Top

ಗುರುರಾಯರ 347 ಅದ್ಧೂರಿ ಆರಾಧನಾ ಮಹೋತ್ಸವ

ಗುರುರಾಯರ 347 ಅದ್ಧೂರಿ ಆರಾಧನಾ ಮಹೋತ್ಸವ
X

ರಾಯಚೂರು: ಕಲಿಯುಗ ಕಲ್ಪವೃಕ್ಷ ಗುರು ರಾಯರ 347ನೇ ಆರಾಧನಾ ಮಹೋತ್ಸವ ನಡೆಯುತ್ತಿದ್ದು, ಮಂತ್ರಾಲಯ ವಧುವಿನಂತೆ ಸಿಂಗಾರಗೊಂಡಿದೆ. ಶ್ರೀ ಗುರು ರಾಯರ ಆರಾಧನೆ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಪೂರ್ವಾರಾಧನೆ, ಬೃಂದಾವನಕ್ಕೆ ಪಂಚಾಮೃತ ಅಭಿಷೇಕ ನಡೆಸಲಾಗಿದೆ. ಇನ್ನು ಈ ಬಾರಿಯ ವಿಶೇಷವಾಗಿ ರಾಯರ ಬೃಂದಾವನದ ಪಕ್ಕದಲ್ಲಿ ನಿರ್ಮಿಸಲಾದ ಉತ್ತಮ ಶಿಲ್ಪಕಲೆಯುಳ್ಳ ಕಲ್ಲಿನ ಮಂಟಪ ಸಿದ್ಧಮಾಡಿಲಾಗಿದ್ದು, ಇಲ್ಲಿ ಮೂಲ ರಾಮದೇವರ ಪೂಜೆ ನೆರವೇರಿಸಲಾಗುವುದು.

ಈಗಾಗಲೇ ಮಂತ್ರಾಲಯಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದು, ರಾಯರ ದರ್ಶನ ಕಂಣ್ತುಂಬಿಕೊಳ್ಳುತ್ತಿದ್ದಾರೆ. ಸುಬುದೇಂದ್ರ ಶ್ರೀಗಳು ಯತಿವರೇಣ್ಯರಿಗೆ ವಿಶೇಷ ಪೂಜೆ ಸಲ್ಲಿಸಿದ್ದು, ನಾಳೆ ತಿರುಪತಿಯಿಂದ ಮಂತ್ರಾಲಯಕ್ಕೆ ರಾಯರಿಗಾಗಿ ವೆಂಕಟೇಶ ಶೇಷ ವಸ್ತ್ರ ತರಲಾಗುತ್ತಿದೆ. ಇಂದು ಪೂರ್ವಾರಾಧನೆ ನಡೆಯಲಿದ್ದು, ನಾಳೆ ಮಧ್ಯಾರಾಧನೆ, ನಾಡಿದ್ದು ಉತ್ತರಾರಾಧನೆ ನಡೆಯಲಿದ್ದು, ಗೋಪೂಜೆ, ಗಜಪೂಜೆ ಸೇರಿ ಹಲವು ವಿಶೇಷ ಪೂಜೆ ನಡೆಯುತ್ತಿದ್ದು, ಶ್ಲೋಕ, ಭಜನೆ, ಇತ್ಯಾದಿ ಭರದಿಂದ ಸಾಗಿದೆ.

https://www.youtube.com/watch?v=Rp6sPCZtX1k

Next Story

RELATED STORIES