Top

ಅಭಿವೃದ್ಧಿ ಕಾಮಗಾರಿಗೆ ಇಲ್ಲಿ ಲಂಚ ಕೊಟ್ರೇ ಮಾತ್ರ ಫೈಲ್‌ ಮೂವ್‌.!

ಅಭಿವೃದ್ಧಿ ಕಾಮಗಾರಿಗೆ ಇಲ್ಲಿ ಲಂಚ ಕೊಟ್ರೇ ಮಾತ್ರ ಫೈಲ್‌ ಮೂವ್‌.!
X

ಚಿತ್ರದುರ್ಗ : ಆ ತಾಲೂಕು ಪಂಚಾಯ್ತಿ ಅಧಿಕಾರಿ ಗ್ರಾಮಪಂಚಾಯ್ತಿ ವ್ಯಾಪ್ತಿಯ ಯಾವುದಾದರೂ ಅಭಿವೃದ್ದಿ ಯೋಜನೆಗಳಿಗೆ ಅನುಮೋದನೆ ಮಾಡಬೇಕಾದ್ರೆ ಲಂಚ ಕೊಡದಿದ್ರೆ ಫೈಲ್ ಮೂವ್ ಆಗಲ್ವಂತೆ. ಕಾಮಗಾರಿಗಳಿಗೆ ಅಪ್ರೂವಲ್ ಸಿಗಬೇಕಾದ್ರೆ 3% ಕೊಟ್ರೆ ಮಾತ್ರ ಕೊಡಲೇಬೇಕಂತೆ, ಗ್ರಾಮಪಂಚಾಯ್ತಿ ಅಧ್ಯಕ್ಷರಾಗಿರಬೇಕು ಅಂದ್ರೆ ಪ್ರತೀ ತಿಂಗಳು ಲಂಚ ಕೊಡಬೇಕಂತೆ, ಇಲ್ಲದಿದ್ರೆ ಅಧ್ಯಕ್ಷರ ವಿರುದ್ದ ಸುಳ್ಳು ವರದಿ ಸಲ್ಲಿಸಿ ಅವಿಶ್ವಾಸ ಮಂಡನೆ ಮಾಡಿಸ್ತಾರಂತೆ. ಹೀಗೆಲ್ಲಾ ಗಂಭೀರ ಆರೋಪ ಮಾಡ್ತಿರೋದು ಯಾರು ಗೊತ್ತಾ? ಈ ಸ್ಟೋರಿ ಓದಿ..

ಮೀನಾಕ್ಷಮ್ಮ.., ಚಿತ್ರದುರ್ಗ ತಾಲೂಕಿನ ಹುಲ್ಲೂರು ಗ್ರಾಮಪಂಚಾಯ್ತಿ ಅಧ್ಯಕ್ಷರಾಗಿದ್ದ ಇವರನ್ನ, ಇತ್ತೀಚೆಗಷ್ಟೇ ಅವಿಶ್ವಾಸ ಮಂಡನೆ ಮಾಡೋ ಮೂಲಕ ಅಧ್ಯಕ್ಷರ ಸ್ಥಾನದಿಂದ ಕೆಳಗಿಳಿಸಲಾಗಿದೆ.

ಆದ್ರೆ ಮಾಜಿ ಪ್ರಧಾನಿ ವಾಜಪೇಯಿ ಅವರ ನಿಧನದಂದು ಸರ್ಕಾರಿ ರಜೆ ಇದ್ದ ವೇಳೆ ಸಭೆ ನಡೆಸಿ ಅವಿಶ್ವಾಸ ಮಂಡನೆ ಮಾಡಲಾಗಿದೆ. ಹೀಗಾಗಿ ನಾನು ನನ್ನ ವಿರುದ್ದ ಕೇಳಿ ಬಂದಿರುವ ಆರೋಪಗಳಿಗೆ ಸಮಜಾಯಿಷಿ ನೀಡಲು ಅವಕಾಶ ಸಿಗಲಿಲ್ಲ.

ಅವಿಶ್ವಾಸ ಮಂಡನೆಗೆ ನೀಡಿರುವ ಕಾರಣಗಳು ಸಂಪೂರ್ಣ ಸುಳ್ಳು, ನಾನು ಅಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ ಮೂರು ವರ್ಷಗಳ ಅವಧಿಯಲ್ಲಿ ನಿಯಮಾನುಸಾರ ಸಭೆಗಳನ್ನು ನಡೆಸಿಕೊಂಡು ಬಂದಿದ್ದೇನೆ, ಆದರೆ ತಾಲೂಕು ಪಂಚಾಯ್ತಿ ಇಒ ಲಕ್ಷ್ಮೀಕಾಂತ್ ಅವರು ಲಂಚ ಕೊಡಲಿಲ್ಲ ಅನ್ನೋ ಕಾರಣಕ್ಕೆ ಸುಳ್ಳು ವರದಿ ಸಲ್ಲಿಸಿದ್ದಾರೆ.

