Top

ಲೋಕಸಭಾ ಚುನಾವಣೆಗೆ ದೇವೇಗೌಡ, ಸಿದ್ದರಾಮಯ್ಯ : ಎಲ್ಲಿಂದ ಕಣಕ್ಕೆ ಗೊತ್ತಾ.?

ಲೋಕಸಭಾ ಚುನಾವಣೆಗೆ ದೇವೇಗೌಡ, ಸಿದ್ದರಾಮಯ್ಯ : ಎಲ್ಲಿಂದ ಕಣಕ್ಕೆ ಗೊತ್ತಾ.?
X

ಬೆಂಗಳೂರು : ಈಗೇನಿದ್ರೂ ಲೋಕಸಭೆ ಚುನಾವಣೆಯದ್ದೇ ಚರ್ಚೆ.. ಯಾರು ಯಾರು ಎಲ್ಲಿಂದ ಸ್ಪರ್ಧೆ ಮಾಡ್ತಾರೆ ಅನ್ನೋದು ಭಾರೀ ಕುತೂಹಲ ಕೆರಳಿಸಿದೆ. ಅದ್ರಲ್ಲೂ ಸಮ್ಮಿಶ್ರ ಸರ್ಕಾರದ ಭಾಗೀದಾರ ಪಕ್ಷಗಳಾದ ಜೆಡಿಎಸ್​ ಹಾಗೂ ಕಾಂಗ್ರೆಸ್​ ಯಾವ ರೀತಿ ಹಂಚಿಕೆ ಮಾಡಿಕೊಳ್ಳುತ್ತೆ ಅನ್ನೋದು ಮತ್ತಷ್ಟು ಇಂಟರೆಸ್ಟಿಂಗ್​. ಇದೆಲ್ಲದಕ್ಕೂ ಇಂಪಾರ್ಟೆಂಟ್​ ಅಂದ್ರೆ ಮಾಜಿ ಪ್ರಧಾನಿ ಹೆಚ್​.ಡಿ.ದೇವೇಗೌಡ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಎಲ್ಲಿಂದ ಸ್ಪರ್ಧೆ ಮಾಡ್ತಾರೆ ಅನ್ನೋ ಬಗ್ಗೆ ಸಾಕಷ್ಟು ಲೆಕ್ಕಾಚಾರ ಶುರುವಾಗಿದೆ.

ಸದ್ಯಕ್ಕೆ ಮಾಜಿ ಪ್ರಧಾನಿ ದೇವೇಗೌಡರು ಈ ಬಾರಿ ರಾಜಕೀಯ ನಿವೃತ್ತಿ ಪಡೆಯುತ್ತಾರೆ. ತಮ್ಮ ಸ್ಥಾನವನ್ನ ತಮ್ಮ ಉತ್ತರಾಧಿಕಾರಿ ಪ್ರಜ್ವಲ್ ರೇವಣ್ಣ ಅವ್ರಿಗೆ ಬಿಟ್ಟು ಕೊಡ್ತಾರೆ ಅಂತ ಖುದ್ದು ಅವರೇ ಪ್ರಕಟಿಸಿದ್ರು. ಇದೀಗ ಅವರು ನೀಡಿದ್ದ ಹೇಳಿಕೆ ಹುಸಿಯಾಗುವ ಲಕ್ಷಣಗಳು ಗೋಚರಿಸ್ತಿವೆ. ರಾಜಕೀಯ ನಿವೃತ್ತಿ ಬಗ್ಗೆ ಮನಸ್ಸು ಬದಲು ಮಾಡಿದ್ದು. ಹಾಸನದ ಬದಲಾಗಿ ಮಂಡ್ಯದಲ್ಲಿ ಸ್ಪರ್ಧೆ ಮಾಡಲು ದೇವೇಗೌಡರು ಮನಸ್ಸು ಮಾಡಿದ್ದಾರೆ ಎನ್ನಲಾಗ್ತಿದೆ.

ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದ ಮಾಜಿ ಸಿಎಂ ಸಿದ್ದರಾಮಯ್ಯ, ಇದೀಗ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸ್ತಾರೆ ಅನ್ನೋ ಮಾತುಗಳು ಬಲವಾಗಿ ಕೇಳಿ ಬರ್ತಿವೆ. ತಮ್ಮ ಹಿಂದಿನ ಸೋಲಿನಿಂದ ಮುಖಭಂಗ ಅನುಭವಿಸಿದ್ದ ಸಿದ್ದರಾಮಯ್ಯ, ಲೋಕಸಭೆ ಎಲೆಕ್ಷನ್​ನಲ್ಲಿ ಮೈಸೂರಿನಿಂದ ಗೆದ್ದು ಸಾಧಿಸುವ ಹುಮ್ಮಸ್ಸಿನಲ್ಲಿದ್ದಾರೆ ಎನ್ನಲಾಗ್ತಿದೆ.

ಇನ್ನೊಂದು ಮೂಲಗಳ ಪ್ರಕಾರ ಸಿದ್ದರಾಮಯ್ಯ ಲೋಕಸಭೆ ಚುನಾವಣೆಗೆ ಹೋಗೋದು ಡೌಟು.. ಮತ್ತೆ ಸಿಎಂ ಆಗುವ ಮಹತ್ವಕಾಂಕ್ಷೆ ಹೊಂದಿರುವ ಸಿದ್ದರಾಮಯ್ಯ ರಾಷ್ಟ್ರ ರಾಜಕಾರಣಕ್ಕೆ ಹೋಗ್ತಾರೆ ಅಂತ ಲೆಕ್ಕಾಚಾರ ಹಾಕಲು ಸಾಧ್ಯವಿಲ್ಲ ಎನ್ನಲಾಗ್ತಿದೆ. ಹೀಗಾಗಿಯೇ ರಾಜ್ಯ ರಾಜಕಾರಣದಲ್ಲಿ ಸಿದ್ದು ನಿಗೂಢ ನಡೆ ಸಾಕಷ್ಟು ಕುತೂಹಲ ಕೆರಳಿಸಿದೆ.

ಹಾಸನ ಕ್ಷೇತ್ರವನ್ನ ತಮ್ಮ ಮೊಮ್ಮಗ ಪ್ರಜ್ವಲ್​ ರೇವಣ್ಣಗೆ ಬಿಟ್ಟುಕೊಟ್ರೆ ಸುಲಭವಾಗಿ ಗೆಲುವು ಸಾಧಿಸಬಹುದು. ಮಂಡ್ಯದಿಂದ ನೀರು ಕುಡಿದಷ್ಟೇ ಸುಲಭವಾಗಿ ತಾವು ಗೆಲ್ಲಬಹುದು ಅಂತ ದೇವೇಗೌಡರು ಲೆಕ್ಕಾಚಾರ ಹಾಕಿದ್ದಾರೆ.

ಇತ್ತ ಸಿದ್ದರಾಮಯ್ಯ ಪ್ರತಿಷ್ಠೆಗಾಗಿ ಮೈಸೂರು ಅಥವಾ ಕುರುಬ ಸಮುದಾಯ ಹೆಚ್ಚಿರುವ ಕೊಪ್ಪಳದಿಂದ ಸ್ಪರ್ಧೆ ಮಾಡುವ ಉಮೇದು ಹೊಂದಿದ್ದಾರೆ. ಆದ್ರೆ ಇದೆಲ್ಲವೂ ಸದ್ಯದ ರಾಜಕೀಯ ಲೆಕ್ಕಾಚಾರ. ಮುಂದಿನ ದಿನಗಳ ಬದಲಾದ ಪರಿಸ್ಥಿತಿ ಇದು ಯಾವ ರೀತಿಯಲ್ಲಿ ತಿರುವು ಪಡೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ವರದಿ : ದಶರಥ್​ ಸಾವೂರು, ಪೊಲಿಟಿಕಲ್​ ಬ್ಯೂರೋ, ಟಿವಿ5 ಬೆಂಗಳೂರು

Next Story

RELATED STORIES