Top

ಟಿ 20ಯಲ್ಲಿ ಹೊಸ ದಾಖಲೆ ಬರೆದ ಪಾಕ್ ವೇಗಿ ಮೊಹ್ಮದ್ ಇರ್ಫಾನ್

ಟಿ 20ಯಲ್ಲಿ ಹೊಸ ದಾಖಲೆ ಬರೆದ ಪಾಕ್ ವೇಗಿ ಮೊಹ್ಮದ್ ಇರ್ಫಾನ್
X

ಕಿಂಗ್ಸ್ ಟನ್: ಪಾಕಿಸ್ತಾನದ ಎಡಗೈ ವೇಗಿ ಮೊಹ್ಮದ್ ಇರ್ಫಾನ್ ಕೆರೆಬಿಯನ್ ಲೀಗ್‍ನಲ್ಲಿ ಸೂಪರ್ ಸ್ಪೆಲ್ ಮಾಡಿ ಟಿ20 ಕ್ರಿಕೆಟ್ ಇತಿಹಾಸದಲ್ಲೆ ಹೊಸ ದಾಖಲೆ ಬರೆದಿದ್ದಾರೆ.

ಕೆರೆಬಿಯನ್ ಪ್ರೀಮಿಯರ್ ಲೀಗ್‍ನಲ್ಲಿ ಬಾರ್ಬೊಡೊಸ್ ಟ್ರಿಡೆಂಟ್ಸ್ ಪರ ಆಡುತ್ತಿರುವ ಮೊಹ್ಮದ್ ಇರ್ಫಾನ್ ಸೇಂಟ್ ಕಿಟ್ಸ್ ತಂಡದ ವಿರುದ್ಧ ಸೆನ್ಸೆಶನಲ್ ಸ್ಪೆಲ್ ಮಾಡಿದ್ದಾರೆ.

ಟಿ 20 ಕ್ರಿಕೆಟ್ ಇತಿಹಾಸದಲ್ಲೆ ಮೊಹ್ಮದ್ ಇರ್ಫಾನ್ ಎಕನಾಮಿಕಲ್ ಸ್ಪೆಲ್ ಮಾಡಿದ್ದರೆ. ನಾಲ್ಕು ಓವರ್‍ಗಳನ್ನ ಮಾಡಿ ಕೇವಲ 1 ರನ್ ನೀಡಿ ಎರಡು ವಿಕೆಟ್ ಪಡೆದು 23 ಡಾಟ್ ಬಾಲ್‍ಗಳನ್ನ ಹಾಕಿ ದಾಖಲೆ ಬರೆದಿದ್ದಾರೆ.

ಏಳು ಅಡಿ ಎತ್ತರವಿರುವ ಮೊಹ್ಮದ್ ಇರ್ಫಾನ್ ತಮ್ಮ ನಾಲ್ಕು ಓವರ್‍ಗಳಲ್ಲಿ ಯಾವುದೇ ರನ್ ನೀಡದೇ 2 ವಿಕೆಟ್ ಪಡೆದು ದಾಖಲೆ ಬರೆಯಬಹುದಿತ್ತು. ಆದ್ರೆ ಮೊಹ್ಮದ್ ಇರ್ಫಾನ್ ನಾಲ್ಕನೆ ಓವರ್‍ನ ಕೊನೆಯ ಎಸೆತದಲ್ಲಿ ಒಂದು ರನ್ ಬಿಟ್ಟುಕೊಟ್ಟು ಎಡವಟ್ಟು ಮಾಡಿಕೊಂಡರು.

ಕ್ರಿಸ್ ಗೇಲ್ ಮತ್ತು ಎವಿನ್ ಲಿವೀಸ್ ವಿಕೆಟ್ ಪಡೆದು ಮೂರು ಓವರ್ ಮೇಡನ್ ಮಾಡಿ ಕೇವಲ ಒಂದು ರನ್ ಕೊಟ್ಟಿದ್ದು ಕ್ರಿಕೆಟ್ ಇತಿಹಾಸದ ದಾಖಲೆಯ ಪುಟಕ್ಕೆ ಸೇರಿತು. ಮೊಹ್ಮದ್ ಇರ್ಫಾನ್ ಆರಂಭಿಕ ಆಘಾತ ನೀಡಿದ ಹೊರತಾಗಿಯೂ ಸೇಂಟ್ ಕಿಟ್ಸ್ ತಂಡ 6 ವಿಕೆಟ್‍ಗಳ ಜಯ ಪಡೆಯಿತು.

Next Story

RELATED STORIES