Top

ಹಿರಿಯ ನಾಯಕರ ವಿರುದ್ಧ ತಿರುಗಿಬಿದ್ದ ಕಾಂಗ್ರೆಸ್‌ನ ತ್ರಿಮೂರ್ತಿಗಳು

ಹಿರಿಯ ನಾಯಕರ ವಿರುದ್ಧ ತಿರುಗಿಬಿದ್ದ ಕಾಂಗ್ರೆಸ್‌ನ ತ್ರಿಮೂರ್ತಿಗಳು
X

ಬೆಂಗಳೂರು : ರಾಜ್ಯ ಕಾಂಗ್ರೆಸ್ನಲ್ಲಿ ಮತ್ತೆ ಅಸಮಾಧಾನದ ಹೊಗೆ ಬುಗಿಲೆದ್ದಿದೆ.. ಪಕ್ಷದ ಹಿರಿಯ ನಾಯಕರ ವಿರುದ್ಧ ಬೆಂಗಳೂರು ಶಾಸಕರೇ ಬುಸುಗುಟ್ಟ ತೊಡಗಿದ್ದಾರೆ.. ಸಮ್ಮಿಶ್ರ ಸರ್ಕಾರದಲ್ಲಿ ನಮ್ಮನ್ನ ಸರಿಯಾಗಿ ಪರಿಗಣಿಸುತ್ತಿಲ್ಲವೆಂದು ಡಿಸಿಎಂ ಪರಂ ಹಾಗೂ ಡಿಕೆಶಿ ವಿರುದ್ಧವೇ ತಿರುಗಿಬಿದ್ದಿದ್ದಾರೆ.. ಹಾಗಾದ್ರೆ ಬೆಂಗಳೂರು ಶಾಸಕರ ಅಸಮಾಧಾನ ಪಕ್ಷಕ್ಕೆ ಮುಳುವಾಗುತ್ತಾ.. ಬಿಬಿಎಂಪಿಯಲ್ಲಿರುವ ಜೆಡಿಎಸ್ ಕಾಂಗ್ರೆಸ್ ಮೈತ್ರಿಗೆ ತೊಡಕಾಗುತ್ತಾ... ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಕ್ಕೆ ಈ ಸ್ಟೋರಿ ಓದಿ..

ರಾಜ್ಯ ಕಾಂಗ್ರೆಸ್ ನಲ್ಲಿ ಮತ್ತೆ ಕೋಲ್ಡ್ ವಾರ್

ಬಿಬಿಎಂಪಿ ಚುನಾವಣೆಯಲ್ಲಿ ಕೈಕೊಡೋಕೆ ರೆಡಿಯಾಗ್ತಿದೆ ಸ್ಕೆಚ್

ಹಿಂದಿನ ಸಿದ್ದರಾಮಯ್ಯ ಸರ್ಕಾರವಿದ್ದಾಗ ನಮ್ಮ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ಸಿಗ್ತಿತ್ತು. ಆದ್ರೆ ಇದೀಗ ಸಮ್ಮಿಶ್ರ ಸರ್ಕಾರದಲ್ಲಿ ನಮ್ಮನ್ನ ಪರಿಗಣಿಸ್ತಿಲ್ಲ ಅಂತ ತ್ರಿಮೂರ್ತಿ ಶಾಸಕರು ರೊಚ್ಚಿಗೆದ್ದಿದ್ದಾರೆ. ಅದ್ರಲ್ಲು ಪಕ್ಷದ ಹಿರಿಯ ನಾಯಕರಾದ ಡಿಸಿಎಂ ಪರಮೇಶ್ವರ್ ಬೆಂಗಳೂರು ಅಭಿವೃದ್ಧಿ ಸಚಿವರಾಗಿದ್ದರೂ ಅರ್ಧದಷ್ಟು ಅನುದಾನವನ್ನ ನಮ್ಮ ಕ್ಷೇತ್ರಗಳುಗೆ ಕೊಡಿಸುವ ಕೆಲಸ ಮಾಡ್ತಿಲ್ಲ.. ಅಲ್ಲದೆ ಹಿರಿಯ ಸಚಿವ ಡಿಕೆಶಿ ಕೂಡ ಇದರ ಬಗ್ಗೆ ಚಕಾರವೆತ್ತುತ್ತಿಲ್ಲ ಅಂತ ಅಸಮಾಧಾನಗೊಂಡಿದ್ದಾರೆನ್ನಲಾಗ್ತಿದೆ.

