Top

'ಸಮ್ಮಿಶ್ರ ಸರ್ಕಾರ ಬಿದ್ದರೆ ಅದಕ್ಕೆ ರೇವಣ್ಣ ಕಾರಣ'

ಸಮ್ಮಿಶ್ರ ಸರ್ಕಾರ ಬಿದ್ದರೆ ಅದಕ್ಕೆ ರೇವಣ್ಣ ಕಾರಣ
X

ಹಾಸನ: ಹಾಸನದಲ್ಲಿ ಮಾಜಿ ಸಚಿವ ಎ.ಮಂಜು ಸ್ಪೋಟಕ ಹೇಳಿಕೆಯೊಂದನ್ನ ನೀಡಿದ್ದು, ಸಮ್ಮಿಶ್ರ ಸರ್ಕಾರ ಬಿದ್ದರೆ ಲೋಕೋಪಯೋಗಿ ಸಚಿವ ರೇವಣ್ಣನೇ ಕಾರಣ, ಸಿಎಂ ಕುಮಾರಸ್ವಾಮಿಯವರೇ ಅವರಿಗೆ ಬುದ್ಧಿ ಹೇಳಬೇಕು ಎಂದು ಹೇಳಿದ್ದಾರೆ.

ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬಿಸಿಲೆ ಘಾಡ್ನಲ್ಲಿ ಮಾತನಾಡಿದ ಎ.ಮಂಜು, ಹಾಸನದಲ್ಲಿ ದ್ವೇಷ ರಾಜಕಾರಣ ನಡೆಯುತ್ತಿದೆ. ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ನಶಿಸಿಹೋಗುತ್ತಿದ್ದಾರೆ.

ಮುಂಬರುವ ಲೋಕಸಬೆ ಚುನಾವಣೆಯಲ್ಲಿ ನಮ್ಮ ಸಪೋರ್ಟ್ ಬೇಡವಾ? ದೇವೇಗೌಡರು ಹಾಸನದಿಂದ ಚುನಾವಣೆಗೆ ಸ್ಪರ್ಧಿಸಿದರೇ ನಮ್ಮ ಅಭ್ಯಂತರವಿಲ್ಲ. ಆದರೆ ಮಂಡ್ಯವನ್ನು ಬಿಟ್ಟು ಕೋಡಬೇಕು. ಜೆಡಿಎಸ್‌ನವರು ಹೇಳಿಕೊಂಡಂತೆ ನಡೆದುಕೊಂಡಿಲ್ಲ.ಎರಡೂ ಕಡೆ ಕೊಡುವುದಕ್ಕೆ ಆಗುವುದಿಲ್ಲ ಎಂದು ಹೇಳಿದ್ದಾರೆ.

ಅಲ್ಲದೇ ಸಮ್ಮಿಶ್ರ ಸರ್ಕಾರ ಬೀಳುವ ಸೂಚನೆ ನೀಡಿದ ಎ.ಮಂಜು, ಸಿದ್ದರಾಮಯ್ಯ ಮತ್ತೆ ಸಿಎಂ ಆಗೋದ್ರಲ್ಲಿ ತಪ್ಪೇನು..? ಎಂದು ಪ್ರಶ್ನಿಸುವ ಮೂಲಕ ಸಿದ್ದರಾಮಯ್ಯರವನ್ನು ಸಮರ್ಥಿಸಿಕೊಂಡರು.

https://www.youtube.com/watch?v=Ku80jweCKRI

Next Story

RELATED STORIES