Top

ರಕ್ಷಾಬಂಧನದ ದಿನ ಅಪರೂಪದ ಫೋಟೋ ಹರಿಬಿಟ್ಟ ವಿರಾಟ್

ರಕ್ಷಾಬಂಧನದ ದಿನ ಅಪರೂಪದ ಫೋಟೋ ಹರಿಬಿಟ್ಟ ವಿರಾಟ್
X

ನಿನ್ನೆ ಎಲ್ಲೆಡೆ ರಕ್ಷಾಬಂಧನ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಅಕ್ಕ-ತಂಗಿಯರು ತಮ್ಮ ಸಹೋದರರಿಗೆ ರಾಖಿ ಕಟ್ಟಿ ಸಂಭ್ರಮಿಸಿದರು. ಜನಸಾಮಾನ್ಯರಷ್ಟೇ ಅಲ್ಲದೇ, ಕ್ರೀಡಾಪಟುಗಳು, ಸಿನಿ ತಾರೆಯರು, ರಾಜಕಾರಣಿಗಳು ಕೂಡ ಹಬ್ಬವನ್ನ ಸೆಲೆಬ್ರೇಟ್ ಮಾಡಿದ್ರು.

ಕ್ರಿಕೆಟ್ ತಾರೆ ವಿರಾಟ್ ಕೊಹ್ಲಿ, ಬಾಲ್ಯದಲ್ಲಿ ತಮ್ಮ ಅಕ್ಕನ ಜೊತೆ ಇರುವ ಫೋಟೋವೊಂದನ್ನ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಫೋಟೋನಲ್ಲಿ ತಮ್ಮ ಸಹೋದರಿ ಭಾವನಾ ಧಿಂಗ್ರಿ ಜೊತೆ ವಿರಾಟ್ ಕೇಕ್ ಕಟ್ ಮಾಡುತ್ತಿದ್ದು, ಮಕ್ಕಳ ಸಂಭ್ರಮಕ್ಕೆ ಅಮ್ಮ ಸಾಥ್ ನೀಡಿದ್ದಾರೆ. ಈ ಫೋಟೋವನ್ನು ಟ್ವಿಟರ್‌ನಲ್ಲಿ ಹಾಕುವ ಮೂಲಕ ವಿರಾಟ್ ತಮ್ಮ ಅಕ್ಕನಿಗೆ ರಾಖಿ ಹಬ್ಬದ ಶುಭಾಶಯ ತಿಳಿಸಿದ್ದಾರೆ.

Next Story

RELATED STORIES