ನಾನು ಅಧ್ಯಕ್ಷೆಯಾಗಿ ಆಯ್ಕೆಯಾದಾಗಿನಿಂದಲೂ ಇಒ ಅವರಿಗೆ ಪ್ರತೀ ತಿಂಗಳೂ ಹಣ ಕೊಡುತ್ತಾ ಬಂದಿದ್ದೇನೆ. ನಮ್ಮ ಗ್ರಾಮ ಪಂಚಾಯ್ತಿ ಅಭಿವೃದ್ದ ಮಾಡೋಕೆ ಅಂತ ಇವರು ಕೇಳಿದಾಗಲೆಲ್ಲಾ ಶೇಕಡಾವಾರು ಲೆಕ್ಕದಲ್ಲಿ ಲಂಚ ಕೊಟ್ಟಿದ್ದೇನೆ, ಎಲ್ಲಾ ರೀತಿಯ ಕಾಮಗಾರಿಗಳಿಗೆ ಅನುಮೋದನೆ ಪಡೆದಾಗಲೆಲ್ಲಾ ಶೇಕಡಾ ೩%ರಂತೆ ಲಕ್ಷಾಂತರ ರೂಪಾಯಿ ಹಣ ಕೊಟ್ಟಿದ್ದೇನೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಈ ಕುರಿತು ಹೇಳಿಕೆ ಪಡೆಯಲು ಇಒ ಲಕ್ಷೀಪತಿ ಅವರನ್ನ ಸಂಪರ್ಕಿಸೋ ಪ್ರಯತ್ನ ಮಾಡಿದ್ರೆ ಅವರು ಮೊಬೈಲ್ ಸ್ವಿಚ್ ಆಫ್ ಮಾಡ್ಕೊಂಡು ನಾಪತ್ತೆ ಆಗಿದ್ದು, ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಇಒ ರವೀಂದ್ರ ಅವರು, ಅಧ್ಯಕ್ಷರ ವಿರುದ್ದ ತನಿಖಾ ವರದಿ ಸಲ್ಲಿಸಿದ ನಂತರ ಅವಿಶ್ವಾಸ ಮಂಡನೆಯ ಪ್ರಕ್ರಿಯೆ ಕೂಡ ಮುಂದೆ ಹೋಗಿದೆ.

ಹೀಗಾಗಿ ಇದು ಚುನಾವಣೆ ಪ್ರಕ್ರಿಯಿಗೆ ಅಂಬಂಧಿಸಿರೋದ್ರಿಂದ ಈ ಕುರಿತು ಮರು ತನಿಖೆ ಮಾಡಿಸುವ ಅಧಿಕಾರ ನನಗಿಲ್ಲ, ಹೀಗಾಗಿ ಮೀನಾಕ್ಷಿ ಅವರು ಅವಿಶ್ವಾಸ ಮಂಡನೆಯಿಂದ ಆಗಿರುವ ಅನ್ಯಾಯದ ಕುರಿತು ಸಕ್ಷಮ ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸಬೆಕಿದ್ದು, ಇಒ ಲಕ್ಷ್ಮೀಪತಿ ವಿರುದ್ದ ಮಾಡಿರುವ ಲಂಚಾರೋಪದ ಬಗ್ಗೆ ನೋಟಿಸ್ ಜಾರಿ ಮಾಡಿ ವಿವರಣೆ ಕೇಳುತ್ತೇನೆ ಎಂದಿದ್ದಾರೆ.

ಒಟ್ಟಾರೆ ಲಂಚದ ಆರೋಪ ಹೊತ್ತಿರೋ ಇಒ ಸಲ್ಲಿಸಿರುವ ವರದಿ ಅನ್ವಯ, ಗ್ರಾಮಪಂಚಾಯ್ತಿ ಅಧ್ಯಕ್ಷೆ ವಿರುದ್ದ ಈಗಾಗಲೆ ಅವಿಶ್ವಾಸ ಮಂಡನೆಯಾಗಿ ಪದಚ್ಯುತಿಗೊಂಡಿದ್ದಾರೆ. ನನಗೆ ಅಧಿಕಾರದ ಆಸೆಯಿಲ್ಲ. ಆದರೆ ಲಂಚಕ್ಕಾಗಿ ಸುಳ್ಳು ವರದಿ ಸಲ್ಲಿಸಿ ಅಮಾಯಕರಿಗೆ ಅನ್ಯಾಯ ಮಾಡ್ತಿರೋ ಅಧಿಕಾರಿಗಳ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಮುಂದೆ ಯಾವ ಮಹಿಳೆಗೂ ನನಗಾದ ಅನ್ಯಾಯ ಆಗಬಾರದು ಅಂತ ಪದಚ್ಯುತ ಅಧ್ಯಕ್ಷೆ ಮನವಿ ಮಾಡಿದ್ದಾರೆ.

ಹೀಗಾಗಿ ಸಂಬಂಧಪಟ್ಟವರು ಈ ಕುರಿತು ಸೂಕ್ತ ತನಿಖೆ ನಡೆಸೋ ಮೂಲಕ ತಪ್ಪಿತಸ್ತರಿಗೆ ಶಿಕ್ಷೆ ಸಿಗುವಂತೆ ಮಾಡಬೇಕಿದೆ.

ವರದಿ : ವೀರೇಶ್ ವಿ ಚಳ್ಳಕೆರೆ, ಟಿವಿ5 ಚಿತ್ರದುರ್ಗ

Next Story

RELATED STORIES