Top

ತವರಿಗೆ ಪರಿಚಯವಾಗದ ಈಕೆ ಕನ್ನಡಕ್ಕೆ ಯಾವಾಗ..?

ತವರಿಗೆ ಪರಿಚಯವಾಗದ ಈಕೆ ಕನ್ನಡಕ್ಕೆ ಯಾವಾಗ..?
X

ಐಶ್, ದೀಪಿಕಾ, ಶಿಲ್ಪಾ ಶೆಟ್ಟಿ ಹೀಗೆ ಬಿಟೌನ್​ನಲ್ಲಿ ಸಾಲು ಸಾಲು ಕನ್ನಡಿತಿಯರು ಮಿಂಚು ಹರಿಸಿದ್ದಾರೆ. ಇಂದಿಗೂ ಅದೇ ಬೇಡಿಕೆ ಉಳಿಸಿಕೊಂಡಿದ್ದಾರೆ. ಅದೇ ರೀತಿ ಮತ್ತೊಂದಷ್ಟು ನಟೀಮಣಿಯರು ಇದೀಗ ಸೌತ್ ದುನಿಯಾದಲ್ಲಿ ಸಖತ್ ಸೌಂಡ್ ಮಾಡ್ತಿದ್ದಾರೆ. ಅದ್ರಲ್ಲೂ ಕನ್ನಡಕ್ಕೇ ಪರಿಚಯ ಆಗದ ಅಪ್ಪಟ ಕನ್ನಡತಿ ಟಾಲಿವುಡ್ ಅಂಗಳದಲ್ಲಿ ಸಖತ್ ಶೈನ್ ಆಗ್ತಿದ್ದಾರೆ. ಆ ಚೆಲುವೆಯ ಎಕ್ಸ್​ಕ್ಲೂಸಿವ್ ಮಾಹಿತಿ ಮುಂದೆ ಓದಿ..

ಬಿಟೌನ್ ಆಳಿದ ಐಶ್ವರ್ಯಾ ರೈ, ಶಿಲ್ಪಾ ಶೆಟ್ಟಿ... ಇಂದಿಗೂ ಸಕ್ಸಸ್ ಗ್ರಾಫ್​ನ ಉತ್ತುಂಘದಲ್ಲಿರೋ ದೀಪಿಕಾ ಪಡುಕೋಣೆ ಸೇರಿದಂತೆ ಸಾಕಷ್ಟು ಕನ್ನಡದ ಚೆಲುವೆಯರು ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಹೆಸ್ರು ಮಾಡಿದ್ದಾರೆ.

ಅಷ್ಟೇ ಯಾಕೆ ಟಾಲಿವುಡ್ ಅಂಗಳದಲ್ಲಿ ಸಾಕಷ್ಟು ಕನ್ನಡದ ನಟೀಮಣಿಯರು ಸಿಕ್ಕಾಪಟ್ಟೆ ಜೋರಾಗಿ ಶೈನ್ ಆಗ್ತಿದ್ದಾರೆ. ಅದ್ರಲ್ಲಿ ಕಿರಿಕ್ ಪಾರ್ಟಿಯ ರಶ್ಮಿಕಾ ಮಂದಣ್ಣ ಮತ್ತು ಕಡಲ ಕಿನಾರೆ ಮಂಗಳೂರ ಚೆಲುವೆ ಪೂಜಾ ಹೆಗಡೆ ಸದ್ಯ ಟಾಕ್ ಆಫ್ ದ ಟೌನ್ ಆಗಿದ್ದಾರೆ.

