ನೇಪಾಳದ ರೆಸ್ಟೋರೆಂಟ್​ನಲ್ಲಿ ರೋಬೋಟ್​ಗಳಿಂದ ಸಪ್ಲೈ!

ನೇಪಾಳದ ರಾಜಧಾನಿ ಹೊಸದಾಗಿ ರೆಸ್ಟೋರೆಂಟ್​ ಆರಂಭವಾಗಿದೆ. ನೀವು ಅಲ್ಲಿಗೆ ಹೋದರೆ ನಿಮ್ಮ ಬಳಿ ಮನುಷ್ಯರು ಸುಳಿಯೋದೇ ಇಲ್ಲ. ಏಕೆಂದರೆ ನಿಮ್ಮ ಬೇಕು-ಬೇಡಗಳನ್ನು ಕೇಳಲು ರೋಬೋಟ್​ಗಳು ಬರುತ್ತದೆ.

ಹೌದು, ಕಠ್ಮಂಡುವಿನಲ್ಲಿ ಆರಂಭಗೊಂಡ ಈ ರೆಸ್ಟೋರೆಂಟ್​ಗೆ ಹೋದರೆ ರೋಬೋಟ್​ಗಳು ಸಪ್ಲೈ ಮಾಡುತ್ತವೆ. ಫುಡ್ ಮೀಟ್ಸ್ ಟೆಕ್ನಾಲಜಿ (ಆಹಾರದ ಜೊತೆ ತಂತ್ರಜ್ಞಾನ) ಎಂದು ಬೋರ್ಡ್ ಹಾಕಲಾಗಿದೆ.

ನವ್ಲೊ ನೇಪಾಳ್ ಹೆಸರಿನ ಈ ರೆಸ್ಟೋರೆಂಟ್ ನಲ್ಲಿ 5 ರೋಬೋಟ್​ಗಳು ಇವೆ. ಎರಡು ಗಿಂಜರ್ ಮತ್ತು ಮೂರು ರೋಬೋಟ್​ಗಳಿಗೆ ಫೆರ್ರಿ ಎಂದು ಹೆಸರಿಡಲಾಗಿದೆ.

ಪಾಲಿಯಾ ಸಂಸ್ಥೆ ಈ ರೋಬೋಟ್​ಗಳನ್ನು ಅಭಿವೃದ್ಧಿಪಡಿಸಿದೆ. 6 ಯುವ ಇಂಜಿನಿಯರ್​ಗಳು ಸೇರಿ ಆರಂಭಿಸಿದ ಈ ಸಂಸ್ಥೆ ಇದಾಗಿದ್ದು, ಯುವಕರ ತಂಡ ಈ ರೋಬೋಟ್​ಗಳನ್ನು ಅಭಿವೃದ್ಧಿಪಡಿಸಿದೆ.

ALSO READ  ತಲೆಬುರುಡೆಯಲ್ಲಿ ಚಾಕು ಇಟ್ಟುಕೊಂಡೇ ವಾಹನ ಚಲಾಯಿಸಿದ ಚಾಲಕ

ರೆಸ್ಟೋರೆಂಟ್​ನಲ್ಲಿ ಗ್ರಾಹಕರ ಸೇವೆಗೆ ರೋಬೋಟ್​ಗಳನ್ನು ಬಳಸಿದ ಏಷ್ಯಾದ ಮೊದಲ ರೆಸ್ಟೋರೆಂಟ್ ಇದಾಗಿದೆ. ಇದು ಅತ್ಯಂತ ಸ್ನೇಹಮಯಿ ಆಗಿದ್ದು, ಉನ್ನತ ತಂತ್ರಜ್ಞಾನ ಆಧಾರಿತವಾಗಿದೆ ಎಂದು ಪಾಲಿಯಾ ಸಂಸ್ಥೆ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಭಿನಯ್ ರಾವುತ್ ಹೇಳಿದ್ದಾರೆ.

ಈ ರೆಸ್ಟೋರೆಂಟ್​ನ ಟೇಬಲ್ ಕೂಡ ಆಧುನಿಕ ತಂತ್ರಜ್ಞಾನ ಬಳಸಲಾಗಿದ್ದು, ಟೇಬಲ್ ಮೇಲೆ ಮೆನು ಕಾಣಿಸಿಕೊಳ್ಳುತ್ತದೆ. ನೀವು ಆಯ್ಕೆ ಮಾಡಿ ಬಟನ್ ಒತ್ತಿದರೆ ಅದು ನೇರವಾಗಿ ಅಡುಗೆ ಮನೆಗೆ ಸಂದೇಶ ತಲುಪುತ್ತದೆ. ಅಡುಗೆ ಸಿದ್ಧಗೊಂಡ ಕೂಡಲೇ ರೋಬೋಟ್​ಗಳು ಗ್ರಾಹಕರ ಟೇಬಲ್​ಗೆ ತಲುಪಿಸುತ್ತದೆ.