ವರದಕ್ಷಿಣೆಗಾಗಿ ಬಾಂಗ್ಲಾದೇಶ ಕ್ರಿಕೆಟಿಗನಿಂದ ಪತ್ನಿಗೆ ಕಿರುಕುಳ

X
TV5 Kannada28 Aug 2018 4:31 AM GMT
ವರದಕ್ಷಿಣೆಗಾಗಿ ಗಂಡ ಕಿರುಕುಳ ನೀಡಿದ್ದೂ ಅಲ್ಲದೇ ತವರು ಮನೆಗೆ ಬಿಟ್ಟು ಬಂದಿದ್ದಾರೆ ಎಂದು ಬಾಂಗ್ಲಾದೇಶದ ಕ್ರಿಕೆಟಿಗ ಮೊಸಾದೆಕ್ ಹುಸೇನ್ ಸೈಕತ್ ಪತ್ನಿ ಆರೋಪಿಸಿದ್ದಾರೆ.
22 ವರ್ಷದ ಮೊಸಾದೆಕ್ ಹುಸೇನ್ ಸೈಕತ್ 6 ವರ್ಷಗಳ ಹಿಂದೆ ಸೋದರ ಸಂಬಂಧಿ ಶರ್ಮಿನ್ ಸಮೀರಾ ಉಷಾ ಅವರನ್ನು ವಿವಾಹವಾಗಿದ್ದರು.
ಮೊಸಾದೆಕ್ ಹುಸೇನ್ ಸೆಪ್ಟೆಂಬರ್ 13ರಿಂದ 28ರವರೆಗೆ ಯುಎಇಯಲ್ಲಿ ನಡೆಯಲಿರುವ ಏಷ್ಯಾಕಪ್ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಬಾಂಗ್ಲಾದೇಶ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಸೆಷನ್ಸ್ ನ್ಯಾಯಾಲಯದ ಹೆಚ್ಚುವರಿ ಮುಖ್ಯ ನ್ಯಾಯಾಧೀಶ ರೋಸಿನಾ ಖಾನ್, ದೂರನ್ನು ಸ್ವೀಕರಿಸಿದ್ದು, ಪ್ರಕರಣದ ತನಿಖೆ ನಡೆಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಮೊಸಾದೆಕ್ ದೀರ್ಘ ಸಮಯದಿಂದ ಪತ್ನಿಗೆ ಕಿರುಕುಳ ನೀಡುತ್ತಲೇ ಬಂದಿದ್ದಾರೆ. ಆಗಸ್ಟ್ 15ರಂದು 1 ಲಕ್ಷ ಟಿಕ್ಕಾ ಅಂದರೆ 13 ಸಾವಿರ ಡಾಲರ್ ದುಡ್ಡು ತರುವಂತೆ ತವರು ಮನೆಗೆ ಕಳುಹಿಸಿದ್ದಾನೆ ಎಂದು ಶರ್ಮಿನ್ ಸಮೀರಾ ಪರ ವಕೀಲ ರಿಜ್ವುಲ್ ಕರೀಂ ದುಲಾಲ್ ಆರೋಪಿಸಿದ್ದಾರೆ.
Next Story