Top

ರಾಕಿಂಗ್ ಸ್ಟಾರ್ ಯಶ್‌ ಚಿತ್ರಕ್ಕೆ ಅರ್ಜುನ್ ಜನ್ಯ ಝೇಂಕಾರ..!

ರಾಕಿಂಗ್ ಸ್ಟಾರ್ ಯಶ್‌ ಚಿತ್ರಕ್ಕೆ ಅರ್ಜುನ್ ಜನ್ಯ ಝೇಂಕಾರ..!
X

ರಾಕಿಂಗ್ ಸ್ಟಾರ್ ಯಶ್, ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ.. ಈ ಇಬ್ಬರು ಸ್ಯಾಂಡಲ್​ವುಡ್​​ನಲ್ಲಿ ಒಡುವ ಕುದುರೆಗಳು.. ಒಬ್ಬರು ಬಾಕ್ಸಾಫೀಸ್​​ಗೆ ಜಾಕಿ ಆದ್ರೆ ಇನ್ನೋಬ್ಬರು ಮ್ಯೂಸಿಕ್ ಲೋಕದ ರಾಕಿ.. ಈಗ ಇಬ್ಬರು ಒಂದೇ ಸಿನಿಮಾಕ್ಕಾಗಿ ಕೆಲಸ ಮಾಡ್ತಿದ್ದಾರೆ.. ಯಾವುದು ಆ ಸಿನಿಮಾ.. ಎಂಬ ಬಗ್ಗೆ ಮುಂದೆ ಓದಿ..

ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ಕಹಾನಿಗೆ ಕೈಮುಗಿದು, ಕಿರಾತಕನ ಕಡೆ ಮುಖ ಮಾಡಿನಿಂತಿದ್ದಾರೆ.. ಯಶ್ ನಟಿಸಲು ಸಜ್ಜಾಗಿರು ಮೈ ನೇಮ್ ಈಸ್ ಕಿರಾತಕ ಶುರುವಿನಿಂದಲು ಸದ್ದು ಮಾಡತ್ತಲೇ ಬಂದಿದೆ.. ಮೊನ್ನೆ ಮೊನ್ನೆ ಈ ಚಿತ್ರ ಮುಹೂರ್ತ ನೆರವೆರಿದೆ.. ಈಗ ಕಿರಾತಕ ಬಳಗಕ್ಕೆ ಸೇರ್ಪಡೆಯಾಗುತ್ತಿರುವ ಸೆಲೆಬ್ರಿಟಿಗಳ ಬಗ್ಗೆ ಸುದ್ದಿ ಸಮಾಚಾರಗಳು ಹೊರ ಬರುತ್ತಿವೆ..

ಸ್ಯಾಂಡಲ್​ವುಡ್ ಲಕ್ಕಿ ವಿನ್ನಿಂಗ್ ಪ್ರೋಡ್ಯುಸರ್ ಜಯಣ್ಣ ನಿರ್ಮಾಣದಲ್ಲಿ ಮೈ ನೇಮ್ ಈಸ್ ಕಿರತಾಕ ಮೂಡಿಬರುತ್ತಿದ್ದು, ಅನಿಲ್ ಕುಮಾರ್ ಚಿತ್ರದ ಸಾರಥ್ಯವನ್ನು ವಹಿಸಿಕೊಂಡಿದ್ದಾರೆ.. ಈಗ ಕಿರಾತಕ ಬಳಗಕ್ಕೆ ಹೊಸ ದಿಗ್ಗಜ ಟಿಕ್ನಿಶಿಯನ್ ಆ್ಯಡ್ಆಗಿದ್ದಾರೆ.. ಅವರೇ ಸ್ಯಾಂಡಲ್​ವುಡ್ ಮ್ಯೂಜಿಕಲ್ ಕಂಪೋಸರ್ ಅರ್ಜುನ್ ಜನ್ಯ..

ಈ ಮೊದಲು ಯಶ್ ನಟನೆಯ ಲಕ್ಕಿ ಸಿನಿಮಾಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ರು.. ಈಗ ಮಗದೊಮ್ಮೆ ಯಶ್ ನಟನೆಯ ಸಿನಿಮಾಕ್ಕೆ ಅರ್ಜುನ ಝೇಂಕಾರ ಮೊಳಗುತ್ತಿದೆ.. ಮತ್ತೊಂದು ಇಂಟ್ರಸ್ಟಿಂಗ್ ವಿಚಾರವೆನಪ್ಪ ಅಂದ್ರೆ ಕಿರಾತಕ ಚಿತ್ರದ ನಿರ್ದೇಶಕ ಅನಿಲ್ ಕುಮಾರ್ ಒಟ್ಟಿಗೆ ಅರ್ಜುನ್ ಜನ್ಯ ಕೆಲಸ ಮಾಡಿದ್ದಾರೆ.. ಈಗಾಗಲೇ ಇಬ್ಬರ ಕಾಂಬಿನೇಷನ್​ನಲ್ಲಿ ಮೂಡಿಬಂದ ರಾಂಬೋ_2 ಮ್ಯೂಸಿಕಲಿ ಹಿಟ್ ಆಗಿ ಶತದಿನ ಪುರೈಸಿದೆ..

ಒಟ್ಟಿನಲ್ಲಿ ಯಶ್ ಫ್ಯಾನ್ಸ್​ಗೆ ಅರ್ಜುನ್ ಜನ್ಯ ಮ್ಯೂಸಿಕ್ ಸಾರಥ್ಯ ವಹಿಸಿಕೊಂಡಿರುವುದ ಫುಲ್ ಖುಷ್ಆಗುವಂತೆ ಮಾಡಿದೆ.. ಶಿಘ್ರದಲ್ಲಿಯೇ ಮೈನೇಮ್ ಈಸ್ ಕಿರಾತಕ ಸಿನಿಮಾ ಶೂಟಿಂಗ್ ಪ್ರಾರಂಭವಾಗಲಿದ್ದು 2019ಕ್ಕೆ ಪ್ರೇಕ್ಷಕ ಮುಂದೆ ಯಶ್ ಎರಡನೇ ಬಾರಿಗೆ ಕಿರಾತಕನಾಗಿ ಎಂಟ್ರಿಕೊಡೋದು ಪಕ್ಕಾ...

ವರದಿ : ಶ್ರೀಧರ್ ಶಿವಮೊಗ್ಗ, ಎಂಟರ್​​ಟೈನ್ಮೆಂಟ್ ಬ್ಯುರೋ TV5

Next Story

RELATED STORIES