Top

ಏಷ್ಯನ್ ಗೇಮ್ಸ್: ಸಿಂಧು ಕೈ ತಪ್ಪಿದ ಚಿನ್ನ, ಆರ್ಚರಿ ತಂಡಗಳಿಗೆ ಬೆಳ್ಳಿ

ಏಷ್ಯನ್ ಗೇಮ್ಸ್: ಸಿಂಧು ಕೈ ತಪ್ಪಿದ ಚಿನ್ನ, ಆರ್ಚರಿ ತಂಡಗಳಿಗೆ ಬೆಳ್ಳಿ
X

ಭಾರತದ ಸ್ಟಾರ್ ಆಟಗಾರ್ತಿ ಪಿ.ವಿ. ಸಿಂಧು ಫೈನಲ್​ ನಲ್ಲಿ ಸೋತರೂ ಏಷ್ಯನ್ ಗೇಮ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದ ಏಕೈಕ ಭಾರತೀಯ ಬ್ಯಾಡ್ಮಿಂಟನ್ ಆಟಗಾರ್ತಿ ಎಂಬ ಗೌರವಕ್ಕೆ ಪಾತ್ರರಾದರು.

ಮಂಗಳವಾರ ನಡೆದ ವನಿತೆಯರ ಸಿಂಗಲ್ಸ್ ಫೈನಲ್​ನಲ್ಲಿ ಸಿಂಧು 13-21, 16-21 ನೇರ ಸೆಟ್​ಗಳಿಂದ ಚೈನೀಸ್ ತೈಪೆಯ ತಾಯ್ ತ್ಸು ಯಿಂಗ್ ವಿರುದ್ಧ ಸೋಲುಂಡರು. ಈ ಮೂಲಕ ಚಿನ್ನದ ಪದಕ ಗೆಲ್ಲುವ ಅವಕಾಶ ಕೈತಪ್ಪಿದರೂ ಫೈನಲ್ ತಲುಪಿದ ಮೊದಲ ಆಟಗಾರ್ತಿ ಎಂಬ ಗೌರವಕ್ಕೆ ಪಾತ್ರರಾದರು.

ಭಾರತದ ಮತೊಬ್ಬ ಸ್ಟಾರ್ ಆಟಗಾರ್ತಿ ಸೈನಾ ನೆಹವಾಲ್ ಸೆಮಿಫೈನಲ್​ನಲ್ಲಿ ಇದೇ ಆಟಗಾರ್ತಿ ವಿರುದ್ಧ ಸೋಲುಂಡು ಕಂಚಿನ ಪದಕಕ್ಕೆ ತೃಪ್ತರಾದರು.

ಇದೇ ವೇಳೆ ಭಾರತ ಪುರುಷರ ಆರ್ಚರಿ ತಂಡ 229-229 ಅಂಕಗಳಿಂದ ಫೈನಲ್​ನಲ್ಲಿ ದಕ್ಷಿಣ ಕೊರಿಯಾ ವಿರುದ್ಧ ಸಮಬಲದ ಹೋರಾಟ ನೀಡಿದರೂ ಶೂಟೌಟ್​ನಲ್ಲಿ ಮುಗ್ಗರಿಸಿ ಬೆಳ್ಳಿ ಪದಕಕ್ಕೆ ತೃಪ್ತವಾಯಿತು. ದಕ್ಷಿಣ ಕೊರಿಯಾ ವಿರುದ್ಧ ಭಾರತ ಮಹಿಳಾ ತಂಡವೂ 228-231 ಅಂಕಗಳಿಂದ ಸೋತು ಬೆಳ್ಳಿ ಪದಕ ಗಳಿಸಿತು.

Next Story

RELATED STORIES