, ಒಂದೇ ಒಂದು ಕೇಕ್​ ಕೂಡ ಕಾಣಿಸಬಾರದು. ಬರೀ ಕೈಯಲ್ಲಿ ಬಂದು ವಿಶ್ ಮಾಡಿ’ ಅಂತ ಸುದೀಪ್ ಹೇಳಿದ್ದಾರೆ. ಅದಕ್ಕೆ ಅಭಿಮಾನಿಗಳು ಒಪ್ಪಿಕೊಂಡಿದ್ದಾರೆ.

ಕೇಕ್, ಪಟಾಕಿ ಇಲ್ಲಾ ಅಂದ್ರೆ ಏನು. ಆಟಂ ಬಾಂಬ್​ನಂತ ಗಿಫ್ಟ್​ಗಳು ಸುದೀಪ್ ಬರ್ತ್​ಡೇ ದಿನ ಸಿಡಿಯಲಿವೆ. ಸುದೀಪ್ ಅಭಿನಯದ ಬಹುನಿರೀಕ್ಷಿತ ಸಿನಿಮಾಗಳ ಟೀಸರ್​ಗಳು ಅಂದು ರಿಲೀಸ್ ಆಗ್ತಿದೆ. ಇಂಟರ್​ನ್ಯಾಷನಲ್ ಕ್ರೈಂ ಥ್ರಿಲ್ಲರ್ ಕೋಟಿಗೊಬ್ಬ-3 ಸಿನಿಮಾ ಟೀಸರ್​ ರಿಲೀಸ್ ಆಗ್ತಿದೆ. ಸ್ವತ: ಸುದೀಪ್ ಕಥೆ ಬರೆದಿರೋ ಈ ಚಿತ್ರವನ್ನ ಶಿವಕಾರ್ತಿಕ್ ನಿರ್ದೇಶಿಸಿದ್ದು, ದೇಶ ವಿದೇಶದಲ್ಲಿ ಕೋಟಿಗೊಬ್ಬನ ಹೊಸ ಕಥೆಯನ್ನ ಕಟ್ಟಿಕೊಡಲಾಗಿದೆ.

ಕೋಟಿಗೊಬ್ಬ-3 ರೀತಿಯಲ್ಲೇ ಕುತೂಹಲ ಕೆರಳಿಸಿರೋ ಮತ್ತೊಂದು ಸಿನಿಮಾ ಪೈಲ್ವಾನ್. ಸುದೀಪ್​ ಬಾಕ್ಸರ್ ಅವತಾರದಲ್ಲಿ ಕಾಣಿಸಿಕೊಂಡಿರೋ ಪೈಲ್ವಾನ್ ಚಿತ್ರಕ್ಕೆ ಹೆಬ್ಬುಲಿ ಖ್ಯಾತಿಯ ಕೃಷ್ಣ ಆಕ್ಷನ್ ಕಟ್ ಹೇಳ್ತಿದ್ದಾರೆ. ಸದ್ಯ ಹೈದ್ರಾಬಾದ್​ನಲ್ಲಿ ಈ ಸಿನಿಮಾ ಶೂಟಿಂಗ್ ನಡೀತಿದ್ದು, ಕಿಚ್ಚೋತ್ಸವದ ಸಂಭ್ರಮದಲ್ಲೇ ಪೈಲ್ವಾನ್​ ಖಡಕ್ ಟೀಸರ್​ ರಿವೀಲ್ ಆಗಲಿದೆ.

ಇನ್ನೂ ರೆಬೆಲ್ ಸ್ಟಾರ್ ಅಂಬರೀಷ್ ಅಭಿನಯದ ಅಂಬಿ ನಿಂಗ್ ವಯಸ್ಸಾಯ್ತೋ ಚಿತ್ರದಲ್ಲಿ ಸುದೀಪ್ ನಟಿಸಿರೋದು ಗೊತ್ತೇಯಿದೆ. ಫೋಟೋಸ್ ಬಿಟ್ರೆ, ಸ್ಯಾಂಪಲ್​ಗಳಲ್ಲಿ ಇಲ್ಲಿವರ್ಗೂ ಜ್ಯೂನಿಯರ್ ಅಂಬಿ ದರ್ಶನವಾಗಿಲ್ಲ. ಬರ್ತ್​ಡೇ ದಿನ ಅಂಬಿ ನಿಂಗ್​ ವಯಸ್ಸಾಯ್ತೋ ಸುದೀಪ್ ಟೀಸರ್​ ಲಾಂಚ್ ಆಗೋ ಸಾಧ್ಯತೆಯಿದೆ.

ಇದೆಲ್ಲದರ ನಡುವೆ ಸುದೀಪ್, ಚಿರಂಜೀವಿ ಅಭಿನಯದ ಸೈರಾ ನರಸಿಂಹ ರೆಡ್ಡಿ ಚಿತ್ರದಲ್ಲಿ ನಟಿಸ್ತಿರೋದು ಗೊತ್ತೇಯಿದೆ. ಇತ್ತೀಚೆಗೆ ಚಿರಂಜೀವಿ ಹುಟ್ಟುಹಬ್ಬಕ್ಕೆ ಟೀಸರ್ ರಿಲೀಸ್ ಆಗಿತ್ತು. ಕಿಚ್ಚೋತ್ಸವಕ್ಕೆ ಸೈರಾ ಟೀಮ್, ಸೈರಾ ಸುದೀಪ್ ಫಸ್ಟ್ ಲುಕ್ ರಿವೀಲ್ ಮಾಡೋ ಸಾಧ್ಯತೆಯಿದೆ. ಒಟ್ಟಾರೆ ಅಭಿಮಾನಿಗಳ ಜೊತೆ ಸುದೀಪ್ ಹುಟ್ಟುಹಬ್ಬ ಆಚರಿಸೋದಷ್ಟೆ ಅಲ್ಲ, ಭರ್ಜರಿ ಗಿಫ್ಟ್​ಗಳಿಂದ ಈ ವರ್ಷ ಕಿಚ್ಚೋತ್ಸವ ಕಳೆಕಟ್ಟಲಿದೆ.

ನಾಣಿ, ಎಂಟ್ರಟ್ರೈನ್​ಮೆಂಟ್ ಬ್ಯೂರೊ,ಟಿವಿ5

Next Story

RELATED STORIES