ಗೇರು ಹಣ್ಣು ತಿಂದ್ರೆ ಆರೋಗ್ಯಕ್ಕೆ ಎಷ್ಟು ಲಾಭ ಗೊತ್ತಾ.?

ನಗರಗಳಲ್ಲಿ ವಾಸಿಸುತ್ತಿರುವವರಿಗೆ ಗೇರು ಹಣ್ಣಿನ ಬಗ್ಗೆ ಅಷ್ಟಾಗಿ ಗೊತ್ತಿರಲು ಸಾಧ್ಯವಿಲ್ಲ. ಆದರೆ ಹಳ್ಳಿ, ಮಲೆನಾಡಿನಲ್ಲಿ ವಾಸಿವಿರುವ ಪ್ರತಿಯೊಬ್ಬರಿಗೂ ಗೇರುಹಣ್ಣಿನ ಬಗ್ಗೆ ಚೆನ್ನಾಗಿಯೇ ತಿಳಿದಿರುತ್ತದೆ.

ಈ ಹಣ್ಣನ್ನು ಅಷ್ಟೇ ಇಷ್ಟ ಪಟ್ಟು ತಿನ್ನುತ್ತಾರೆ. ನಿಮಗೆ ಗೊತ್ತಾ ಗೇರು ಹಣ್ಣು ತಿನ್ನುವುದರಿಂದ ಎಷ್ಟೊಂದು ಲಾಭ ಇದೆ. ವರ್ಷಕ್ಕೆ ಒಮ್ಮೆ ಸಿಗುವ ಈ ಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಗೇರು ಹಣ್ಣಿನ್ನು ತಿನ್ನೋದ್ರಿಂದ ಆಗುವ ಪ್ರಯೋಜನಗಳನ್ನು ಈ ಕೆಳಗಿನಂತೆ ಪಟ್ಟಿ ಮಾಡಬಹುದು.

  1. ದಿನಕ್ಕೊಂದು ಗೇರು ಹಣ್ಣು ತಿಂದರೆ ಹೊಟ್ಟೆಯಲ್ಲಿನ ಜಂತು ಹುಳುಗಳು ಸಾಯುತ್ತವೆ.
  2. ಕಿತ್ತಳೆ ಹಣ್ಣಿನ ಜ್ಯೂಸ್‌ನಿಂದ ಸಿಗುವ ಸಿ ವಿಟಮಿನ್‌ನ ಶೇ. 5ರಷ್ಟು ವಿಟಮಿನ್‌ ಸಿ ಗೇರು ಹಣ್ಣಿನಿಂದ ಸಿಗುತ್ತದೆ.
  3. ಗೇರು ಹಣ್ಣಿನಲ್ಲಿ ವಿಟಮಿನ್‌ ಬಿ1, ಬಿ3, ಕ್ಯಾಲ್ಷಿಯಂ, ಬೀಟಾ ಕ್ಯಾರೋಟಿನ್‌ ಹೇಳವಾಗಿದ್ದು, ಇದರ ರಸವನ್ನು ವಾರಕ್ಕೆ ಮೂರು ಬಾರಿ ಕುಡಿದರೆ ತುಂಬಾ ಒಳ್ಳೆಯದು.
  4. ಈ ಹಣ್ಣಿನಲ್ಲಿ ಗಾಯಗಳನ್ನು ಅತಿ ಬೇಗನೇ ವಾಸಿ ಮಾಡುವ ಗುಣವಿದೆ.
  5. ಬಾಯಿ ಹುಣ್ಣು, ಹಲ್ಲಿನ ಹುಳುಕುಗಳನ್ನು ನಿವಾರಣೆ ಮಾಡುವ ಅನಾಕಾರ್ಡಿಕ್ ಆಮ್ಲ ಇದರಲ್ಲಿದೆ.
  6. ಗೇರು ಹಣ್ಣಿನಲ್ಲಿ ಕ್ಯಾಲ್ಸಿಯಂ, ಮೆಗ್ನೇಷಿಯಂ ಮತ್ತು ಪೊಟ್ಯಾಶಿಯಂ ಅಂಶವಿದೆ. ಇದು ಮೂಳೆ ಸವೆತವನ್ನು ನಿವಾರಣೆ ಮಾಡುತ್ತದೆ.
  7. ಗೇರು ಹಣ್ಣನ್ನು ಸಾಮಾನ್ಯವಾಗಿ ವೈನ್ ತಯಾರಿಕೆಯಲ್ಲಿ ಬಳಕೆ ಮಾಡಲಾಗುತ್ತದೆ. ಇದು ಆರೋಗ್ಯಕ್ಕೆ ಉತ್ತಮವಾಗಿದೆ.
  8. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸಿ, ಜೀರ್ಣಕ್ರಿಯೆ ಚೆನ್ನಾಗಿ ಆಗುವಂತೆ ಮಾಡುತ್ತದೆ.
  9. ದೇಹಕ್ಕೆ ಅಗತ್ಯವಾಗಿ ಬೇಕಾದ ಕಬ್ಬಿನಾಂಶ ಗೇರು ಹಣ್ಣಿನಲ್ಲಿದೆ. ಇದರಿಂದ ಕೆಂಪು ರಕ್ತ ಕಣಗಳು ದೇಹದಲ್ಲಿ ಹೆಚ್ಚಾಗುತ್ತವೆ.
  10. ದೇಹದಲ್ಲಿ ಸಕ್ಕರೆ ಅಂಶ ಕಡಿಮೆ ಮಾಡಲು ಗೇರು ಹಣ್ಣು ಸಹಾಯ ಮಾಡುತ್ತದೆ.

ಈ ಮೊದಲಾದ ಉಪಯೋಗ ಇರುವ ಗೇರುಹಣ್ಣನ್ನು ತಿನ್ನಿ. ಈ ಮೂಲಕ ಉತ್ತಮ ಆರೋಗ್ಯ ನಿಮ್ಮದಾಗುತ್ತದೆ.