Top

'ಈ ಬಾರಿ ಲೋಕಸಭಾ ಇಲೆಕ್ಷನ್‌ಗೆ ನಾನು ನಿಲ್ಲುವುದಿಲ್ಲ'

ಈ ಬಾರಿ ಲೋಕಸಭಾ ಇಲೆಕ್ಷನ್‌ಗೆ ನಾನು ನಿಲ್ಲುವುದಿಲ್ಲ
X

ಬೆಂಗಳೂರು: ಈ ಬಾರಿ ಎಂಪಿ ಇಲೆಕ್ಷನ್‌ಗೆ ನಾನು ನಿಲ್ಲುವುದಿಲ್ಲವೆಂದು ಮಾಜಿ ಸಚಿವ ಚೆಲುವರಾಯಸ್ವಾಮಿ ಸ್ಪಷ್ಟನೆ ನೀಡಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಜೊತೆ ಮಾತನಾಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಚೆಲುವರಾಯಸ್ವಾಮಿ, ಲೋಕಸಭೆ ಇಲೆಕ್ಷನ್‌ಗೆ ನಾನು ಸ್ಪರ್ಧಿಸಲ್ಲ, ಅಭ್ಯರ್ಥಿಯೂ ಆಗಲ್ಲ. ಪಕ್ಷ ಯಾರಿಗೆ ಟಿಕೇಟ್ ನೀಡುತ್ತೆ ಅವರ ಪರ ಕೆಲಸ ಮಾಡುತ್ತೇನೆ ಎಂದಿದ್ದಾರೆ. ಅಲ್ಲದೇ ಅಭ್ಯರ್ಥಿ ಆಯ್ಕೆ ಬಗ್ಗೆ ನಾಯಕರು ಚರ್ಚೆ ಮಾಡುತ್ತಾರೆ. ಸಿದ್ದರಾಮಯ್ಯ,ಪರಂ,ವೇಣುಗೋಪಾಲ್ ಎಲ್ಲರೂ ಇದ್ದಾರೆ. ಅವರು ಎಲ್ಲವನ್ನೂ ಡಿಸೈಡ್ ಮಾಡ್ತಾರೆ ಎಂದು ಹೇಳಿದ್ದಾರೆ.

ಇನ್ನು ಸಮ್ಮಿಶ್ರ ಸರ್ಕಾರ ಪತನವಾಗುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಚೆಲುವರಾಯಸ್ವಾಮಿ, ಸಮ್ಮಿಶ್ರ ಸರ್ಕಾರ ಮುಂದುವರಿಯಲಿದೆ. ಡಿಕೆಶಿ, ಪರಮೇಶ್ವರ್ ಹೇಳಿದ್ದಾರೆ ಅಂದರೆ ಮುಗೀತು. ಸರ್ಕಾರಕ್ಕೆ ಯಾವುದೇ ತೊಂದರೆಯಿಲ್ಲ ಎಂದು ಹೇಳಿದರು.

ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಏಕಾಂಗಿಯೆಂಬ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿದ ಚೆಲುವರಾಯಸ್ವಾಮಿ, ಅವರನ್ನ ಯಾರೂ ಏಕಾಂಗಿ ಮಾಡೋಕ್ಕೆ ಸಾಧ್ಯವಿಲ್ಲ. ಅವರಿಗೆ ಅವರದ್ದೇ ಆದ ಲೀಡರ್‌ಶಿಪ್‌ ಇದೆ. ಜಾತಿರಾಜಕಾರಣ ಬಂದು ಚುನಾವಣೆ ರಿಸಲ್ಟ್ ಉಲ್ಟಾ ಆಗಿದೆ. ಯಾರೂ ಅವರ ನಾಯಕತ್ವ ಪ್ರಶ್ನೆ ಮಾಡೋಕೆ ಆಗಲ್ಲವೆಂದು ಹೇಳಿಕೆ ನೀಡಿದ್ದಾರೆ.

Next Story

RELATED STORIES