ಬಿಬಿಎಂಪಿ ಮೇಯರ್ ಚುನಾವಣೆಯಲ್ಲಿ ಭರ್ಜರಿ ಸ್ಕೆಚ್

ಕಾಂಗ್ರೆಸ್ ಶಾಸಕರೇ ಬಿಜೆಪಿಗೆ ನೀಡ್ತಿದ್ದಾರಂತೆ ಬಿಗ್ ಆಫರ್?

ಇದೇ ಸೆಪ್ಟಂಬರ್ ಮಾಸಾಂತ್ಯದಲ್ಲಿ ಬಿಬಿಎಂಪಿ ಮೇಯರ್ ಚುನಾವಣೆ ನಡೆಯಲಿದೆ. ಹೀಗಾಗಿ ಬೆಂಗಳೂರು ಕೈ ಶಾಸಕರಾದ ಎಸ್.ಟಿ.ಸೋಮಶೇಖರ್, ಮುನಿರತ್ನಂ ಹಾಗೂ ಭೈರತಿ ಬಸವರಾಜು ಮೇಯರ್ ಚುನಾವಣೆಯಲ್ಲಿ ಕೈಕೊಡೋಕೆ ಸಿದ್ಧರಾಗ್ತಿದ್ದಾರೆಂಬ ಮಾಹಿತಿ ಹರಿದಾಡ್ತಿದೆ. ಇವರ ಜೊತೆ ಎಂಟಿಬಿ ನಾಗರಾಜ್ ಹಾಗೂ ಭೈರತಿ ಸುರೇಶ್ ಕೂಡ ಸಾಥ್ ನೀಡ್ತಿದ್ದಾರೆನ್ನಲಾಗ್ತಿದೆ.

ಈಗಾಗಲೇ ಬಿಜೆಪಿ ನಾಯಕರ ಜೊತೆ ಚುನಾವಣೆಯಲ್ಲಿ ಸಹಕರಿಸುವ ಬಗ್ಗೆ ಮಾತುಕತೆ ನಡೆಸಿದ್ದಾರಂತೆ. ಮೇಯರ್ ಚುನಾವಣೆ ವೇಳೆ ಬಿಜೆಪಿ ಬೆಂಬಲಿಸುವ ಮೂಲಕ ಪರಂಗೆ ಟಾಂಗ್ ಕೊಡೋಕೆ ವೇದಿಕೆ ಸಿದ್ಧಮಾಡಿಕೊಳ್ತಿದ್ದಾರೆಂಬ ಮಾಹಿತಿ ಸಿಕ್ಕಿದೆ.

ಮೇಯರ್ ಚುನಾವಣೆಯಲ್ಲಿ ಬಹುಮತಕ್ಕೆ ಬೀಳುತ್ತಾ ಹೊಡೆತ

ಬಹುಮತ ತಪ್ಪಿಸೋಕೆ ಸ್ಕೆಚ್ ಸಿದ್ಧವಾಗ್ತಿದ್ಯಾ?

