Top

ಹಾಲು ಕುಡಿಯೋ ಮುನ್ನ ಈ ಸ್ಟೋರಿ ಓದಿ

ಹಾಲು ಕುಡಿಯೋ ಮುನ್ನ ಈ ಸ್ಟೋರಿ ಓದಿ
X

ಚಿಕ್ಕಮಗಳೂರು: ಹಾಲು ಕುಡಿಯುವುದರಿಂದ ಮಕ್ಕಳಲ್ಲಿ ಪೋಷ್ಟಿಕಾಂಶಗಳ ಕೊರತೆ ಕಡಿಮೆಯಾಗತ್ತೆ ಅನ್ನೋದು ಪೋಷಕರ ನಂಬಿಕೆ. ಆದ್ರೆ ಮಕ್ಕಳಿಗೆ ಹಾಲು ಕೊಡುವ ಮುನ್ನ ಈ ಸುದ್ದಿಯನ್ನ ನೀವು ಓದಲೇಬೇಕು.

ಚಿಕ್ಕಮಗಳೂರಿನ ಕೆಎಂಎಫ್‌ನಲ್ಲಿ ಹಾಲಿಗೆ ಕೆಮಿಕಲ್ ಮಿಕ್ಸ್ ಮಾಡಲಾಗುತ್ತಿದೆ ಎಂಬ ಭಯಾನಕ ಸತ್ಯ ಬಯಲಾಗಿದೆ. ಚಿಕ್ಕಮಗಳೂರು ತಾಲೂಕಿನ ನಾಲ್ಕೈದು ಸೊಸೈಟಿಗಳಿಂದ ವಿಷಕಾರಿ ಹಾಲು ಪೂರೈಕೆಯಾಗುತ್ತಿದ್ದು, ಕುರುಬರಹಳ್ಳಿ,ಮಾಚೇನಹಳ್ಳಿ ಬೆಳವಾಡಿ ಹಾಲಿನ ಸಂಘಗಳಲ್ಲಿ ಈ ಕೃತ್ಯ ಕಂಡುಬಂದಿದೆ.

ಹಾಲಿನ ಕ್ಯಾನ್ ಸಾಗಾಣೆಗೂ ಮುನ್ನ ಹಾಲಿನ ಸ್ಕೀಮ್ಡ್ ಮತ್ತು ಕೆಮಿಕಲ್ ಮಿಕ್ಸ್ ಮಾಡಲಾಗುತ್ತಿದೆ. ಅಷ್ಟೇ ಅಲ್ಲದೇ ಹಾಸನದ ಸಕಲೇಶಪುರ, ಚಿಕ್ಕಮಗಳೂರು ಬೀರೂರು ಘಟಗಳು ಕೂಡ ಈ ಜಾಲಕ್ಕೆ ಸಾಥ್ ನೀಡಿದೆ. ಈ ಬಗ್ಗೆ ಮಾರ್ಚ್‌ 20ರಂದು ಹಾಸನ ಕೆಎಂಎಫ್‌ಗೆ ಅಪರಿಚಿತರು ದೂರು ನೀಡಿದ್ದು, ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸಿದ್ದರು. ಈ ವೇಳೆ 9 ಆರೋಪಿಗಳು ಸೆರೆ ಸಿಕ್ಕಿದ್ದು, ಈ ಕಲಬೆರಕೆ ದಂಧೆಗೆ ಕೆಲ ಅಧಿಕಾರಿಗಳೂ ಕೂಡ ಸಾಥ್ ನೀಡಿದ್ದಾರೆಂಬ ಆರೋಪ ಕೇಳಿಬಂದಿದೆ.

ಕೆ.ಎಂ.ಎಫ್ ದಕ್ಷ ಅಧಿಕಾರಿ ಸೌಮ್ಯ ಮರು ತನಿಖೆಗೆ ಆದೇಶಿಸಿದ್ದು, ತನಿಖೆಯಿಂದ ವಿಷಭರಿತ ಹಾಲು ಮಿಶ್ರಣ ಪತ್ತೆಯಾಗಿದೆ. ಇನ್ನು ಈ ಬಗ್ಗೆ ಚಿಕ್ಕಮಳೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Next Story

RELATED STORIES