ಸೌತ್ ಸಿನಿದುನಿಯಾದಲ್ಲಿ ಮತ್ತೊಬ್ಬ ಕನ್ನಡತಿ ಮಿಂಚು

ರಶ್ಮಿಕಾ ರೀತಿ ಶೈನ್ ಆಗ್ತಿದ್ದಾರೆ ಮತ್ತೊಬ್ಬ ಕನ್ನಡ ಬ್ಯೂಟಿ

ಯೆಸ್.. ಮುದ್ದು ಮೊಗದ ಈ ಪೋರಿ ಮೌರ್ಯಾನಿ. ಚಿಕ್ಕಬಳ್ಳಾಪುರ ಮೂಲದ ಈ ಚೆಲುವೆ ಹುಟ್ಟಿ ಬೆಳೆದದ್ದೆಲ್ಲಾ ಬೆಂಗಳೂರು. ಆದ್ರೆ ಬಣ್ಣದಲೋಕದಲ್ಲಿ ಮಿಂಚ್ತಿರೋದು ಮಾತ್ರ ಪಕ್ಕದ ಟಾಲಿವುಡ್​ ಅಂಗಳದಲ್ಲಿ ಅನ್ನೋದು ವಿಶೇಷ.

ಚಲೋ, ಗೀತಾ ಗೋವಿಂದಂ ಸಿನಿಮಾಗಳ ಮೂಲಕ ಟಾಲಿವುಡ್ ಸ್ಟಾರ್​ಗಳ ಜೊತೆ ಮಿಂಚ್ತಾ ಇರೋ ಕರ್ನಾಟಕ ಕ್ರಶ್ ರಶ್ಮಿಕಾ ಹಾದಿಯಲ್ಲಿ ಮೌರ್ಯಾನಿ ಸಾಗ್ತಿದ್ದಾರೆ. ಮೌರ್ಯಾನಿ ಎರಡು ವರ್ಷದಲ್ಲಿ ಎಂಟತ್ತು ಸಿನಿಮಾ ಮಾಡಿದ್ದಾರೆ. ಅದು ಇತ್ತೀಚೆಗೆ ತೆರೆಕಂಡ ಗೀತಾ ಗೋವಿಂದಂ ಚಿತ್ರದಲ್ಲೂ ಬಣ್ಣ ಹಚ್ಚಿರೋದು ವಿಶೇಷ.

‘ಅರ್ಧನಾರಿ’ಯಾಗಿ ಟಾಲಿವುಡ್ ಅಂಗಳಕ್ಕೆ ಮೌರ್ಯಾನಿ

ಅಲ್ಲರಿ ನರೇಶ್ ಜೊತೆ ರೊಮ್ಯಾನ್ಸ್ ಮಾಡಿದ ಕನ್ನಡತಿ..!

ಎರಡು ವರ್ಷದ ಹಿಂದೆ ತೆರೆಕಂಡ ತೆಲುಗಿನ ಅರ್ಧನಾರಿ ಸಿನಿಮಾದಿಂದ ಪಕ್ಕದ ಟಾಲಿವುಡ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಮೌರ್ಯಾನಿ, ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಮಿಂಚು ಹರಿಸ್ತಿದ್ದಾರೆ. ಅರ್ಧನಾರಿ ಬಳಿಕ ನವೀನ್ ಸಂಜಯ್ ಜೊತೆಗಿನ ಜಾನಕಿ ರಾಮುಡು ಅನ್ನೋ ಚಿತ್ರದಲ್ಲಿ ಕಾಲೇಜ್ ಹುಡ್ಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ರು. ಅದಾದ ಬಳಿಕ ಇಂಟ್ಲೋ ದಯ್ಯಮ್ ನಾಕೇಮ್ ಭಯಂ ಅನ್ನೋ ಚಿತ್ರದಲ್ಲಿ ಸೆನ್ಸೇಷನಲ್ ಕಾಮಿಡಿ ಸ್ಟಾರ್ ಅಲ್ಲರಿ ನರೇಶ್ ಜೊತೆ ಮಸ್ತ್ ರೊಮ್ಯಾನ್ಸ್ ಮಾಡಿ ಗಮನ ಸೆಳೆದಿದ್ರು.

ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಜೊತೆ ನಟಿಸಿರೋ ಚೆಲುವೆ

ವಿಜಯ್ ದೇವರಕೊಂಡ ಸಿನಿಮಾದಲ್ಲೂ ಈಕೆ ಮಿಂಚು

ಮೌರ್ಯಾನಿ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್​ರ ನಾಪೇರು ಸೂರ್ಯ ಸಿನಿಮಾದಲ್ಲಿ ಗೆಸ್ಟ್ ಅಪ್ಪಿಯರೆನ್ಸ್ ಮಾಡಿದ್ರು. ಬಹುಬೇಗ ಬಿಗ್ ಸ್ಟಾರ್ಸ್​ ಮನಗೆದ್ದ ಈ ಚೆಲುವೆ, ಅಲ್ಲಿಂದಲೇ ಗೆಲುವಿನ ಸಿಹಿ ನಗೆ ಬೀರಲು ಶುರು ಮಾಡಿದ್ರು.