ಒಟ್ಟು ಬಿಬಿಎಂಪಿಯಲ್ಲಿ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಹಾಗೂ ಪಕ್ಷೇತರ ಸೇರಿ 198 ಪಾಲಿಕೆ ಸದಸ್ಯರಿದ್ದಾರೆ. ಬೆಂಗಳೂರಿನಲ್ಲಿ ವಾಸಿಸುವ ಸಂಸದರು, ರಾಜ್ಯಸಭಾ ಸದಸ್ಯರು, ಶಾಸಕರು, ಎಂಎಲ್ಸಿಗಳು ಸೇರಿ 266 ಮತಗಳು ಇವೆ. ಬಹುಮತಕ್ಕೆ 134 ಮತಗಳ ಅಗತ್ಯವಿದೆ. ಪ್ರಸ್ತುತ ಕಾಂಗ್ರೆಸ್ ನ 76, ಜೆಡಿಎಸ್ ನ 14 ಹಾಗೂ ಪಕ್ಷೇತರ 7 ಮತಗಳು ಮತ್ತು ಸಂಸದರು, ಶಾಸಕರು, ಎಂಎಲ್ ಸಿಗಳ ಮತಗಳು ಸೇರಿ 139 ಮತಗಳಿಂದ ಕೈ ಜೆಡಿಎಸ್ ಮೈತ್ರಿ ಬಿಬಿಎಂಪಿ ಅಧಿಕಾರ ಹಿಡಿದಿದೆ.

ಪ್ರಸ್ತುತ 101 ಸದಸ್ಯರು ಸೇರಿ ಬಿಜೆಪಿ 126 ಮತಗಳನ್ನಹೊಂದಿದೆ. ಬೆಂಗಳೂರು ಕೈ ಶಾಸಕರು ಕೆಲವು ಕೈ ಪಾಲಿಕೆ ಸದಸ್ಯರು ಬಿಜೆಪಿಗೆ ಬೆಂಬಲಿಸಿದ್ರೆ ಈಸಿಯಾಗಿ ಬಿಜೆಪಿ ಅಧಿಕಾರಕ್ಕೆ ಬರಬಹುದು. ಸೋ ಈ ದಿಸೆಯಲ್ಲಿ ಕೈ ಬೆಂಗಳೂರು ಶಾಸಕರು ಪರಂಗೆ ಟಾಂಗ್ ಕೊಡೋಕೆ ಹೊರಟಿದ್ದಾರೆ.

ಬಿಬಿಎಂಪಿಕೈತಪ್ಪಿದರೆ ಪರಂಗೆ ಸಾಕಷ್ಟು ಹೊಡೆತಬೀಳಲಿದೆ. ಯಾಕಂದ್ರೆ ಬೆಂಗಳೂರ ಡೆವಲಪ್ ಮೆಂಟ್ ಹೊಣೆ ಅವರೇ ಹೊತ್ತಿರೋದ್ರಿಂದ ಸಾಕಷ್ಟು ಮುಜುಗರಕ್ಕೂ ಒಳಗಾಗ್ತಾರೆನ್ನಲಾಗ್ತಿದೆ. ಹೀಗಾಗಿಯೇ ಈಚಿತಾವಣೆ ನಡೆದಿದೆ ಅನ್ನೋ ಮಾತುಗಳು ಕೇಳಿಬರ್ತಿವೆ..

ಒಟ್ನಲ್ಲಿ ತಮ್ಮನ್ನ ಪರಿಗಣಿಸುತ್ತಿಲ್ಲವೆಂಬ ಅಸಮಾಧಾನದಿಂದಾಗಿ ಬೆಂಗಳೂರ ಶಾಸಕರು ಮೇಯರ್ ಚುನಾವಣೆಯಲ್ಲಿ ಕೈಕೊಡೋಕೆ ರೆಡಿಯಾಗಿದ್ದಾರೆಂಬ ಮಾತುಗಳು ಕೇಳಿಬರ್ತಿವೆ..ಆದ್ರೆ ಎಷ್ಟರ ಮಟ್ಟಿಗೆ ಇದು ಸಕ್ಸಸ್ ಆಗುತ್ತೆ ಅನ್ನೋದನ್ನ ಮಾತ್ರ ಕಾದುನೋಡ್ಬೇಕಿದೆ..

ವರದಿ : ಶಿವಕುಮಾರ್ ಜೋಹಳ್ಳಿ, ಪೊಲಿಟಿಕಲ್ ಬ್ಯೂರೋ, ಟಿವಿ5 ಬೆಂಗಳೂರು

Next Story

RELATED STORIES