Top

ನವಾಬನ ಕಥೆ ಹೇಳೋಕ್ಕೆ ಬರ್ತಿದ್ದಾರೆ ಸ್ಟಾರ್ ಡೈರೆಕ್ಟರ್ 

ನವಾಬನ ಕಥೆ ಹೇಳೋಕ್ಕೆ ಬರ್ತಿದ್ದಾರೆ ಸ್ಟಾರ್ ಡೈರೆಕ್ಟರ್ 
X

ಬಹುಭಾಷಾ ನಿರ್ದೇಶಕ ಮಣಿರತ್ನಂ ಮತ್ತೆ ಡೈರೆಕ್ಟರ್ ಕ್ಯಾಪ್ ತೊಟ್ಟು ಹಳೇ ಟ್ರ್ಯಾಕ್​ಗೆ ಮರಳಿದ್ದಾರೆ. ಸದ್ಯ ನವಾಬ್ ಅನ್ನೋ ದ್ವಿಭಾಷಾ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿರೋ ಮಣಿರತ್ನಂ, ಅದನ್ನ ಮುಂದಿನ ತಿಂಗಳು ತೆರೆಗೆ ತರೋ ಪ್ರಯತ್ನದಲ್ಲಿದ್ದಾರೆ.

ನವಾಬ್ ಅನ್ನೋ ಮಾಸ್ ಟೈಟಲ್ ಇರೋ ಈ ಸಿನಿಮಾ ಆ್ಯಕ್ಷನ್ ಕ್ರೈಂ ಥ್ರಿಲ್ಲರ್ ಕಥಾನಕ ಹೊಂದಿದ್ದು, ಮಣಿರತ್ನಂ ಕರಿಯರ್​ನಲ್ಲಿ ಇರುವರ್ ನಂತ್ರ ಮತ್ತೊಂದು ಬಿಗ್ಗೆಸ್ಟ್ ಮಲ್ಟಿಸ್ಟಾರರ್ ಸಿನಿಮಾ ಅನ್ನಿಸಿಕೊಂಡಿದೆ.

ತೆಲುಗು ಮತ್ತು ತಮಿಳು ಎರಡೂ ಭಾಷೆಯಲ್ಲಿ ಒಟ್ಟೊಟ್ಟಿಗೆ ತಯಾರಾಗ್ತಿರೋ ನವಾಬ್ ಸದ್ಯ ಟ್ರೈಲರ್​ನಿಂದ ಎಲ್ಲಿಲ್ಲದ ಕುತೂಹಲ ಮೂಡಿಸಿದೆ.

ಪ್ರಕಾಶ್ ರೈ, ಅರವಿಂದ್ ಸ್ವಾಮಿ, ವಿಜಯ್ ಸೇತುಪತಿ, ಸಿಲಂಬರಸನ್, ಅರುಣ್ ವಿಜಯ್, ಜ್ಯೋತಿಕಾ ಹೀಗೆ ದಿಗ್ಗಜ ಕಲಾವಿದರಿರೋ ಈ ಸಿನಿಮಾದಲ್ಲಿ ನೋಡುಗರಿಗೆ ಮಸ್ತ್ ಎಂಟ್ರಟೈನ್ ಸಿಗಲಿದೆ. ಇನ್ನು ಇದು ಮಣಿರತ್ನಂರ ಪೊಲಿಟಿಕಲ್ ಥ್ರಿಲ್ಲರ್ ಇರುವರ್​ ಚಿತ್ರದ ನಂತ್ರ ಮತ್ತೊಂದು ಮೆಗಾ ಮಲ್ಟಿಸ್ಟಾರ್ ಸಿನಿಮಾ.

ಭೂಪತಿ ರೆಡ್ಡಿ ಪಾತ್ರದಲ್ಲಿ ಕಾಣಿಸಿಕೊಂಡಿರೋ ಪ್ರಕಾಶ್ ರೈರದ್ದು ಬಹುದೊಡ್ಡ ಕುಟುಂಬ. ಮೂವರು ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳಿಂದ ತುಂಬಿದ ತುಂಬು ಕುಟುಂಬ ಅನಿಸಿಕೊಳ್ಳೋ ಅವಿಭಕ್ತ ಕುಟುಂಬ, ಅದ್ರ ಮಧ್ಯೆ ಎಂಟ್ರಿ ಆಗೋ ಕ್ರೈಂ ಹಾಗೂ ಅದನ್ನ ಬಗೆಹರಿಸೋ ಪರಿ ಹುಬ್ಬೇರಿಸುವಂತಿದೆ.

ಕಳೆದ ವರ್ಷ ಕಾಟ್ರು ವೆಲಿಯಿದೈ ಸಿನಿಮಾ ಮಾಡಿ, ಅದಕ್ಕೆ ಎರಡು ನ್ಯಾಷನಲ್ ಅವಾರ್ಡ್ಸ್ ಪಡೆದ ಮಣಿರತ್ನಂ, ಈ ಬಾರಿಯೂ ಅಂಥದ್ದೇ ಟಾಕ್ ಕ್ರಿಯೇಟ್ ಮಾಡೋ ಸಿನಿಮಾ ಮಾಡಿದ್ದಾರೆ. ಸದ್ಯ ಟ್ರೈಲರ್ ಝಲಕ್​ನಿಂದ ಸೌತ್ ಸಿನಿದುನಿಯಾ ಗಮನ ಸೆಳೆದಿರೋ ಸ್ಟಾರ್ ಡೈರೆಕ್ಟರ್, ಸೆಪ್ಟೆಂಬರ್ 28ಕ್ಕೆ ಸಿನಿಮಾನ ವರ್ಲ್ಡ್​ ವೈಡ್ ತೆರೆಗೆ ತರ್ತಿದ್ದಾರೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಎಂಟ್ರಟೈನ್ಮೆಂಟ್ ಬ್ಯೂರೋ, ಟಿವಿ5

Next Story

RELATED STORIES