ಅಷ್ಟೇ ಯಾಕೆ ಇತ್ತೀಚೆಗೆ ತೆರೆಕಂಡ ಅರ್ಜುನ್ ರೆಡ್ಡಿ ಖ್ಯಾತಿಯ ಗೀತಾ ಗೋವಿಂದಂನಲ್ಲಿ ವಿಜಯ್ ಸಹೋದರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮಹತ್ವದ ಪಾತ್ರವಾದ್ದರಿಂದ ತಂಗಿ ಪಾತ್ರವಾದ್ರೂ ಒಪ್ಪಿಕೊಂಡು ಭೇಷ್ ಅನಿಸಿಕೊಳ್ಳೋ ಅಂತಹ ಪರ್ಪಾರ್ಮೆನ್ಸ್ ಕೊಟ್ಟಿದ್ದಾರೆ.

ರಾಮಾಚಾರಿ ರಾಕಿಂಗ್ ಸ್ಟಾರ್ ಅಂದ್ರೆ ಸಿಕ್ಕಾಪಟ್ಟೆ ಇಷ್ಟ..!

ದೊಡ್ಡ ದೊಡ್ಡ ಸ್ಟಾರ್​ಗಳ ಜೊತೆಯೇ ಮಿಂಚ್ತಿರೋ ಮೌರ್ಯಾನಿ, ಕನ್ನಡಕ್ಕೆ ಪರಿಚಯ ಆಗದಿರೋದು ವಿಪರ್ಯಾಸ. ಟಾಲಿವುಡ್ ಅಂಗಳದಲ್ಲಿ ಸತತ ಮೂರು ವರ್ಷಗಳಿಂದ ಬ್ಯುಸಿ ಆಗಿರೋ ಈ ಚೆಲುವೆಯನ್ನ ಕನ್ನಡದ ನಿರ್ಮಾಪಕರು ಯಾವಾಗ ಗುರ್ತಿಸುತ್ತಾರೋ ಗೊತ್ತಿಲ್ಲ.

ಇನ್ನು ರಾಕಿಂಗ್ ಸ್ಟಾರ್ ಅಂದ್ರೆ ಈಕೆಗೆ ಪಂಚಪ್ರಾಣ. ಅವ್ರ ಸ್ಟೈಲು ಮ್ಯಾನರಿಸಂ ಸೇರಿದಂತೆ ಆತ ಬೆಳೆದು ಬಂದ ಹಾದಿ ಈಕೆಗೆ ಆದರ್ಶವಂತೆ.

ಸದ್ಯ ತಮಿಳು ಸಿನಿಮಾವೊಂದಕ್ಕೆ ಪೋಟೋಶೂಟ್ ಮಾಡಿಸಿ, ಸಿದ್ದತೆ ನಡೆಸ್ತಿರೋ ಮೌರ್ಯಾನಿ, ಯಶ್ ಸೇರಿದಂತೆ ಕನ್ನಡದ ಬಹುತೇಕ ಎಲ್ಲಾ ಸ್ಟಾರ್ಸ್​ ಜೊತೆ ಕೆಲಸ ಮಾಡೋ ಇಂಗಿತ ವ್ಯಕ್ತಪಡಿಸಿದ್ದಾರೆ. ಚಂದನವನಕ್ಕೆ ಈಕೆ ಆದಷ್ಟು ಬೇಗ ಕಾಲಿಡುವಂತಾಗಲಿ ಅಂತ ಹಾರೈಸೋಣ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಎಂಟ್ರಟೈನ್ಮೆಂಟ್ ಬ್ಯೂರೋ ಹೆಡ್‌, ಟಿವಿ5

Next Story

RELATED STORIES